ಸೀರೆಯುಟ್ಟ ಅಜ್ಜಿ ನದಿಗೆ ಧುಮುಕಿದ್ದಕ್ಕೆ ಭಲೇ ಭಲೇ ಎನ್ನುತ್ತಿರುವ ನೆಟ್ಟಿಗರು
TamilNadu : ಈ ವಯಸ್ಸಿನಲ್ಲಿ ಈ ಹಿರಿಯ ಮಹಿಳೆ ಹೀಗೆ ಸೀರೆಯುಟ್ಟು ನದಿಗೆ ಹಾರುವುದೆಂದರೆ? ಎಂದು ಕೆಲವರು. ಇದೆಲ್ಲವೂ ತೀರಾ ಸಾಮಾನ್ಯ ಹಳ್ಳಿಗಳಲ್ಲಿ ಎಂದು ಇನ್ನೂ ಕೆಲವರು. ನೋಡಿ ವಿಡಿಯೋ.
Viral Video : ತಮಿಳುನಾಡಿನ ತಾಮಿರಬರಣಿ ನದಿ ಇದು. ಈ ನದಿಯೊಳಗೆ ಕೆಲವರು ಮುಳುಗು ಹಾಕುತ್ತ ಸ್ನಾನ ಮಾಡುತ್ತಿದ್ದಾರೆ. ಆದರೆ ನೋಡನೋಡುತ್ತಿದ್ದಂತೆ ಸೀರೆಯುಟ್ಟ ಹಿರಿಯ ಮಹಿಳೆಯೊಬ್ಬರು ಮೇಲಿನಿಂದ ಈ ನದಿಗೆ ಧುಮುಕುತ್ತಾರೆ. 20 ಸೆಕೆಂಡುಗಳ ಈ ವಿಡಿಯೋ ಇದೀಗ ನೆಟ್ಟಿಗರಲ್ಲಿ ಅಚ್ಚರಿ ಉತ್ಸಾಹ ಮೂಡಿಸುತ್ತಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಹಂಚಿಕೊಂಡಿದ್ದಾರೆ.
Awestruck to watch these sari clad senior women effortlessly diving in river Tamirabarni at Kallidaikurichi in Tamil Nadu.I am told they are adept at it as it is a regular affair.?Absolutely inspiring ? video- credits unknown, forwarded by a friend #women #MondayMotivation pic.twitter.com/QfAqEFUf1G
ಇದನ್ನೂ ಓದಿ— Supriya Sahu IAS (@supriyasahuias) February 6, 2023
ಕಲ್ಲಿಡೈಕುರಿಚಿಯ ತಾಮಿರಬರಣಿ ನದಿಯಲ್ಲಿ ಹೀಗೆ ಈ ಹಿರಿಯ ಮಹಿಳೆ ಧುಮುಕಿದ್ದು ಯಾರಿಗೂ ಅಚ್ಚರಿ ಹುಟ್ಟಿಸುವಂಥದ್ದೇ. ಆದರೆ ಇದು ಇವರ ನಿತ್ಯ ಅಭ್ಯಾಸ. ಕೆಳಗಿರುವ ನೀರಿನಲ್ಲಿ ಮೀಯುತ್ತಿರುವ ಮಹಿಳೆಯರ ಗುಂಪನ್ನು ಗಮನಿಸಿ. ಈಗಾಗಲೇ ಈ ವಿಡಿಯೋ ಅನ್ನು 1.8 ಲಕ್ಷ ಜನರು ನೋಡಿದ್ದಾರೆ. 1,500 ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ತಾಮಿರಬರಣಿ ನದಿಗೆ ಅನೇಕ ರೋಗರುಜಿನುಗಳನ್ನು ಗುಣಪಡಿಸುವ ಶಕ್ತಿ ಇದೆ. ಈ ಶುದ್ಧವಾದ ನೀರು ಹೀಗೇ ಹರಿಯುತ್ತಿರಬೇಕು. ನಮ್ಮ ದೇಶದ ಇತರೇ ದೊಡ್ಡ ನದಿಗಳಂತೆ ಈ ನದಿಯೂ ಕಲುಷಿತಗೊಳ್ಳಬಾರದು ಎಂದು ಕೆಲವರು ಆಶಿಸಿದ್ದಾರೆ.
ಇದನ್ನೂ ಓದಿ : ಸೀರೆಯುಟ್ಟು ಜಿಮ್ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ತಮಿಳುನಾಡು, ಭಾರತೀಯ ಮಹಿಳೆಯರಿಗೆ ಸುರಕ್ಷಿತ ಭಾವವನ್ನು ಕೊಡುವ ರಾಜ್ಯವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಹಳ್ಳಿಗಳಲ್ಲೆಲ್ಲ ಇದು ತೀರಾ ಸಾಮಾನ್ಯ. ಗಂಡಸು, ಹೆಣ್ಣುಮಕ್ಕಳು, ಮಕ್ಕಳು ಹೀಗೆ ನದಿಗಳಿಗೆ ಎತ್ತರದಿಂದ ಧುಮುಕುವುದು ತೀರಾ ಸಾಮಾನ್ಯ. ಹೀಗೆ ಧುಮುಕುವುದರಲ್ಲಿ ಅವರ ಪ್ರವೀಣರು ಎಂದು ಮತ್ತೊಬ್ಬರು ಹೇಳಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:20 am, Tue, 7 February 23