ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್

Lamb : ನೋಡಿ ಇಲ್ಲಿ ಭಾಷೆಯ ಅಗತ್ಯವೇ ಇಲ್ಲ. ಹಾಗೆಯೇ ಧರ್ಮ, ಜಾತಿ, ಪ್ರಾಂತ್ಯದ್ದೂ. ಅಂತಃಕರಣ, ಪ್ರೀತಿಯೊಂದೇ ವಾಹಕ ಎಂದು ಹಲವರು ಹೇಳಿದ್ದಾರೆ. ಈ ಮಗುವಿಗೆ ಕೌಟುಂಬಿಕ ಪ್ರೀತಿ ಎಂದರೆ ಏನು ಎಂದು ಗೊತ್ತು ಎಂದಿದ್ಧಾರೆ ಕೆಲವರು. 

ನಿನ್ನ ಮೇಕೆಯಮ್ಮ ಅಲ್ಲಿದ್ದಾಳೆ ನೋಡು; ಪುಟ್ಟನ ವಿಡಿಯೋ ವೈರಲ್
ನಿನ್ನಮ್ಮ ಅಲ್ಲಿದ್ದಾಳೆ ನೋಡು ಎನ್ನುತ್ತಿರುವ ಪುಟ್ಟಣ್ಣ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 16, 2023 | 4:26 PM

Viral Video : ಮಕ್ಕಳಿಗೆ ಪ್ರಾಣಿ ಪಕ್ಷಿಗಳ ಸಾಂಗತ್ಯ ಹೇಗೆ ಮುದ ನೀಡುತ್ತದೆಯೋ ಅವುಗಳಿಗೂ ಮಕ್ಕಳೆಂದರೆ ತುಂಬಾ ಇಷ್ಟ. ಬೇಕಿದ್ದರೆ ಗಮನಿಸಿ, ಮಕ್ಕಳೊಂದಿಗೆ ಸಾಕುಪ್ರಾಣಿಗಳು ಎಷ್ಟು ಹುಷಾರಿನಿಂದ ಸೂಕ್ಷ್ಮವಾಗಿ ವರ್ತಿಸುತ್ತವೆ ಎಂದು. ಈಗಾಗಲೇ ನೋಡಿರುವ ಬೆಕ್ಕು, ನಾಯಿ, ಹಸುಗಳ ವಿಡಿಯೋದಲ್ಲಿ ನೋಡಿರುತ್ತೀರಿ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಪುಟ್ಟಣ್ಣನೊಂದಿಗೆ ಒಂದು ಕುರಿಮರಿ ಇದೆ. ಮುಂದೇನಾಗುತ್ತದೆ ನೋಡಿ.

ನೋಡು ನಿನ್ನ ಅಮ್ಮ ಅಲ್ಲಿದ್ದಾಳೆ. ನಿನ್ನನ್ನು ಹುಡುಕುತ್ತಿದ್ದಾಳೆ. ಬಾ ಅಲ್ಲಿಗೆ ಹೋಗೋಣ ಎಂದು ಮರಿಯೊಂದಿಗೆ ಅದರ ಅಮ್ಮನ ಬಳಿ ಕರೆದುಕೊಂಡು ಹೋಗುತ್ತಾನೆ ಈ ಪುಟ್ಟಣ್ಣ. ಈ ವಿಡಿಯೋ ನೆಟ್ಟಿಗರ ಹೃದಯವನ್ನು ಸಂಪೂರ್ಣ ಗೆದ್ದಿದೆ. ಪುಟ್ಟ ಕುರಿಗಾಯಿ ಕಾರ್ಯಪ್ರವೃತ್ತನಾಗಿದ್ದಾನೆ ಹುಷಾರ್​! ಎಂದು ಹರ್ಷವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪಡೆದ ಮೊದಲ ಮುತ್ತು! ಅಬ್ಬಾ ಈ ಪುಟ್ಟಣ್ಣನಿಗೆ ಇಷ್ಟೊಂದು ಖುಷಿ ಆಯಿತೆ?

ತನ್ನ ತಾಯಿ ದೂರದಲ್ಲಿ ಬರುತ್ತಿರುವುದನ್ನು ನೋಡಿದ ಕುರಿಮರಿ ಖುಷಿಯಿಂದ ಕುಪ್ಪಳಿಸುತ್ತ ತಾಯಿಯೆಡೆ ಓಡುತ್ತದೆ. ಈ ಪುಟ್ಟಣ್ಣನಿಗೆ ತಾಯಿ ಮಗುವನ್ನು ಒಂದು ಮಾಡಿದ ಖುಷಿ ಮತ್ತು ಸಮಾಧಾನ. ಈ ದೃಶ್ಯವನ್ನು ನೋಡಿದ ಅನೇಕರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ

ಈತನ ಈ ವಿಡಿಯೋ ಅನ್ನು 2.4 ಮಿಲಿಯನ್​ ಜನರು ನೋಡಿದ್ದಾರೆ. ತುಂಬಾ ಕರುಣೆಯಳ್ಳವ ಈ ಪುಟ್ಟ ಎಂದು ಅನೇಕರು ಹೇಳಿದ್ದಾರೆ. ನೋಡಿ ಇಲ್ಲಿ ಭಾಷೆಯ ಅಗತ್ಯವೇ ಇಲ್ಲ. ಹಾಗೆಯೇ ಧರ್ಮ, ಜಾತಿ, ಪ್ರಾಂತ್ಯದ್ದೂ. ಅಂತಃಕರಣ, ಪ್ರೀತಿಯೊಂದೇ ವಾಹಕ ಎಂದು ಹಲವರು ಹೇಳಿದ್ದಾರೆ. ಈ ಮಗುವಿಗೆ ಕೌಟುಂಬಿಕ ಪ್ರೀತಿ ಎಂದರೆ ಏನು ಎಂದು ಗೊತ್ತು ಎಂದಿದ್ಧಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ,

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ