Viral: ‘ಬುಕ್ ಮಾಡಿದ ಆಟೋ 71 ನಿಮಿಷಗಳಲ್ಲಿ ನಿಮ್ಮನ್ನು ತಲುಪಲಿದೆ!’ ಮುಂದೆ?

Auto Rikshaw : ತಾಳುವಿಕೆಗಿಂತನ್ಯ ತಪವು ಇಲ್ಲ, ಬೆಂಗಳೂರಿನಲ್ಲಿ ಹೊರಬೀಳುವುದಕ್ಕಿಂತ ತಪ್ಪು ಇಲ್ಲ; ಓಲಾ ಊಬರ್​ ಬುಕ್​ ಮಾಡಿದವರಿಗೆ ಇತ್ತೀಚೆಗಂತೂ ಹೀಗೇ ಅನ್ನಿಸುತ್ತಿದೆ ಅಲ್ಲವೆ? ಓದಿ ಇದಕ್ಕೆ ಸಂಬಂಧಿಸಿದ ಒಂದು ಬುಕ್​​ ​ಪ್ರಸಂಗ.

Viral: 'ಬುಕ್ ಮಾಡಿದ ಆಟೋ 71 ನಿಮಿಷಗಳಲ್ಲಿ ನಿಮ್ಮನ್ನು ತಲುಪಲಿದೆ!' ಮುಂದೆ?
Follow us
|

Updated on:May 17, 2023 | 2:29 PM

Auto Rikshaw : ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಅಸಂಖ್ಯ ಜೋಕುಗಳು, ಮೀಮ್‌ಗಳನ್ನು ನಾವೆಲ್ಲ ನೋಡಿಯೇ ಇದ್ದೇವೆ. ನಮ್ಮಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎನ್ನುವುದೂ ಜನಜನಿತ. ಇದಕ್ಕೆಲ್ಲ ದಿವ್ಯೌಷಧಿ ಎಂದರೆ ಮೆಟ್ರೋ! ಹೀಗೆಂದು ಸರಕಾರಗಳು ಪ್ರತಿಪಾದಿಸುತ್ತಿದ್ದರೂ ಅವುಗಳ ಕಾಮಗಾರಿಯ ವೇಗ ಆಮೆಯನ್ನೂ ನಾಚಿಸುವಂಥದ್ದು. ಎಲ್ಲ ಕಡೆ ಮೆಟ್ರೋ ಬಂದು ಹೊರಗೆ ಓಡಾಡುವುದು ಸುಲಭವಾಗುವ ಹೊತ್ತಿಗೆ ನಾವೇ ಇರುತ್ತೇವೆಯೋ ಇಲ್ಲವೋ ಎಂದೂ ಕೆಲವರು ಮಮ್ಮಲಮರಗುವುದನ್ನು ಕೇಳಿದ್ದೇವೆ.

ಮಧ್ಯಮವರ್ಗದ ಜನರಲ್ಲಿ ಅನೇಕರು ತಮ್ಮ ದಿನನಿತ್ಯದ ಸಂಚಾರಕ್ಕೆ ಕಂಡುಕೊಂಡ ಪರಿಹಾರ ಓಲಾ ಮತ್ತು ಊಬರ್. ಇವು ಒಂದಷ್ಟು ವರ್ಷ ಗ್ರಾಹಕರಿಗೆ ಅನುಕೂಲ ಹಾಗೂ ಒಳ್ಳೆಯ ಸೇವೆ, ಮತ್ತು ಚಾಲಕರಿಗೆ ಒಳ್ಳೆಯ ಉತ್ಪನ್ನ ಹಾಗೂ ಸುಧಾರಿತ ಜೀವನಶೈಲಿ ಒದಗಿಸಿದ್ದೂ ನಿಜ. ಆದರೆ ಕ್ರಮೇಣ ಕಡಿಮೆಯಾಗುತ್ತ ಬಂದ ಪ್ರೋತ್ಸಾಹಧನ ಹಾಗೂ ಈ ಕಂಪನಿಗಳ ಬದಲಾಗುತ್ತಿದ್ದ ಕಾರ್ಯನೀತಿಗಳಿಂದಾಗಿ (ಎಷ್ಟು ದಿನ ನಷ್ಟದಲ್ಲಿ ಕಂಪನಿ ನಡೆಸಲು ಸಾಧ್ಯ!), ಬೇಡಿಕೆ ಪೂರೈಕೆಗಳಲ್ಲಿ ಅಸಮತೋಲವೇರ್ಪಡುವುದು ಶುರುವಾಯಿತು. ಇದರ ಬೆನ್ನಲ್ಲೇ ಬಂದಪ್ಪಳಿಸಿದ ಕೋವಿಡ್ ಮಾರಿ ಚಾಲಕರಿಗೆ ಕಂಟಕವಾಗಿ, ಕೋವಿಡ್ ನಂತರದ ದಿನಗಳಲ್ಲಿ ಕ್ಯಾಬ್ ಮತ್ತು ಆಟೋಗಳ ಸಂಖ್ಯೆ ಕಡಿಮೆಯಾಗುವಂತಾಯಿತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇತ್ತೀಚೆಗೆ ಯಥಾಸ್ಥಿತಿ ಮರಳುತ್ತಿದ್ದರೂ ಪ್ರಯಾಣಿಕರು ಬೇಗ ಕ್ಯಾಬ್ ಸಿಗದೇ ಪರದಾಡುವುದು ಸಾಮಾನ್ಯವಾಗಿದೆ. ಜೊತೆಗೇ ದರ ಹೆಚ್ಚಾಗಿದ್ದರೂ ಅದರಲ್ಲಿ ದೊಡ್ಡ ಪಾಲು ಈ ಕಂಪನಿಗಳ ಕೋಶಕ್ಕೆ ಸೇರುತ್ತಿರುವುದರಿಂದ ಗ್ರಾಹಕರು ಹಾಗೂ ಚಾಲಕರು ಇಬ್ಬರಿಗೂ ನಷ್ಟ. ಚಾಲಕರು ಕ್ಯಾನ್ಸಲ್ ಮಾಡುವುದು, ಫೋನ್ ಮಾಡಿ ನೀವು ಕ್ಯಾನ್ಸಲ್ ಮಾಡಿ ಅಷ್ಟೇ ಹಣ ನೇರವಾಗಿ ನನಗೆ ಕೊಟ್ಟರೆ ಬರುತ್ತೇನೆ ಎನ್ನುವುದು ನಮ್ಮೆಲ್ಲರ ಅನುಭವಕ್ಕೆ ಬಂದಿರಬಹುದು.

ಇದನ್ನೂ ಓದಿ : ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್

ಇಲ್ಲಿ ಇನ್ನೊಂದು ವಿಲಕ್ಷಣ ಘಟನೆ ನಡೆದದ್ದನ್ನು ಕಾಣಬಹುದು. ಬಹುದೂರದಲ್ಲಿದ್ದ ಊಬರ್ ಆಟೋ ಚಾಲಕ ಸವಾರಿಯನ್ನು ಯಾವ ಕಾರಣಕ್ಕೋ ಒಪ್ಪಿಕೊಂಡುಬಿಟ್ಟಿದ್ದಾನೆ. 71 ನಿಮಿಷದ ಕಾಯುವಿಕೆ! ಇದನ್ನು ಅನುಶಾಂಕ್​ ಜೈನ್ ಎನ್ನುವವರು ಟ್ವೀಟ್ ಮಾಡಿದ್ದೆ ಅದು ಭಾರೀ ಸುದ್ದಿಯಾಗಿಬಿಟ್ಟಿದೆ. ‘ಈ ಚಾಲಕ ನಿಜಕ್ಕೂ ಬಂದರೆ ಅವರ ಬಗ್ಗೆ ನನಗೆ ದೊಡ್ಡ ಗೌರವವಿದೆ’ ಎಂಬ ಒಕ್ಕಣೆಯ ಟ್ವೀಟ್‌ಗೆ, ‘ಅಷ್ಟು ಹೊತ್ತು ಕಾದರೆ ನಿಮ್ಮ ಬಗ್ಗೆ ನಮಗೆ ಇನ್ನೂ ಹೆಚ್ಚು ಗೌರವ’ ಎಂದಿದ್ದಾರೆ ಒಬ್ಬರು. ಕೆಲವರು ಇದನ್ನು ‘ಮರಳಿ ಆಫೀಸಿಗೆ’ ಎಂಬ ಧೋರಣೆ ತಳೆಯುತ್ತಿರುವ ಕಂಪನಿಗಳಿಗೆ ಬುದ್ದಿಮಾತು ಹೇಳಲು ಬಳಸಿಕೊಂಡಿದ್ದಾರೆ. ‘ನಿನಗೆ ಆಟೋ ಸಿಕ್ಕಿದ್ದೇ ಹೆಚ್ಚು…’ ಎಂದು ಕೆಲವರು ವ್ಯಂಗ್ಯದಿಂದ ನುಡಿದ್ದಾರೆ. ಮುಂದೆ ಏನೂ ಆಗಿಲ್ಲ. ಡ್ರೈವರ್ ಒಂದು ನಿಮಿಷದ ನಂತರ ಕ್ಯಾನ್ಸಲ್ ಮಾಡಿದ್ದಾನೆ!

ಇದನ್ನೂ ಓದಿ : Viral Video: ಸೌಮ್ಯ ಸ್ವಭಾವದವರು ಹೀಗೆ ಘೀಳಿಡುತ್ತಾ ಕಾದಾಟಕ್ಕಿಳಿದಿದ್ದೇಕೆ?

ನಿಮಗೂ ಇಂಥ ವಿಚಿತ್ರ ಪ್ರಸಂಗಗಳು ಎದುರಾಗಿವೆಯೇ? ಬೆಂಗಳೂರಿನ ಟ್ರಾಫಿಕ್ ಮತ್ತು ಸಂಚಾರ ಸಮಸ್ಯೆಗಳ ಬಗ್ಗೆ ನಿಮ್ಮ ಮೆಚ್ಚಿನ ಜೋಕುಗಳು ಯಾವುವು? ಗಂಟೆಗಟ್ಟಲೆ ಪಯಣಿಸಬೇಕಾದರೆ ಸ್ಟ್ರೆಸ್ ಕಡಿಮೆ ಮಾಡಿಕೊಳ್ಳಲು ನೀವು ಏನು ಮಾಡುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:20 pm, Wed, 17 May 23

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ