Viral Video: ಸವಾರ್ ಲೂ; ಅರೆ! ಈಕೆ ಥೇಟ್ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು
Sonakshi Sinha : ಲೂಟೇರಾ ಚಿತ್ರದ ಈ ಹಾಡಿಗೆ ದೃಶ್ಯಾ ರಘುರಾಮ್ ಎಂಬ ನೃತ್ಯಕಲಾವಿದೆ ಅದ್ಭುತವಾಗಿ ನರ್ತಿಸಿದ್ದಾರೆ. ಇವರ ಪ್ರತಿಭೆ, ವಸ್ತ್ರವಿನ್ಯಾಸ, ಬೆಳಕಿನ ವಿನ್ಯಾಸ ಎಲ್ಲವೂ ಮನೋಹರವಾಗಿದೆ. ನೋಡಿ ವಿಡಿಯೋ.

Dance : ರಣವೀರ್ ಸಿಂಗ್, ಸೋನಾಕ್ಷಿ ಸಿನ್ಹಾ ಅಭಿನಯದ ಮತ್ತು ಮೊನಾಲಿ ಠಾಕೂರ್ ಹಾಡಿರುವ ‘ಸವಾರ್ ಲೂ’ (Sawaar Loon) ಹಾಡಿಗೆ ಈ ಯುವತಿ ನರ್ತಿಸಿದ ರೀಲ್ ವೈರಲ್ ಆಗಿದೆ. ಆಕರ್ಷಕ ಮೈಮಾಟ ಮತ್ತದಕ್ಕೆ ತಕ್ಕಂತೆ ವಸ್ತ್ರವಿನ್ಯಾಸ ಇದೆಲ್ಲಕ್ಕಿಂತ ಮುಖ್ಯ ನೃತ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ರೀಲ್ನಲ್ಲಿರುವ ಕಲಾವಿದೆಯ ಹೆಸರು ದೃಶ್ಯಾ ರಘುರಾಮ್. ಇವರು ವೃತ್ತಿಪರ ನೃತ್ಯಕಲಾವಿದರಾಗಿದ್ದು ನ್ಯೂಯಾರ್ಕ್ನಲ್ಲಿ ವಾಸಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಹೊಂಬಣ್ಣದ ಬೆಳಕಿನ ವಿನ್ಯಾಸ ಇವರ ಈ ಪುಟ್ಟ ಪ್ರದರ್ಶನವನ್ನು ಮತ್ತಷ್ಟು ರಂಗೇರಿಸಿದೆ. ನೋಡಿ ಈ ವಿಡಿಯೋ.
ಈತನಕ 2 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಸುಮಾರು 29,000 ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಇವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ನಾನು ಈ ವಿಡಿಯೋ ಅನ್ನು 20 ಕ್ಕೂ ಹೆಚ್ಚು ಸಲ ನೋಡಿದ್ದೇನೆ ಎಂದಿದ್ದಾರೆ. ಅತ್ಯಾಕರ್ಷಕವಾದ ನೃತ್ಯಸಂಯೋಜನೆ. ಕಲಾವಿದೆಗೆ ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ನೀವು ಅದ್ಭುತ ಕಲೆಗಾರ್ತಿ ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಮುಂಬೈನ ಕೊಳಗೇರಿಯ 14ರ ಬಾಲಕಿ ;ಫಾರೆಸ್ಟ್ ಎಸೆನ್ಷಿಯಲ್; ಮಾಡೆಲ್
ಲೂಟೇರಾ ಸಿನೆಮಾದಲ್ಲಿ ಈ ಹಾಡಿನ ನಾಯಕಿ ಹೇಗೆ ಕಾಣುತ್ತಿದ್ದಾರೋ ಮತ್ತು ಹೇಗೆ ನರ್ತಿಸಿದ್ಧಾರೋ ಥೇಟ್ ಹಾಗೆಯೇ ಇದೆ ಎಂದು ಇನ್ನೊಬ್ಬರು ಹೇಳಿದ್ಧಾರೆ. ನೀವು ಹೀರೋಯಿನ್! ಬರೀ ನೃತ್ಯಗಾತಿಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವೇ ನೆಕ್ಸ್ಟ್ ಮಾಧುರಿ ಎಂದು ಇನ್ನೊಬ್ಬರು ಹೇಳಿದ್ದಾರೆ. ನಿಮ್ಮ ಭಾವಾಭಿವ್ಯಕ್ತಿ ಅತ್ಯಂತ ಮಧುರವಾಗಿದೆ ಎಂದು ಹೇಳಿದ್ಧಾರೆ ಮತ್ತೂ ಒಬ್ಬರು.
ಕಲೆ ಎನ್ನುವುದು ನಮ್ಮ ಜೊತೆಗಿದ್ದರೆ ಜಗತ್ತೇ ಮರೆಯಬಹುದಲ್ಲವೆ? ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:31 am, Wed, 24 May 23