ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ

Bird Love : ಈ ಜಗತ್ತಿನಲ್ಲಿ ತಾನು ಏಕಾಂಗಿ ಎಂದು ಅಂದುಕೊಳ್ಳುವ ಎಲ್ಲರಿಗೂ ‘ಕರುಣೆ’ ಎನ್ನುವುದು ಭರವಸೆಯನ್ನು ನೀಡುತ್ತದೆ. ಮಗು ಮತ್ತು ಮಾಗಿದ ಮನಸಿನಲ್ಲಿ ಮಾತ್ರ ಇದು ಇರಲು ಸಾಧ್ಯ.

ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ
ಪಕ್ಷಿಗಳಿಗೆ ಆಹಾರ ತಿನ್ನಿಸುವ ಬಾಲಕ
Follow us
ಶ್ರೀದೇವಿ ಕಳಸದ
|

Updated on:Feb 07, 2023 | 4:48 PM

Viral Video : ಜಗತ್ತು ಪ್ರಕ್ಷುಬ್ಧ ಎನ್ನಿಸುವ ಹೊತ್ತಿಗೆ ಹೀಗೆ ಕರುಣೆಯನ್ನೇ ಧ್ಯಾನಿಸಲು ದೇವರು ಅವಕಾಶ ಮಾಡಿಕೊಡುತ್ತಾನೆ. ಭರವಸೆಯನ್ನು ಇಷ್ಟು ಬೇಗ ಕಳೆದುಕೊಂಡರೆ ಹೇಗೆ? ಎಂದು ಹೀಗೆ ಪುಟ್ಟದೇವತೆಗಳೊಳಗೆ ಅವತರಿಸಿ ಕೇಳುತ್ತಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಪುಟ್ಟಣ್ಣನೊಬ್ಬ ಪಕ್ಷಿಗಳಿಗೆ ಆಹಾರ ಕೊಡುತ್ತಿದ್ದಾನೆ. ಅವು ಒಂದಾದ ಮೇಲೊಂದು ಪುಟ್ಟ ಬಾಯಿ ತೆಗೆಯುತ್ತ ಮೆಲ್ಲುತ್ತಿವೆ. ಸ್ವೀಕರಿಸುವುದು ಬಹಳ ಸುಲಭ. ಆದರೆ ಕೊಡುವುದು?

ಮಗು ಅಥವಾ ಮಾಗಿದ ಮನಸಿಗೆ ಮಾತ್ರ ಹೀಗಿರಲು ಸಾಧ್ಯ. ಈ ಜಗತ್ತಿನಲ್ಲಿ ತಾನು ಏಕಾಂಗಿ ಎಂದು ಅಂದುಕೊಳ್ಳುವ ಎಲ್ಲರಿಗೂ ಕರುಣೆ ಎನ್ನುವುದು ಭರವಸೆಯನ್ನು ನೀಡುತ್ತದೆ ಎಂಬ ಶೀರ್ಷಿಕೆ ಇದಕ್ಕಿದೆ.

ಈತನಕ ಈ ವಿಡಿಯೋ ಅನ್ನು 1.5 ಮಿಲಿಯನ್​ ಜನರು ನೋಡಿದ್ದಾರೆ. 81,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಪುಟ್ಟ ಕಡ್ಡಿಗಳಿಂದ ಆಹಾರದ ತುಣುಕನ್ನು ಹಕ್ಕಿಗಳ ಬಾಯಿಗೆ ಇಟ್ಟಮೇಲೆ ಆ ಹಕ್ಕಿಗಳು ನಿಂತಲ್ಲೇ ಕುಣಿಯುವುದನ್ನು ಗಮನಿಸಿ. ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಸೈಬರ್ ಸೇಫ್​ ಟೀ; ಗೂಗಲ್​ ಇಂಡಿಯಾ ಝೊಮ್ಯಾಟೋ ಸೇರಿ ತಯಾರಿಸಿದ ‘ಚಹಾ’ ನಿಮಗಾಗಿ

ಈ ಮಗು ಅಪಾರ ಕರುಣೆಯನ್ನು ಹೊಂದಿದೆ ಎಂದು ಶ್ಲಾಘಿಸುತ್ತಾರೆ ನೆಟ್ಟಿಗರು. ಹೀಗೆ ಜಗತ್ತಿನ ಪವಿತ್ರ ಸಂಗತಿಗಳನ್ನು ಕಾಪಾಡಲು ಇಂಥ ಜೀವಗಳು ಹೆಚ್ಚಲಿ ಎಂದು ಹಾರೈಸಿದ್ದಾರೆ ಅನೇಕರು. ಇದು ನಿಜವಾದ ಸೌಂದರ್ಯ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:44 pm, Tue, 7 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ