AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rose Day : ರೋಸ್​ ಡೇ ದಿನವೂ ಇವರು ಹೀಗೆ ಹೆಲ್ಮೆಟ್ ಧರಿಸಿರುವುದು ಏಕೆ?

Valentine's Day 2023 : ಇನ್​ಸ್ಟಾಗ್ರಾಂನ ‘ದ ಮ್ಯಾಕ್ಸ್​ ಗರ್ಲ್​’ ಪ್ರೊಫೈಲಿನಲ್ಲಿ ಕಪಲ್​ ಗೋಲ್ಸ್​ ಎಂಬ ಟ್ಯಾಗಿನಡಿ ಈ ಜೋಡಿ ರೋಸ್​ ಡೇ ಆಚರಿಸಿದೆ. ಆದರೆ ಹೆಲ್ಮೆಟ್​! ಯಾಕೆಂದು ನಿಮಗೇನಾದರೂ ಹೊಳೆಯುವುದೆ?

Rose Day : ರೋಸ್​ ಡೇ ದಿನವೂ ಇವರು ಹೀಗೆ ಹೆಲ್ಮೆಟ್ ಧರಿಸಿರುವುದು ಏಕೆ?
ಹೆಲ್ಮೆಟ್​ ಧರಿಸಿ ರೋಸ್​ ಡೇ ಆಚರಿಸುತ್ತಿರುವ ಜೋಡಿ
TV9 Web
| Updated By: ಶ್ರೀದೇವಿ ಕಳಸದ|

Updated on:Feb 07, 2023 | 12:25 PM

Share

Viral Video : ಈವತ್ತು ರೋಸ್​ ಡೇ. ಅಂದರೆ ವ್ಯಾಲೆಂಟೈನ್ಸ್​ ಡೇ ಆಚರಣೆಯು ಅಧೀಕೃತವಾಗಿ ಇಂದಿನಿಂದ ಶುರು. ಪ್ರೇಮಿಗಳು ಗುಲಾಬಿ ಹೂಗಳನ್ನು ಪರಸ್ಪರ ಕೊಟ್ಟುಕೊಳ್ಳುತ್ತ ಈ ದಿನವನ್ನು ಆಚರಿಸುವ ಧಾವಂತ, ಉತ್ಸಾಹದಲ್ಲಿ ಮುಳುಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಪರಿಮಳವೆಲ್ಲ ಹರಡುತ್ತಿದೆ. ಇದೀಗ ಈ ವಿಡಿಯೋ ಗಮನಿಸಿ. ದ ಮ್ಯಾಕ್ಸ್​ ಗರ್ಲ್​ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ⭕…ᴀᴋɪɴ_ᴍᴀx…⭕ (@a_k_i_n_m_a_x)

ಕನಸುಗಳನ್ನು ಬೆನ್ಹತ್ತುತ್ತಿರುವ ಹುಡುಗಿ ಎಂದು ಈಕೆ ತನ್ನ ಇನ್​ಸ್ಟಾಗ್ರಾಂ ಬಯೋದಲ್ಲಿ ಹೇಳಿದ್ದಾಳೆ. ಈ ಅಕೌಂಟಿನಲ್ಲಿರುವ ಫೋಟೋಗಳಲ್ಲಿ ಈ ಜೋಡಿ ಎಲ್ಲಿಯೂ ತಮ್ಮ ಮುಖವನ್ನು ತೋರಿಸುವಲ್ಲಿ ಆಸಕ್ತಿ ತೋರಿಸಿಲ್ಲ. ಎಲ್ಲಾ ರೀತಿಯ ಉಡುಗೆ ತೊಡುಗೆಯನ್ನು ಧರಿಸಿದ ಇವರು ಹೆಲ್ಮೆಟ್​ ಮಾತ್ರ ಬಿಟ್ಟೇ ಇಲ್ಲ.

ಇದನ್ನೂ ಓದಿ : ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್

ಹಬ್ಬಹರಿದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟೇ ಹೆಲ್ಮೆಟ್ ಧರಿಸಿ ವಿಡಿಯೋ, ಫೋಟೋ ಮಾಡಿ ಅಪ್​ಲೋಡ್ ಮಾಡಿದ್ದಾರೆ. ಸಾಕಷ್ಟು ಉತ್ಸಾಹದಿಂದ ಇವರು ತಮ್ಮ ಪಯಣವನ್ನು ಸಾಗಿಸುತ್ತಿದ್ದಾರೆ. ಆದರೆ ಎಲ್ಲ ಫೋಟೋದಲ್ಲಿಯೂ ಹೆಲ್ಮೆಟ್​​ನಿಂದ ಮುಖವನ್ನು ಮರೆಮಾಡಿರುವುದು ಏಕೆಂದು ತಿಳಿದು ಬಂದಿಲ್ಲ.

ಕಪಲ್​ ಗೋಲ್ಸ್​ ಎಂಬ ಟ್ಯಾಗಿನಡಿ ಎಲ್ಲ ಪೋಸ್ಟ್ ಮಾಡಿದ್ದಾರೆ. ಈವತ್ತು ರೋಸ್​ ಡೇ ಕೂಡ ಹೆಲ್ಮೆಟ್​ ಧರಿಸಿಯೇ ಆಚರಿಸಿದ್ದಾರೆ. ಮುಂದಿನ ಆರು ದಿನಗಳನ್ನೂ ಅವರು ಹೆಲ್ಮೆಟ್​ ಧರಿಸಿಯೇ ಆಚರಿಸುತ್ತಾರೋ ಏನೋ. ನೆಟ್ಟಿಗರಂತೂ ರೋಸ್​ ಡೇಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

ಇವರ ಗುರಿ ಏನಿದೆಯೋ ಗೊತ್ತಿಲ್ಲ. ಆದರೆ ಇವರ ನಡೆ ಮಾತ್ರ ಕುತೂಹಲಕಾರಿಯಾಗಿದೆ.

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 12:10 pm, Tue, 7 February 23

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?