Viral Video: ಜೀವಂತ ಹಾವಿನ ತಲೆಯನ್ನು ಹಲ್ಲಿನಿಂದ ಕತ್ತರಿಸಿ ನೆಲಕ್ಕೆ ಉಗುಳಿದ ವ್ಯಕ್ತಿ, ವಿಡಿಯೋ ನೋಡಿ ಬೆಚ್ಚಿಬಿದ್ದ ಜನ
Viral Video: ಹಾವು(Snake) ನೋಡಿದರೆ ನಾವು ಕಿಲೋಮೀಟರ್ಗಟ್ಟಲೆ ದೂರ ಓಡುತ್ತೇವೆ, ಆದರೆ ಇಲ್ಲೊಬ್ಬ ವ್ಯಕ್ತಿ ಜೀವಂತ ಹಾವಿನ ತಲೆಯನ್ನು ಹಲ್ಲಿನಿಂತ ಕಚ್ಚಿ ಕತ್ತರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವಿಡಿಯೋ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ.
ಹಾವು(Snake) ನೋಡಿದರೆ ನಾವು ಕಿಲೋಮೀಟರ್ಗಟ್ಟಲೆ ದೂರ ಓಡುತ್ತೇವೆ, ಆದರೆ ಇಲ್ಲೊಬ್ಬ ವ್ಯಕ್ತಿ ಜೀವಂತ ಹಾವಿನ ತಲೆಯನ್ನು ಹಲ್ಲಿನಿಂತ ಕಚ್ಚಿ ಕತ್ತರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವಿಡಿಯೋ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿಯೊಬ್ಬ ಜೀವಂತ ಹಾವನ್ನು ಹಿಡಿದು ಅದರ ತಲೆಯನ್ನು ಹಲ್ಲಿನಿಂದ ಕತ್ತರಿಸಿ ಹಸಿಯಾಗಿ ಜಗಿದು ನೆಲಕ್ಕೆ ಉಗುಳಿರುವ ವಿಡಿಯೋ ಇದಾಗಿದೆ. ಈಗ ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ. ಈ ವೀಡಿಯೊವನ್ನು ಮೇ 22 ರಂದು Twitter ಹ್ಯಾಂಡಲ್ ‘Unique 4us’ (@ARSHAD_93900) ಪೋಸ್ಟ್ ಮಾಡಲಾಗಿದೆ.
ವರದಿಗಳ ಪ್ರಕಾರ, ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಲಾಲ್ ಕುವಾನ್‌ನಲ್ಲಿ ನಡೆದಿದೆ. 2.20 ನಿಮಿಷದ ಈ ವಿಡಿಯೋದಲ್ಲಿ ಐಸ್ ಕ್ರೀಂ ಟ್ರಾಲಿಯೊಂದರ ಬಳಿ ವ್ಯಕ್ತಿಯೊಬ್ಬ ಕುಳಿತಿರುವುದನ್ನು ನೋಡಬಹುದು. ಆತನ ಕೈಯಲ್ಲಿ ಜೀವಂತ ಹಾವು ಕಾಣಿಸುತ್ತದೆ. ಕೆಲವರು ಅವರ ವಿಡಿಯೋ ಮಾಡುತ್ತಿದ್ದಾರೆ.
?लालकुआं ( नैनीताल) टूट रही थी रेलवे नगीना कॉलोनी वही बैठा ये आइसक्रीम वाला व्यक्ति#जिंदा_सांप_काट_के_खा_गया ?#unique4us #uttrakhand #nainital pic.twitter.com/SGbWyP0rxz
— Unique 4Us (@ARSHAD_93900) May 22, 2023
ಥಟ್ಟನೆ ಕೈಯಲ್ಲಿ ಹಿಡಿದು ಹಾವಿನ ತಲೆಯನ್ನು ಬಾಯಿಗೆ ಹಾಕಿಕೊಂಡು ಹಲ್ಲಿನಿಂದ ಕಚ್ಚುತ್ತಾರೆ. ಇದಾದ ನಂತರ ಬಾಟಲಿ ತೆಗೆದು ಹಾವಿನ ಮೇಲೆ ಏನನ್ನೋ ಹಾಕಿಕೊಂಡು ಹಾವನ್ನು ತಿಂದಿದ್ದಾನೆ ಆ ಸಂದರ್ಭದಲ್ಲಿ ವ್ಯಕ್ತಿ ಮದ್ಯಪಾನ ಮಾಡಿದ್ದ ಎನ್ನಲಾಗಿದೆ.
ಮತ್ತಷ್ಟು ಓದಿ:Hyderabad News: ಶ್ವಾನ ದಾಳಿಯಿಂದ ತಪ್ಪಿಸಲು ಹೋಗಿ 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್
ವನ್ಯಜೀವಿ (ರಕ್ಷಣೆ) ಕಾಯ್ದೆಯಡಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ, ಆತ ಯಾಕೆ ಹೀಗೆ ಮಾಡಿದ ಎಂಬುದು ಸ್ಪಷ್ಟವಾಗಿಲ್ಲ. ಪೊಲೀಸರು ಸೋಮವಾರ ಆರೋಪಿಯನ್ನು ಹಿಡಿದಿದ್ದಾರೆ ಎಂದು ಅರಣ್ಯ ರೇಂಜ್ ಆಫೀಸರ್ ಚಂದನ್ ಸಿಂಗ್ ಹೇಳಿದ್ದಾರೆ. ಆತನ ಬಳಿ ಆಧಾರ್ ಕಾರ್ಡ್ ಅಥವಾ ಇತರೆ ಯಾವುದೇ ಗುರುತಿನ ಚೀಟಿ ಇರಲಿಲ್ಲ. ಆರೋಪಿ ಯಾಕೆ ಹೀಗೆ ಮಾಡಿದ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ