ಚಪ್ಪಲಿ ಖರೀದಿಸಲು ದುಡ್ಡಿಲ್ಲದ ಕಾರಣ ತನ್ನ ಮಕ್ಕಳ ಕಾಲಿಗೆ ಪಾಸ್ಟಿಕ್​​ ಸುತ್ತಿಕೊಂಡ ಮಹಿಳೆ

ಚಪ್ಪಲಿ ಖರೀದಿಸಲು ದುಡ್ಡಿಲ್ಲದ ಕಾರಣ ತನ್ನ ಮಕ್ಕಳ ಕಾಲಿಗೆ ಚಪ್ಪಲಿಯಂತೆ ಪಾಸ್ಟಿಕ್​​ ಸುತ್ತಿಕೊಂಡು ಬೀದಿ ಬೀದಿ ಅಲೆಯುತ್ತಿದ್ದ ಮಹಿಳೆಯೊಬ್ಬಳ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಚಪ್ಪಲಿ ಖರೀದಿಸಲು ದುಡ್ಡಿಲ್ಲದ ಕಾರಣ ತನ್ನ ಮಕ್ಕಳ ಕಾಲಿಗೆ ಪಾಸ್ಟಿಕ್​​ ಸುತ್ತಿಕೊಂಡ ಮಹಿಳೆ
ಮಕ್ಕಳ ಕಾಲಿಗೆ ಪಾಸ್ಟಿಕ್​​ ಸುತ್ತಿಕೊಂಡ ಮಹಿಳೆImage Credit source: indiatoday.in
Follow us
ಅಕ್ಷತಾ ವರ್ಕಾಡಿ
|

Updated on:May 24, 2023 | 12:33 PM

ಮಧ್ಯಪ್ರದೇಶ: ಚಪ್ಪಲಿ ಖರೀದಿಸಲು ದುಡ್ಡಿಲ್ಲದ ಕಾರಣ ತನ್ನ ಮಕ್ಕಳ ಕಾಲಿಗೆ ಚಪ್ಪಲಿಯಂತೆ ಪಾಸ್ಟಿಕ್​​ ಸುತ್ತಿಕೊಂಡು ಬೀದಿ ಬೀದಿ ಅಲೆಯುತ್ತಿದ್ದ ಮಹಿಳೆಯೊಬ್ಬಳ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಸುಡು ಬಿಸಿಲಿಗೆ ಕಾಲಿಗೆ ಪ್ಲಾಸ್ಟಿಕ್​​ ಸುತ್ತಿಕೊಂಡಿದ್ದರೂ ಕೂಡ ಪುಟ್ಟ ಕಂದಮ್ಮನ ಮುಖದಲ್ಲಿನ ನಗು ಮಾತ್ರ ಮರೆಯಾಗಿಲ್ಲ. ಈ ಪೋಟೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆ ಸುಡು ಬಿಸಿಲಿಗೂ ಮುಗ್ಧ ಮಗುವಿನ ನಗು ಮಾತ್ರ ಕರುಳು ಹಿಂಡುವಂತಿದೆ.

ತನ್ನ ಮಕ್ಕಳೊಂದಿಗೆ ಆರ್ಧಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯ ಹೆಸರು ರುಕ್ಮಿಣಿ. ರುಕ್ಮಿಣಿ ತನ್ನ ಮೂರು ಮಕ್ಕಳೊಂದಿಗೆ ಕೆಲಸಕ್ಕೆ ಬೀದಿ ಬೀದಿ ಅಲೆದಾಡುತ್ತಿರುವುದನ್ನು ಸ್ಥಳೀಯ ಪತ್ರಕರ್ತ ಇನ್ಸಾಫ್ ಖುರೈಶಿ ಗಮನಿಸಿದ್ದಾರೆ. ಮಧ್ಯಪ್ರದೇಶದ ಶಿಯೋಪುರದಲ್ಲಿ ಮೇ 21 ರಂದು ಮಧ್ಯಾಹ್ನ ಪೋಟೋ ಸೆರೆಹಿಡಿಯಲಾಗಿದೆ. ಈ ಪೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ರುಕ್ಮಿಣಿಯ ದುರವಸ್ಥೆಯಿಂದ ಭಾವುಕರಾದ ಖುರೈಷಿ ಅವರು ಫೋಟೋವನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಲ್ಲದೆ, ಪಾದರಕ್ಷೆಗಳನ್ನು ಖರೀದಿಸಲು ಹಣವನ್ನು ಒದಗಿಸುವ ಮೂಲಕ ರುಕ್ಮಿಣಿಗೆ ಸಹಾಯ ಹಸ್ತವನ್ನು ಚಾಚಿದರು. ಸಹರಿಯಾ ರಿಬಲ್ ಸಮುದಾಯಕ್ಕೆ ಸೇರಿದ ರುಕ್ಮಿಣಿ ಅವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ವರದಿಗಾರರಿಗೆ ವಿವರಿಸಿದ್ದಾರೆ.

ಇದನ್ನೂ ಓದಿ: ‘ಬಾ ಕೂಸೇ ಮುದ್ದಿಸ್ತೀನಿ’ ವಾತ್ಸಲ್ಯಮಯೀ ಒರಾಂಗುಟಾನ್

ಕ್ಷಯರೋಗದಿಂದ ಬಳಲುತ್ತಿರುವ ಪತಿ:

ರುಕ್ಮಿಣಿ ಪತಿ ಕ್ಷಯರೋಗದಿಂದ ಬಳಲುತ್ತಿದ್ದು, ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಮೂರು ಹೊತ್ತಿನ ಊಟಕ್ಕಾಗಿ ಕೆಲಸಕ್ಕಾಗಿ ಬೀದಿ ಸುತ್ತಾಡುತ್ತಿದ್ದೇನೆ . ತನ್ನ ಮೂವರು ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಈ ಪೋಟೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಕುಟುಂಬದ ಸಂಕಷ್ಟದ ಪರಿಸ್ಥಿತಿಯನ್ನು ತಿಳಿದ ಸ್ಥಳೀಯ ಆಡಳಿತವು ಕೂಡಲೇ ಗಮನಹರಿಸಿ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದೆ.ವಿಷಯ ನಮ್ಮ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಕುಟುಂಬದವರಿಂದ ಮಾಹಿತಿ ಸಂಗ್ರಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಳುಹಿಸಲಾಗಿದೆ. ಸರ್ಕಾರದ ಯೋಜನೆಗಳ ಗರಿಷ್ಠ ಲಾಭವನ್ನು ಕುಟುಂಬಕ್ಕೆ ನೀಡಲು ಸೂಚನೆಗಳನ್ನು ನೀಡಲಾಗಿದೆ ಎಂದು ಶೆಯೋಪುರ್ ಕಲೆಕ್ಟರ್ ಶಿವಂ ವರ್ಮಾ ಇಂಡಿಯಾ ಟುಡೇಗೆ ತಿಳಿಸಿರುವುದು ವರದಿಯಾಗಿದೆ.

ಮತ್ತಷ್ಟು ವೈರಲ್​​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 12:32 pm, Wed, 24 May 23

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ