Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?

Traffic Police : ಎಮ್ಮೆ, ಹಸುಗಳು ನಡುರಸ್ತೆಯಲ್ಲಿ ಕುಳಿತು ಶಾಂತ ದೃಷ್ಟಿ ಬೀರುವುದು ದಿನನಿತ್ಯದ ವಿದ್ಯಮಾನ. ನಮ್ಮ ದೇಶದಲ್ಲಿ ಇಂಥವು ಸುದ್ದಿಯಾಗುವುದೇ ಇಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಆಡೊಂದು ಪೊಲೀಸರಿಗೆ ಆಟ ಆಡಿಸಿದಲ್ಲಿ...

Viral: ಪೊಲೀಸರಿಗೆ ತುಂಬಾ ಆಟವಾಡಿಸಿಬಿಟ್ಟಿಯಂತೆ , ಹೌದೇನು ಹ್ಯೂಡಿನಿ?
ಕೊನೆಗೂ ಪೊಲೀಸರ ಬಲೆಗೆ ಬಿದ್ದ ಆಡು
Follow us
ಶ್ರೀದೇವಿ ಕಳಸದ
|

Updated on:May 17, 2023 | 4:40 PM

Viral : ಇದು ಎಲ್ಲಿಂದಲೋ ತಪ್ಪಿಸಿಕೊಂಡು ಲಂಡನ್​ನ ಲ್ಯಾಂಕಾಸ್ಟರ್ ನಗರದ ಬೀದಿಗಳಲ್ಲಿ ಸುತ್ತುತ್ತಿತ್ತು. ಆಗಾಗ ಅವರಿವರ ಮನೆಗಳಲ್ಲಿ ಕುತೂಹಲದಿಂದ ಇಣುಕಿ ನೋಡುತ್ತಿತ್ತು. ಪಾರ್ಕಿಂಗ್ ಲಾಟ್ ಮತ್ತು ಮುಖ್ಯರಸ್ತೆಗಳಲ್ಲಿ ಓಡಾಡುತ್ತ ಟ್ರಾಫಿಕ್ ಅವ್ಯವಸ್ಥೆಗೂ ಕಾರಣವಾಗಿತ್ತು. ಅಂತೂ ಇದನ್ನು ಅಂದರೆ ಈ ಆಡನ್ನು ಪೊಲೀಸರು ಕೊನೆಗೂ ಅರೆಸ್ಟ್​ ಮಾಡಿದ್ದಾರೆ! ಅವರಿಂದ ತಪ್ಪಿಸಿಕೊಳ್ಳುತ್ತ ಬಹುಕಾಲ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಮಾಯಾವಿ ಆಡಿಗೆ ಪೊಲೀಸರು ಅಕ್ಕರೆಯಿಂದ ಹ್ಯೂಡಿನಿ (Houdini) ಎಂದು ನಾಮಕರಣ ಮಾಡಿದ್ದಾರೆ.

ಒಂದಷ್ಟು ದಿನಗಳ ಹಿಂದೆ ಲ್ಯಾಂಕಾಸ್ಟರ್​​ನ ಪಾರ್ಕಿಂಗ್ ಲಾಟ್ ಒಂದರ ಬಳಿ ಕಂಡುಬಂದಿದ್ದ ಈ ಆಡನ್ನು ಪೊಲೀಸರು ಹುಡುಕುತ್ತಿದ್ದರು. ‘ಆಡನ್ನು ಹಿಡಿಯಲು ಬಹಳ ದೂರದತನಕ ಬೆನ್ನಟ್ಟಬೇಕಾಯಿತು. ಇದರಿಂದ ಆ ರಸ್ತೆಗಳುದ್ದಕ್ಕೂ ವಾಹನಸಂಚಾರ ಏರುಪೇರಾಯಿತು. ಕೊನೆಗೂ ನನಗದು ಸಿಕ್ಕಿದ್ದು ನೆಮ್ಮದಿ ತಂದಿದೆ. ಈ ನುಣುಚಿಕೊಳ್ಳುವ ಆಡಿಗೆ ನಾವು ಅಕ್ಕರೆಯಿಂದ ಹ್ಯೂಡಿನಿ ಎಂದು ಹೆಸರಿಟ್ಟಿದ್ದೇವೆ’ ಎಂದು ಲ್ಯಾಂಕಾಸ್ಟರ್ ಪೊಲೀಸರು ಫೇಸ್‌ಬುಕ್‌ ಪೋಸ್ಟಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral: ಈ ಫೋಟೋದಲ್ಲಿರುವ ಖ್ಯಾತ ಹಿನ್ನೆಲೆ ಗಾಯಕಿ ಯಾರು?

ಹಸುಗಳು ಕುರಿಗಳು ನಮ್ಮಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸುವುದು ತೀರಾ ಸಾಮಾನ್ಯ. ಊರಿಂದೂರಿಗೆ ಹೋಗುವ ಕುರಿಹಿಂಡುಗಳನ್ನು ನಾವು ಸಹಯಾತ್ರಿಕರಂತೆಯೇ ಕಾಣುತ್ತೇವೆ. ಎಮ್ಮೆಗಳಂತೂ ರಸ್ತೆಗಳ ನಟ್ಟನಡುವೆ ಮಲಗಿ ಮೆಲುಕು ಹಾಕುತ್ತ ಅವಸರದಲ್ಲಿರುವ ಪ್ರಯಾಣಿಕರತ್ತ ಶಾಂತ ದೃಷ್ಟಿ ಬೀರುವುದು ದಿನನಿತ್ಯದ ವಿದ್ಯಮಾನ. ನಮ್ಮ ದೇಶದಲ್ಲಿ ಇಂಥವು ಸುದ್ದಿಯಾಗುವುದೇ ಇಲ್ಲ. ಬಲುಶಿಸ್ತಿನ ಪಾಶ್ಚಾತ್ಯ ದೇಶಗಳಲ್ಲಿ ಆಡೊಂದು ಪೊಲೀಸರಿಗೆ ಆಟ ಆಡಿಸಿದ್ದು ವಿಶೇಷ ಸಂಗತಿಯಾಗಿದೆ.

ಇದನ್ನೂ ಓದಿ : ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್

ಈ ಆಡಿನ ಕತೆ ಓದಿ ನಿಮಗೇನನ್ನಿಸಿತು? ಪ್ರಾಣಿಗಳು ಮನುಷ್ಯರನ್ನು ಇನ್ನಿತರ ರೀತಿಗಲಲ್ಲಿ ಫಜೀತಿ ಮಾಡಿದ ಸಂಗತಿಗಳು ನಿಮ್ಮ ಅನುಭವಕ್ಕೆ ಬಂದಿವೆಯೇ? ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:39 pm, Wed, 17 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ