ಸೈಬರ್ ಸೇಫ್ ಟೀ; ಗೂಗಲ್ ಇಂಡಿಯಾ ಝೊಮ್ಯಾಟೋ ಸೇರಿ ತಯಾರಿಸಿದ ‘ಚಹಾ’ ನಿಮಗಾಗಿ
Google : ನಿಮ್ಮ ಅಕೌಂಟ್ ಸುರಕ್ಷಿತವಾಗಿ ಇರಬೇಕೆಂದರೆ ಎಂಥ ಪಾಸ್ವರ್ಡ್ ಇರಬೇಕು. ಅದನ್ನು ಹೇಗೆ ರಚಿಸಬೇಕು ಎನ್ನುವ ಸರಳ ಮಾದರಿಯನ್ನು ಈ ಎರಡೂ ಕಂಪೆನಿಗಳು ಚಹಾ ಪಾಕವಿಧಾನದ ಮೂಲಕ ತಿಳಿಸಿವೆ. ನೋಡಿ ವಿಡಿಯೋ.
Viral Video : ನಮ್ಮ ಇಡೀ ಜೀವನವೇ ಡಿಜಿಟಲ್ನೊಳಗೆ ಬೆಸೆದುಕೊಂಡಿದೆ. ಹೀಗಿರುವಾಗ ಸೈಬರ್ ಸೇಫ್ಟಿ ಬಗ್ಗೆ ಆತಂಕ ಆಗಿದಿರುತ್ತದೆಯೇ? ನೂರಾಎಂಟು ಪಾಸ್ವರ್ಡ್ಗಳನ್ನು ಸೃಷ್ಟಿಸುವುದು, ನೆನಪಿಟ್ಟುಕೊಳ್ಳುವುದು ಇದೆಲ್ಲಾ ಎಷ್ಟು ತಲೆನೋವಿನ ಕೆಲಸ. ಒಂದು ಮಾಡಲು ಹೋಗಿ ಇನ್ನೊಂದೇನೋ ಆಗುತ್ತಲೇ ಇರುತ್ತದೆ. ಇದೆಲ್ಲದೆ ಮಧ್ಯೆ ನಮ್ಮ ಅಕೌಂಟುಗಳು ಎಷ್ಟು ಸುರಕ್ಷಿತವಾಗಿವೆ ಎಂಬ ಆತಂಕ ಸದಾ ಕಾಡುತ್ತಲೇ ಇರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಗೂಗಲ್ ಇಂಡಿಯಾ, ಝೊಮ್ಯಾಟೋ ಸೇರಿ ‘ಸೈಬರ್ ಸೇಫ್ ಟೀ’ ಪಾಕವಿಧಾನದ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿView this post on Instagram
ಇಂದು ಎಲ್ಲವೂ ಒಂದು ಕ್ಲಿಕ್ನಲ್ಲಿ! ಆದ್ದರಿಂದ ಸುರಕ್ಷತೆಗಾಗಿ ಭದ್ರವಾದ ಪಾಸ್ವರ್ಡ್ ಸೃಷ್ಟಿಸುವುದು ಅತ್ಯಂತ ಅವಶ್ಯಕ. ಇದನ್ನು ಬರಹದಲ್ಲಿ, ಮಾತಿನಲ್ಲಿ ಹೇಳಿದರೆ ಸಾಕೆ? ಈಗಿನದು ದೃಶ್ಯಮಾಧ್ಯಮ. ಈ ಮಾಧ್ಯಮದ ಮೂಲಕ ಹೇಳಿದರೇ ಹೆಚ್ಚು ಜನರಿಗೆ ತಲುಪುತ್ತದೆ ಮತ್ತು ತಿಳಿಯುತ್ತದೆ ಎಂಬ ನಂಬಿಕೆಯಲ್ಲಿ ಗೂಗಲ್ ಮತ್ತು ಝೊಮ್ಯಾಟೋ ಈ ಪರಿಕಲ್ಪನೆ ರೂಪಿಸಿರುವ ಸಾಧ್ಯತೆ ಇದೆ.
ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ
ನಿನ್ನೆ ಅಪ್ಲೋಡ್ ಮಾಡಲಾದ ಈ ವಿಡಿಯೋ ಅನ್ನು ಈತನಕ 26,000 ಜನರು ಇಷ್ಟಪಟ್ಟಿದ್ದಾರೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸಾಕಷ್ಟು ಜನರು ಸೃಜನಶೀಲವಾಗಿ ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಪಾಸ್ವರ್ಡ್ ಅನ್ನು ಊಟ, ತಿಂಡಿಯಂತೆ ಭಾವಿಸಿ. ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದಿದ್ದಾರೆ ಒಬ್ಬರು. ಗ್ರೀನ್ಟೀ ಕುಡಿಯುವವರು ವೀಕ್ ಪಾಸ್ವರ್ಡ್ ಹೊಂದಿರುತ್ತಾರೆ ಹಾಗಿದ್ದರೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್
ಕಾಫಿಪ್ರಿಯರಿಗೆ ಈ ಪಾಸ್ವರ್ಡ್ ಅಮಾನ್ಯ ಎಂದು ಒಬ್ಬರು. ನೀವು ತಯಾರಿಸಿದ ಈ ರೆಸಿಪಿ ಕೇವಲ ಭಾರತೀಯರಿಗೆ ಮಾತ್ರ ಎಂದು ಮತ್ತೊಬ್ಬರು. ಬೆಸ್ಟ್ ಮಾರ್ಕೆಟಿಂಗ್ ಅವಾರ್ಡ್ ಝೊಮ್ಯಾಟೋಗೆ ಎಂದಿದ್ದಾರೆ ಇನ್ನೂ ಒಬ್ಬರು. ನೀವಿಬ್ಬರೂ ಸೇರಿ ಒಂದು ಕೋರ್ಸ್ ಅನ್ನೇ ಶುರುಮಾಡಿ ಇದಕ್ಕಾಗಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನೀವು ನಿಮ್ಮ ಪಾಸ್ವರ್ಡ್ ರೀಸೆಟ್ ಮಾಡಲು ಶುರು ಮಾಡುವಿರೋ ಹೇಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ