ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Gym : ಬೆಣ್ಣೆ, ಚಿಕನ್​, ಐಸ್​​ಕ್ರೀನ್​ ತಿಂದಮೇಲೆ ವರ್ಕೌಟ್ ಮಾಡಲು ಬಂದಿರಬೇಕು ಎಂದು ಒಬ್ಬರು. ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸಬೇಡಿ ಎಂದು ಇನ್ನೊಬ್ಬರು. ಸೀರೆಯನ್ನೇ ಉಡುವ ಅವಶ್ಯಕತೆ ಏನಿತ್ತು ಎಂದು ಮತ್ತೊಬ್ಬರು.

ಸೀರೆಯುಟ್ಟು ಜಿಮ್​ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಸೀರೆಯುಟ್ಟು ಜಿಮ್ ಮಾಡುತ್ತಿರುವ ಮಹಿಳೆ
Follow us
ಶ್ರೀದೇವಿ ಕಳಸದ
|

Updated on:Feb 07, 2023 | 10:37 AM

Viral Video : ಜಿಮ್​ಗೆ ನೀವು ಸೇರಿದರೆ ಮೊದಲು ಖರೀದಿಸುವುದೇ ವರ್ಕೌಟ್​ಗೆ ಅನುಕೂಲವಾಗುವಂಥ ಟೀ ಶರ್ಟ್​, ಪ್ಯಾಂಟ್​ ಇತ್ಯಾದಿ. ಏಕೆಂದರೆ ಜಿಮ್​ ಸಾಧನಗಳಲ್ಲಿ ವರ್ಕೌಟ್ ಮಾಡುವಾಗ ನೀವು ಧರಿಸಿದ ಬಟ್ಟೆಗಳು ಆದಷ್ಟು ಅನುಕೂಲಕಾರಿಯಾಗಿ ಆರಾಮದಾಯಕವಾಗಿರಬೇಕು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಲ್ಲಿರುವ ಮಹಿಳೆಯು ಸೀರೆಯುಟ್ಟು ಎಷ್ಟೊಂದು ನಿರಾಯಾಸವಾಗಿ ಉತ್ಸಾಹದಿಂದ ವರ್ಕೌಟ್ ಮಾಡುತ್ತಿದ್ದಾಳೆ.

ಫಿಟ್​ನೆಸ್​ ಪ್ರಿಯರನ್ನು ಈ ವಿಡಿಯೋ ಬಹಳ ಆಕರ್ಷಿಸುತ್ತಿದೆ. ಇಂಥ ಹಾರ್ಡ್​ಕೋರ್ ವರ್ಕೌಟ್​ ಅನ್ನು ಈಕೆ ಸೀರೆಯುಟ್ಟು ಮಾಡುತ್ತಿರುವುದನ್ನು ನೋಡಿ ಅಚ್ಚರಿಯಾಗುತ್ತಿದೆ ಎಂದು ಕೆಲವರು. ಈ ವಿಡಿಯೋ ರೀಲ್​ಗಾಗಿ ಮಾಡಿರುವುದು ಎಂದು ಇನ್ನೂ ಕೆಲವರು. ಏನೇ ಮಾಡಿದರೂ ಶ್ರಮ ಅಭ್ಯಾಸವಿಲ್ಲದೆ ಆಗುವುದೆ? ಸೀರೆಯೊಂದನ್ನೇ ಯಾಕೆ ನೋಡುತ್ತಿದ್ದೀರಿ ಎಂದು ಹಲವರು.

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಈಗಾಗಲೇ ಈ ವಿಡಿಯೋ ಅನ್ನು 21,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಸೀರೆಯಲ್ಲಿ ಕೂಡ ಇವರ ಉತ್ಸಾಹ ಅದ್ಭುತ ಎಂದಿದ್ದಾರೆ ಒಬ್ಬರು. ಫ್ಯಾಷನ್​ ವಿಷಯವಾಗಿ ಹೆಣ್ಣುಮಕ್ಕಳನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಚಾಟ್​ಜಿಪಿಟಿ ಕಾರ್ನರ್​​! ನಾವು ಎಲ್ಲವನ್ನೂ ‘ಭಾರತೀಯ’ಗೊಳಿಸುವಲ್ಲಿ ಚಾಣಾಕ್ಷರು

ನೀವು ಬೆಣ್ಣೆ, ಚಿಕನ್​, ಐಸ್​​ಕ್ರೀನ್​, ಜಾಮೂನ್​ ತಿಂದಮೇಲೆ ಈಕೆ ಹೀಗೆ ವರ್ಕೌಟ್ ಮಾಡಲು ಬಂದಿರಬೇಕು ಎಂದಿದ್ದಾರೆ ಮತ್ತೊಬ್ಬರು. ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಎಂದೂ ಕಡೆಗಣಿಸಬೇಡಿ. ಅವರು ನಿಜಕ್ಕೂ ಶಕ್ತಿವಂತರು ಎಂದಿದ್ಧಾರೆ ಮಗದೊಬ್ಬರು. ಈ ಹೆಣ್ಣುಸಿಂಹವು ತನ್ನ ಶಕ್ತಿತೋರಿಸಲು ಸೀರೆಯನ್ನೇ ಉಡಬೇಕಿರಲಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು.

ಇದನ್ನೂ ಓದಿ : ರಾಜ್ಮಾ ಚಾವಲ್​; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್

ಟ್ರ್ಯಾಕ್ಟರ್​ ಚಕ್ರಗಳು ಅಷ್ಟು ಭಾರವಾಗಿರುವುದಿಲ್ಲ. ಇರಲಿ ಈಕೆ ಹೀಗೆ ಸೀರೆಯುಟ್ಟಾದರೂ ವರ್ಕೌಟ್ ಮಾಡುತ್ತಿದ್ದಾಳೆ ಅದಕ್ಕೆ ಪೂರ್ಣ ಅಂಕಗಳನ್ನು ಕೊಡೋಣ ಎಂದು ಒಬ್ಬರು ಹೇಳಿದ್ದಾರೆ. ಅವಳ ಉತ್ಸಾಹಕ್ಕೆ ಸಲಾಮ್​ ಎಂದು ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:34 am, Tue, 7 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ