ಚಾಟ್ಜಿಪಿಟಿ ಕಾರ್ನರ್! ನಾವು ಎಲ್ಲವನ್ನೂ ‘ಭಾರತೀಯ’ಗೊಳಿಸುವಲ್ಲಿ ಚಾಣಾಕ್ಷರು
ChatGPT : ಈ ಫೋಟೋ, ಫೋಟೋಶಾಪ್ ಮಾಡಿದ್ದೇ? ಆನಂದ ಮಹೀಂದ್ರಾ ಅವರಿಗೆ ಅನುಮಾನ ಬಂದಿದೆ. ಮಾಡಿದ್ದರೂ ಇದು ಬುದ್ಧಿವಂತಿಕೆಯಿಂದ ಕೂಡಿದೆ ಎಂದಿದ್ದಾರೆ.
Viral News : ನಿನ್ನೆಯಷ್ಟೇ ಚಾಟ್ಜಿಪಿಟಿ (ChatGPT) ಒಬ್ಬ ವ್ಯಕ್ತಿಗೆ ಡ್ರಗ್ಸ್ ಬಿಝಿನೆಸ್ ಮಾಡಲು ಸಲಹೆಗಳನ್ನು ಕೊಟ್ಟಿರುವ ಸುದ್ದಿಯನ್ನು ಓದಿದಿರಿ. ಈಗೀಗಲಂತೂ ಎಲ್ಲೆಡೆ ಚಾಟ್ಜಿಪಿಟಿಯದೇ ಸುದ್ದಿ. ಇದೀಗ ಭಾರತದಲ್ಲಿ ಒಂದು ಹೊಸ ಚಾಟ್ಜಿಪಿಟಿ ಕಾರ್ನರ್ ಶುರುವಾಗಿದೆ. ನೆಟ್ಟಿಗರೆಲ್ಲ ಇದನ್ನು ಬಾಯಲ್ಲಿ ನೀರೂರಿಸಿಕೊಂಡು ನೋಡುತ್ತಿದ್ದಾರೆ. ಈ ಗೋಲ್ಗಪ್ಪಗಳನ್ನು ತಿಂದರೆ ನಮಗೆ ಬೇಕಾದ ಉತ್ತರಗಳೆಲ್ಲವೂ ಸಿಗುತ್ತವಾ? ಎಂದು ಕೇಳುತ್ತಿದ್ದಾರೆ.
This looks photoshopped but it’s clever, nonetheless. We know how to ‘Indianize’ & de-mystify everything we encounter! pic.twitter.com/zg6HCKo1MN
ಇದನ್ನೂ ಓದಿ— anand mahindra (@anandmahindra) February 6, 2023
ಈ ಪೋಸ್ಟ್ ಅನ್ನು ಉದ್ಯಮಿ ಆನಂದ ಮಹೀಂದ್ರಾ ಇದೀಗ ಟ್ವೀಟ್ ಮಾಡಿದ್ದಾರೆ. ಪೇಟಿಎಂನ ಸ್ಥಾಪಕ ವಿಜಯ ಶೇಖರ್ ಶರ್ಮಾ ಕೂಡ ಇದನ್ನು ಟ್ವೀಟ್ ಮಾಡಿದ್ದಾರೆ. ಚಾಟ್ ಎಂದರೆ ಯಾರಿಗೆ ಗೊತ್ತಿಲ್ಲ? ಭಾರತೀಯರೆಲ್ಲರ ರುಚಿಧಾತುಗಳನ್ನು ಹಿಡಿದಿಟ್ಟುಕೊಂಡಂಥ ಅದ್ಭುತ ಶಕ್ತಿ ಇದಕ್ಕಿದೆ. ಆದರೆ ಈಗ ಚಾಲ್ತಿಯಲ್ಲಿರುವ ಚಾಟ್ಜಿಪಿಟಿ ತಂತ್ರಜ್ಞಾನ ಮಾತ್ರ ಜಗತ್ತಿನ ಮೆದುಳುಗಳನ್ನೆಲ್ಲ ತನ್ನೆಡೆ ಸೆಳೆದಿಟ್ಟುಕೊಳ್ಳುತ್ತಲೇ ಇದೆ. ಚುರುಕಾದ ತನ್ನ ಕೃತಕ ಬುದ್ಧಿಮತ್ತೆ (AI)ಯಿಂದ ತನ್ನ ಬಗ್ಗೆ ಕುತೂಹಲ ಹುಟ್ಟುಹಾಕುತ್ತಲೇ ಇದೆ.
ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್
ಚಾಟ್ ಜಿಪಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಚಾಟ್ಬಾಟ್ ಈ ಎಲ್ಲವೂ ಸಾಮಾಜಿಕ ಜಾಲತಾಣಗಳನ್ನು ಆಳುತ್ತಿವೆ. ಈ ಸಂದರ್ಭದಲ್ಲಿ ಇದೀಗ ವೈರಲ್ ಆಗುತ್ತಿರುವ ಈ ಚಾಟ್ ಅಂಗಡಿಯ ಚಿತ್ರ ಫೋಟೋಶಾಪ್ ಮಾಡಿರಲೂ ಸಾಧ್ಯವಿದೆ. ಬೇಕೆಂದೇ ಮಾಡಿದ್ದರೂ ಇದು ಬುದ್ಧಿವಂತಿಕೆಯಿಂದ ಕೂಡಿದೆ. ಭಾರತೀಯರಾದ ನಾವುಗಳು ಎಲ್ಲವನ್ನೂ ‘ಭಾರತೀಯ’ತೆಗೆ ಒಗ್ಗಿಸಿಕೊಳ್ಳುವ ಖಯಾಲಿಯನ್ನು ಹೊಂದಿದ್ದೇವೆ! ಎಂದಿದ್ದಾರೆ ಆನಂದ ಮಹೀಂದ್ರಾ.
ಇದನ್ನೂ ಓದಿ : ರಾಜ್ಮಾ ಚಾವಲ್; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್
ಅನೇಕರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನು AI – Aloo+Imli ಯಿಂದ ನಿರ್ವಹಿಸಲಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಹಾಂ ನಾವು ಅನೇಕ ವಿಷಯಗಳನ್ನು ಹೀಗೆ ‘ಭಾರತೀಯ’ಗೊಳಿಸುವ ಕೌಶಲವನ್ನು ಹೊಂದಿದ್ದೇವೆ. ಹೀಗೆ ಮಾಡುತ್ತಲೇ ಇಂಥ ವಿಷಯಗಳನ್ನು ಒಂದು ಸ್ತರ ಹೆಚ್ಚೇ ಮೇಲಕ್ಕೆ ಕೊಂಡೊಯ್ಯುತ್ತೇವೆ ಎಂದಿದ್ದಾರೆ ಇನ್ನೊಬ್ಬರು. ದಯವಿಟ್ಟು ಒಂದು ಪ್ಲೇಟ್ ಗೋಲ್ಗಪ್ಪ, ಆಲೂಚಾಟ್ ಎಂದು ಮಗದೊಬ್ಬರು ಕೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 9:45 am, Tue, 7 February 23