ಬೆಕ್ಕಿನಮರಿಗಳಿಗೂ ಹುಚ್ಚು ಹಿಡಿಸಿರುವ ‘ವೆಡ್ನೆಸ್ಡೇ’ ಹಾಡು; ನೋಡಿ ವಿಡಿಯೋ
Wednesday : ನೆಟ್ಫ್ಲಿಕ್ಸ್ನ ವೆಡ್ನೆಸ್ಡೇ ಸೀರಿಸ್ನ ಈ ಹಾಡು ಯಾರನ್ನೂ ನಿಂತನಿಂತಲ್ಲಿಯೇ ಕುಣಿಯುವಂತೆ ಮಾಡುತ್ತದೆ. ಮಕ್ಕಳ ರಾಷ್ಟ್ರಗೀತೆಯಂತೆ ಜನಮನ ಗೆದ್ದಿರುವ ಈ ಹಾಡು ಬೆಕ್ಕಿನಮರಿಗಳನ್ನೂ ಇದೀಗ...
Viral Video : ಈಗ ಕಿಶೋರಾವ್ಥೆಯಿಂದ ಹಿಡಿದು ಹದಿಹರೆಯದ ಮಕ್ಕಳ ರಾಷ್ಟ್ರಗೀತೆಯಂತೆ ಪ್ರಚಲಿತವಾಗಿ ಈ ವೆಡ್ನೆಸ್ಡೇ ಹಾಡು. ನೆಟ್ಫ್ಲಿಕ್ಸ್ನಲ್ಲಿ ಈ ವೆಬ್ಸೀರೀಸ್ ನೋಡಬಹುದಾಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮೂರು ಬೆಕ್ಕಿನ ಮರಿಗಳಿಗೆ ಈ ಹಾಡಿನ ಲಯಕ್ಕೆ ತಕ್ಕಂತೆ ಡ್ಯಾನ್ಸ್ ಮಾಡಿಸಿದ್ದಾರೆ ಇವುಗಳನ್ನು ಸಾಕಿದ ಪೋಷಕರು. ನೆಟ್ಟಿಗರಂತೂ ಇವುಗಳಂತೆಯೇ ಕಣ್ಣು ಬಿಟ್ಟುಕೊಂಡ ಬೆರಗಿನಿಂದ ನೋಡುತ್ತಿದ್ದಾರೆ.
View this post on Instagram
ಜನವರಿ 10ರಂದು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಈ ವಿಡಿಯೋ ಅನ್ನು 27 ಮಿಲಿಯನ್ ಜನರು ನೋಡಿದ್ದಾರೆ. 2 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video : ಈ ಪಕ್ಷಿಗಳೂ ಈ ಬೆಕ್ಕುಗಳೂ, ಹೀಗೊಂದು ಕಾಳಗ
ಅಬ್ಬಾ ನನ್ನಿಷ್ಟದ ಈ ಹಾಡಿಗೆ ಈ ಮರಿಗಳು ಎಷ್ಟು ಚೆಂದ ಕತ್ತು ಅಲ್ಲಾಡಿಸಿವೆ. ನಾನಿನ್ನು ಈ ಹಾಡು ಕೇಳಬೇಕೆನ್ನಿಸಿದಾಗೆಲ್ಲ ಈ ವಿಡಿಯೋ ನೋಡುತ್ತೇನೆ ಎಂದಿದ್ದಾರೆ ಒಬ್ಬರು. ಈ ದಿನ ನಾನು ಇದಕ್ಕಿಂತ ಮುದ್ದಾದ ವಿಡಿಯೋ ನೋಡಿಲ್ಲ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ
ಒಂದು ಕಡ್ಡಿಯಂಥದ್ದೇನೋ ಅವುಗಳ ಮುಂದೆ ಹಿಡಿದು ಅತ್ತಿಂದಿತ್ತ ಇತ್ತಿಂದಿತ್ತ ಅಲ್ಲಾಡಿಸಿದ ಹಾಗಿದೆ. ಅದಕ್ಕೆ ತಕ್ಕಂತೆ ಇವು ಕತ್ತನ್ನು ಅಲುಗಾಡಿಸಿವೆ. ಆದರೆ ಎಷ್ಟು ಲಯಬದ್ಧವಾಗಿದೆ ಇದು. ಬಹಳ ಇಷ್ಟಪಡುತ್ತಿದ್ದೇನೆ ಎನ್ನುತ್ತಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್
ಯಾರಾದರೂ ಇದು ಪ್ರಾಣಿಹಿಂಸೆ ಎಂದು ಪ್ರತಿಕ್ರಿಯಿಸುವರೋ ಎಂದು ಕಾಯುತ್ತಿದ್ದೇನೆ ಎಂದು ಮಗದೊಬ್ಬರು ಹೇಳಿದ್ದಾರೆ. ಬೆಕ್ಕಿನ ವಿರೋಧಿಗಳು ಇದು ಎಡಿಟೆಡ್ ಎಂದು ಹೇಳಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಜಗತ್ತಿನಲ್ಲಿ ಬೆಕ್ಕಿಗಿಂತ ಮುದ್ದಾದದ್ದು ಏನೂ ಇಲ್ಲ ಎಂದು ಹಲವಾರು ಜನ ಹೇಳಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:38 pm, Tue, 7 February 23