AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶರಾರಾ ಶರಾರಾ; ಅದೆಷ್ಟು ಛಂದ ನರ್ತಿಸಿದ್ದೀರೀ! ಮನಸೋತ ನೆಟ್ಟಿಗರು

Dance : ನಿಮ್ಮಂಥವರೊಳಗೂ ಇಂಥ ಪ್ರತಿಭೆ ಅಡಗಿದೆಯೇ? ಎಂದು ಕೆಲವರು ಅವಮಾನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ಲಿಂಗತ್ವವನ್ನು ಗೌರವಿಸಿ, ಪ್ರತಿಭೆಯನ್ನು ಪ್ರೋತ್ಸಾಹಿಸಿ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ನೋಡಿದ ನೀವು?

Viral Video: ಶರಾರಾ ಶರಾರಾ; ಅದೆಷ್ಟು ಛಂದ ನರ್ತಿಸಿದ್ದೀರೀ! ಮನಸೋತ ನೆಟ್ಟಿಗರು
ದೆಹಲಿಯ ಫರೀದಾಬಾದ್ ನಿವಾಸಿ ನೃತ್ಯಕಲಾವಿದ ಅಮಿತ್ ಶರ್ಮಾ
TV9 Web
| Edited By: |

Updated on:May 24, 2023 | 1:27 PM

Share

Sharara Sharara : ಹಳೆಯ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುವುದನ್ನು ಆಗಾಗ್ಗೆ ನೋಡುತ್ತಿರುತ್ತೀರಿ. ಕೆಲದಿನಗಳಿಂದ ‘ಮೇರೆ ಯಾರ್​ ಕೇ ಶಾದೀ ಹೈ’ ಸಿನೆಮಾದಲ್ಲಿ ಆಶಾ ಭೋಸ್ಲೆ ಹಾಡಿರುವ ’ಶರಾರಾ ಶರಾರಾ’ ಹಾಡು ಟ್ರೆಂಡಿಂಗ್​ನಲ್ಲಿದೆ. ಇದೀಗ ಇದೇ ಹಾಡಿಗೆ ಡ್ಯಾನ್ಸ್ ಮಾಡಿ ರೀಲ್ ಮಾಡಿದ್ದಾರೆ ನೃತ್ಯಕಲಾವಿದ ಅಮಿತ್ ಶರ್ಮಾ. 8 ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಬಳಕುವ ಬಳ್ಳಿಯಂತೆ ಅಮಿತ್​ ನರ್ತಿಸುವುದನ್ನು ನೀವೂ ನೋಡಬೇಕೆ? ಬನ್ನಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Amit Sharma (@amit_the_shinning_star)

ಫೀಲ್​ ದಿ ಬೀಟ್ಸ್​ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ ಅಮಿತ್​. ಆದರೆ ಸಾಕಷ್ಟು ಜನರು ತಮಗೆ ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ. ಪರಸ್ಪರ ನೆಟ್ಟಿಗರು ವಾಗ್ವಾದಕ್ಕಿಳಿದಿದ್ದಾರೆ. ಹುಡುಗನಾಗಿಯೇ ಇಷ್ಟು ಬಳಕುತ್ತೀರಿ ಇನ್ನು ಹುಡುಗಿಯಾಗಿದ್ದರೆ ಎಂದು ಒಬ್ಬರು ಹೇಳಿದ್ದಾರೆ. ಇದು ಹುಡುಗನೋ ಹುಡುಗಿಯೋ ಎಂದು ಅನೇಕರು ನಗೆಯಾಡಿದ್ದಾರೆ. ನಿಮ್ಮಂಥವರೊಳಗೂ ಇಂಥ ಪ್ರತಿಭೆ ಅಡಗಿದೆಯೇ? ಲಿಂಗತ್ವವನ್ನು ಗೌರವಿಸಿ, ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video:6;ಬಾ ಕೂಸೇ ಮುದ್ದಿಸ್ತೀನಿ; ವಾತ್ಸಲ್ಯಮಯೀ ಒರಾಂಗುಟಾನ್

ಈ ಜನಕ್ಕೆ ಏನಾಗಿದೆ ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎಂದು ಒಬ್ಬರು ಕೇಳಿದ್ದಾರೆ. ನನಗೆ ಕೆಲಸವಿಲ್ಲವೆಂದರೆ ಈ ವಿಡಿಯೋಗೆ ಬಂದಿರುವ ಕಮೆಂಟ್​ ಓದುತ್ತ ಟೈಮ್​ ಪಾಸ್ ಮಾಡುತ್ತೇನೆ ಎಂದಿದ್ದಾರೆ ಇನ್ನೂ ಒಬ್ಬರು. ಹುಡುಗಿಯಾಗಿಯೂ ನನಗೆ ಇಷ್ಟೊಂದು ಸಲೀಸಾಲಿ ಮೂವ್​ ತೆಗೆದುಕೊಳ್ಳಲಾರೆ. ಆದರೆ ನೀವು ಸಾಧಿಸಿದ್ದಿರೀ, ಸೂಪರ್​ ಎಂದಿದ್ದಾರೆ ಮತ್ತೊಬ್ಬರು. ಅಣ್ಣಾ ನೀವು ಡ್ಯಾನ್ಸ್ ಕ್ಲಾಸ್ ಶುರು ಮಾಡಿ, ಒಳ್ಳೆಯದಾಗುತ್ತದೆ ಎಂದು ಇನ್ನೂ ಒಬ್ಬರು ಸಲಹೆ ನೀಡಿದ್ಧಾರೆ. ಅನೇಕರು ಇವರ ನೃತ್ಯವನ್ನು ಬಹುವಾವಿ ಮೆಚ್ಚಿಕೊಂಡಿದ್ದಾರೆ.

ಕಲೆಗೆ ಯಾವ ಲಿಂಗದ ಹಂಗು? ಅದು ಸಂಪೂರ್ಣ ಶರಣಾಗತಿ ಮತ್ತು ಶ್ರದ್ಧೆ, ನಿಷ್ಠೆಯನ್ನು ಬೇಡುತ್ತದೆ. ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 1:18 pm, Wed, 24 May 23

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?