AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಸಿ ತಾಯಿ VS ಟರ್ಕಿ ಐಸ್ ಕ್ರೀಮ್ ಮಾರಾಟಗಾರ; ನೆಟ್ಟಿಗರ ಮನ ಗೆದ್ದ ವೈರಲ್ ವಿಡಿಯೋ

ಈ ವಿಡಿಯೋ ಕೃಷಿಕಾ ತಾಯಿ ರಾಜು ಡೆಂಬ್ಲಾ ಅವರು ಐಸ್ ಕ್ರೀಮ್ ಮಾರಾಟಗಾರನ ಆಟಕ್ಕೆ ಹೀಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ದೇಸಿ ತಾಯಿ VS ಟರ್ಕಿ ಐಸ್ ಕ್ರೀಮ್ ಮಾರಾಟಗಾರ; ನೆಟ್ಟಿಗರ ಮನ ಗೆದ್ದ ವೈರಲ್ ವಿಡಿಯೋ
ವೈರಲ್ ವಿಡಿಯೋ
ನಯನಾ ಎಸ್​ಪಿ
|

Updated on: May 24, 2023 | 1:40 PM

Share

ಟರ್ಕಿ ಐಸ್‌ಕ್ರೀಂ (Turkey Icecream) ಮಾರಾಟಗಾರನಿಗೆ ದೇಸಿ ತಾಯಿಯೊಬ್ಬರು ಸವಾಲು ಹಾಕುತ್ತಿರುವ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ವೀಕ್ಷಕರು ಆಕೆಗೆ ಪ್ರೀತ್ಸಹಿಸಿದ್ದಾರೆ. ನಿರ್ಮಾಪಕ ಕೃಷಿಕಾ ಲುಲ್ಲಾ ಅವರು ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಟರ್ಕಿ ಐಸ್ ಕ್ರೀಮ್ ಅಂದಾಕ್ಷಣ ನೆನಪಾಗೋದು ಮಾರಾಟಗಾರರು ಐಸ್ ಕ್ರೀಮ್ ನೀಡುವ ಮೊದಲು ಗ್ರಾಹಕರನ್ನು ಆಟವಾಡಿಸುವುದು. ಈ ವಿಡಿಯೋ ಕೃಷಿಕಾ ತಾಯಿ ರಾಜು ಡೆಂಬ್ಲಾ ಅವರು ಐಸ್ ಕ್ರೀಮ್ ಮಾರಾಟಗಾರನ ಆಟಕ್ಕೆ ಹೀಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಟರ್ಕಿಶ್ ಐಸ್ ಕ್ರೀಮ್ ಸ್ಟಾಲ್‌ನಲ್ಲಿನ ಆಟವು ಜನಪ್ರಿಯ ಪ್ರದರ್ಶನವಾಗಿದೆ, ಅಲ್ಲಿ ಮಾರಾಟಗಾರನು ಲೋಹದ ದಂಡದಂತಹ ಉಪಕರಣದೊಂದಿಗೆ ಐಸ್ ಕ್ರೀಮ್ ಕೋನ್ ಅನ್ನು ಬೀಸುವ ಮೂಲಕ ಗ್ರಾಹಕರನ್ನು ಆಟವಾಡಿಸುತ್ತಾನೆ. ಆದಾಗ್ಯೂ, ಈ ತಂತ್ರವು ದೇಸಿ ಭಾರತೀಯ ತಾಯಿಯ ಮೇಲೆ ಕೆಲಸ ಮಾಡಲಿಲ್ಲ. ಲುಲ್ಲಾ ತನ್ನ ತಾಯಿಯನ್ನು ಮಾರಾಟಗಾರನ ಮುಂದೆ ನಿಲ್ಲಿಸಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.

ಆರಂಭದಲ್ಲಿ ಮಾರಾಟಗಾರನ ಕಾರ್ಯಗಳಿಂದ ಗೊಂದಲಕ್ಕೊಳಗಾದ ಮಹಿಳೆ ದಿಗ್ಭ್ರಮೆಗೊಂಡು ಅವನನ್ನು ಪ್ರಶ್ನಿಸಿದಳು, “ನೀವು ಏನು ಮಾಡುತ್ತಿದ್ದೀರಿ?” ಇದೇನು ಎಂದು ಸಂಕ್ಷಿಪ್ತವಾಗಿ ಉತ್ತರಿಸಿದ ನಂತರ, ಅವರಿಗೆ ಇದೊಂದು ಆತ ಎಂಬುದು ಮನವರಿಕೆಯಾಯಿತು ಅಷ್ಟೇ ಅಲ್ಲದೆ, ಸೆಕೆಂಡುಗಳಲ್ಲಿ ಐಸ್ ಕ್ರೀಮ್ ಕೋನ್ ಅನ್ನು ಯಶಸ್ವಿಯಾಗಿ ಹಿಡಿದರು. ಎಷ್ಟೇ ಆದರೂ ಭಾರತೀಯ ತಾಯಂದಿರನ್ನು ಯಾರು ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಜೊತೆಗೆ ಮಾರಾಟಗಾರನಿಗೆ, “ನಿಮ್ಮ ಬಗ್ಗೆ ನೀವು ಏನು ಯೋಚಿಸುತ್ತೀರಿ?” ಎಂದು ತಮಾಷೆ ಮಾಡಿದರು.

ಆಕೆಯ ಗೆಲುವು ಐಸ್ ಕ್ರೀಂ ಮಾರುವವನಿಗೆ ಮುಗುಳ್ನಗೆ ಮೂಡಿಸಿದ್ದಲ್ಲದೆ ಸುತ್ತಮುತ್ತಲಿನವರಿಗೂ ನಗು ತರಿಸಿತು. ಲುಲ್ಲಾ ತನ್ನ ತಾಯಿಯೊಂದಿಗೆ ಸಮಯವನ್ನು ಕಳೆಯುವುದರಲ್ಲಿ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾ, “ಅಮ್ಮನ ಮೊದಲ ಅನುಭವ, @jiomallofficial ನಲ್ಲಿ #turkishicecream ಅನ್ನು ಪ್ರಯತ್ನಿಸಿದರು. ಅವರು ನಮ್ಮನ್ನು ನಗುವಂತೆ ಮಾಡಲು ಎಂದಿಗೂ ವಿಫಲರಾಗುವುದಿಲ್ಲ. ಪ್ರೀತಿಯ ತಾಯಿ.” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶರಾರಾ ಶರಾರಾ; ಅದೆಷ್ಟು ಛಂದ ನರ್ತಿಸಿದ್ದೀರೀ! ಮನಸೋತ ನೆಟ್ಟಿಗರು

ದೇಸಿ ಮಾಮ್ ತಕ್ಷಣ ಇಂಟರ್ನೆಟ್ ಬಳಕೆದಾರರ ಹೃದಯವನ್ನು ಗೆದ್ದರು, ಕೆಲವರು ತಾಯಿಯನ್ನು ಹೊಗಳಿದರೆ, ಹಲವಾರು ಭಾರತೀಯ ತಾಯಿಯರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಹೃದಯಸ್ಪರ್ಶಿ ವೀಡಿಯೊ ದೇಸಿ ತಾಯಿಯ ಉತ್ಸಾಹ ಮತ್ತು ಹಾಸ್ಯವನ್ನು ಪ್ರದರ್ಶಿಸುತ್ತದೆ, ಅದನ್ನು ವೀಕ್ಷಿಸಿದವರ ಮುಖದಲ್ಲಿ ನಗೆ ತರುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ