Viral Video: ಪಿಯಾ ತೋಸೇ; 8 ಮಿಲಿಯನ್​ ಜನರನ್ನು ಸೆಳೆದ ಮಾಧವೀನೃತ್ಯ

Dance : 1965ರಲ್ಲಿ ಬಿಡುಗಡೆಯಾದ ಗೈಡ್​ ಸಿನೆಮಾದ ಹಾಡು ಇಂದಿಗೂ ಹಿಟ್​! ಅಂದು ಲತಾ ಮಂಗೇಶ್ಕರ್ ಹಾಡಿದ ಈ ಹಾಡನ್ನು ಜೋನಿತಾ ಗಾಂಧಿ ಹಾಡಿದ್ದಾರೆ. ಮಾಧವಿ ಬನ್ಸಾಲ್​ ಹೆಜ್ಜೆ ಮತ್ತು ಪಲಕುಗಳಿಗೆ ನೆಟ್ಟಿಗರು ಸಂಪೂರ್ಣ ಸೋತಿದ್ಧಾರೆ.

Viral Video: ಪಿಯಾ ತೋಸೇ; 8 ಮಿಲಿಯನ್​ ಜನರನ್ನು ಸೆಳೆದ ಮಾಧವೀನೃತ್ಯ
ಕಲಾವಿದೆ ಮಾಧವಿ ಬನ್ಸಾಲ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 18, 2023 | 10:30 AM

Dance : 1965ರಲ್ಲಿ ಬಿಡುಗಡೆಯಾದ ಗೈಡ್​ ಸಿನೆಮಾದ ಹಾಡು ಇದು, ಪಿಯಾ ತೋಸೆ ನೈನಾ ಲಾಗೀರೇ. ಲತಾ ಮಂಗೇಶ್ಕರ್ ಹಾಡಿದ ಈ ಹಾಡು ಇಂದಿಗೂ ಹಾಡುವಂತೆ, ನರ್ತಿಸುವಂತೆ ಹುರಿದುಂಬಿಸುತ್ತಿದೆ ಎಂದರೆ ಯೋಚಿಸಿ. ಗೀತಸಾಹಿತ್ಯ, ಸ್ವರಸಂಯೋಜನೆ ಎಲ್ಲವೂ ಎಷ್ಟೊಂದು ಅರ್ಥಪೂರ್ಣ ಮತ್ತು ಮಾಧುರ್ಯಪೂರ್ಣವಾಗಿತ್ತು ಎಂದು. ಇಷ್ಟೆಲ್ಲಾ ಅಬ್ಬರದ ಸಂಗೀತದ ಮಧ್ಯೆಯೂ ತಂಗಾಳಿಯಂತೆ ಬೀಸುವ ಈ ಹಳೆಯ ಹಾಡುಗಳು ಮತ್ತು ಗಾಯಕರು ಎಂದಿಗೂ ಅಮರ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Madhavi Bansal (@madhavibansal_)

ನೃತ್ಯಸಂಯೋಜಕಿ ಮಾಧವಿ ಬನ್ಸಾಲ್​ ಈ ವಿಡಿಯೋದಲ್ಲಿ ಬಹಳ ಆಕರ್ಷಕವಾಗಿ ನರ್ತಿಸಿದ್ದಾರೆ. ಗಾಯಕಿ ಜೋನಿತಾ ಗಾಂಧಿಯವರು ಹಾಡಿರುವ ಈ ಹಾಡು ಮತ್ತೆ ಮತ್ತೆ ಕೇಳಬೇಕು ಎನ್ನಿಸುವಂತಿದೆ. ಸೆಮಿ ಕ್ಲಾಸಿಕಲ್​ ಸ್ಟೈಲ್​ನಲ್ಲಿ, ಮಂದ ಬೆಳಕಿನಲ್ಲಿ ಮಾಧವಿ ಹಾಕಿರುವ ಹೆಜ್ಜೆಗಳು ನೋಡಿದ ಯಾರ ಮನಸ್ಸನ್ನೂ  ಮುದಗೊಳಿಸುವಂತಿವೆ. ಬಹಳ ದಿನಗಳಿಂದ ಈ ಹಾಡು ನನ್ನ ಮನಸ್ಸಿನಲ್ಲಿತ್ತು ಇದೀಗ ಸಾಧ್ಯವಾಗಿದೆ ಎಂದು ಮಾಧವಿ ಹೇಳಿದ್ದಾರೆ.

ಇದನ್ನೂ ಓದಿ : Viral: ಈ ಫೋಟೋದಲ್ಲಿರುವ ಖ್ಯಾತ ಹಿನ್ನೆಲೆ ಗಾಯಕಿ ಯಾರು?

ಈ ವಿಡಿಯೋ ಅನ್ನು ಮೇ 8 ರಂದು ಮಾಧವಿ ಪೋಸ್ಟ್ ಮಾಡಿದ್ದಾರೆ. ಈತನಕ 8 ಮಿಲಿಯನ್​ಗಿಂತಲೂ ಹೆಚ್ಚು ಜನ ಇದನ್ನು ನೋಡಿದ್ದಾರೆ. ಸಾವಿರಾರು ಪ್ರತಿಕ್ರಿಯೆಗಳು ಇದಕ್ಕೆ ದಕ್ಕಿವೆ. 4 ಮುಕ್ಕಾಲು ಲಕ್ಷ ಜನರು ಇದನ್ನು ಇಷ್ಟಪಟ್ಟಿದ್ದಾರೆ. ನಾನಿದನ್ನು 50 ಸಲವಾದರೂ ನೋಡಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಅದ್ಭುತವಾಗಿ ನೃತ್ಯಸಂಯೋಜನೆ ಮಾಡಲಾಗಿದೆ. ಈ ಬ್ಯಾಕ್​ಡ್ರಾಪ್​ನಲ್ಲಿ ಮತ್ತಷ್ಟು ಹಾಡುಗಳಿಗೆ ಹೆಜ್ಜೆ ಹಾಕಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?

ನಿಮ್ಮ ಕಿವಿಯೋಲೆಗಳು ಕೇವಲ ಆಭರಣವಲ್ಲ. ನಿಮ್ಮ ಶೈಲಿಯ ಸೂಕ್ಷ್ಮ ಪ್ರತಿಬಿಂಬ. ಒಂದೊಂದು ಪಲಕು, ಝಲಕು ಅವುಗಳ ಮೂಲಕ ಎಷ್ಟು ಛಂದ ವ್ಯಕ್ತವಾಗಿದೆ ನೋಡಿ ಎಂದು ಇನ್ನೊಬ್ಬರು ಹೇಳಿದ್ದಾರೆ. ವಾಹ್​ ಮತ್ತಷ್ಟು ಇಂಥ ರೀಲ್ಸ್​ ಮಾಡಿ. ನಾನು ಏಳು ವರ್ಷಗಳಾದವು ಡ್ಯಾನ್ಸ್ ಮಾಡುವುದನ್ನು ಬಿಟ್ಟು. ನಿಮ್ಮ ಡ್ಯಾನ್ಸ್ ನೋಡಿದ ಮೇಲೆ ನನಗೂ ಮಾಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್

ಇಲ್ಲಿರುವ ಉದ್ದುದ್ದ ಪ್ರತಿಕ್ರಿಯೆಗಳನ್ನು ಓದಿದರೆ ಸಾಕು. ಈ ನೃತ್ಯ ಅದೆಷ್ಟು ಜನರನ್ನು ಹೇಗೆಲ್ಲ ಪ್ರಭಾವಿಸಿದೆ ಎಂದು ಅರ್ಥವಾಗುತ್ತದೆ. ಹೀಗೆ ಒಬ್ಬರಿಂದ ಇನ್ನೊಬ್ಬರು ಉತ್ತೇಜನಗೊಳ್ಳುತ್ತಾರೆ ಎಂದರೆ ಇನ್ನೇನು ಮತ್ತೆ? ಅದಕ್ಕೇ ಕಲೆ ಒಳ್ಳೆಯದು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:26 am, Thu, 18 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ