ರಾಜ್ಮಾ ಚಾವಲ್​; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್

Tattoo : ಸ್ವಿಗ್ಗಿ ಈ ಫೋಟೋ ಅನ್ನು ಟ್ವೀಟ್ ಮಾಡಿದೆ. ನೆಟ್ಟಿಗರೆಲ್ಲ ನಾನು ವಡಾ ಪಾವ್​, ನಾನು ಜಾಮೂನ್​, ನಾನು ಚಹಾ, ನಾನು ಆಲೂ ದಮ್ ಹೀಗೆ ತಮ್ಮಿಷ್ಟದ ತಿಂಡಿತೀರ್ಥಗಳ ಟ್ಯಾಟೂ ಹಾಕಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ನೀವು?

ರಾಜ್ಮಾ ಚಾವಲ್​; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್
ರಾಜ್ಮಾ ಚಾವಲ್ ಎಂದು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on:Feb 06, 2023 | 5:09 PM

Viral Video : ಮೊದಲು ಹಣೆ, ಕೈಮೇಲಷ್ಟೇ ನಿರ್ದಿಷ್ಟ ವಿನ್ಯಾಸದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಬಹಳವೆಂದರೆ ಕೈಮೇಲೆ ಪ್ರೀತಿಪಾತ್ರರ ಹೆಸರುಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಆದರೆ ಈಗ ಹಾಗಲ್ಲ. ಪ್ರೀತಿಪಾತ್ರರ ಹೆಸರಿನೊಂದಿಗೆ ಫೋಟೋ ಕೂಡ ಹಾಕಿಸಿಕೊಳ್ಳುತ್ತಾರೆ. ಇಷ್ಟವಾದ ಯಾವ ವಿನ್ಯಾಸವನ್ನೂ, ಛಾಯಾಚಿತ್ರವನ್ನೂ ದೇಹದ ಯಾವುದೇ ಭಾಗದಲ್ಲಿಯೂ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಈ ಫೋಟೋ ನೋಡಿ. ಸ್ವಿಗ್ಗಿ ಇದನ್ನು ಟ್ವೀಟ್ ಮಾಡಿದೆ. ಒಬ್ಬ ವ್ಯಕ್ತಿ ರಾಜ್ಮಾ ಚಾವಲ್​ ಎಂದು ತನ್ನ ಹೊರದೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ನೆಟ್ಟಿಗರು ಈ ಬಗ್ಗೆ ಸಾಕಷ್ಟು ಕುತೂಹಲದಿಂದ ಚರ್ಚಿಸುತ್ತಿದ್ದಾರೆ.

ಎಲ್ಲಾ ಬಿಟ್ಟು ಈ ವ್ಯಕ್ತಿ ಹೀಗೆ ಯಾಕೆ ಹಾಕಿಸಿಕೊಂಡಿದ್ದು ಎಂದು ಯೋಚಿಸುತ್ತಿದೆ ನೆಟ್​ಮಂದಿ. ನಾನು ವಡಾ ಪಾವ್​​, ಪಾವ್​ ಭಾಜಿ ಎಂದು ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ ಒಬ್ಬರು. ಇದು ನಮ್ಮ ನಿತ್ಯದ ಆಹಾರ, ಇದರಲ್ಲಿ ನನಗೆ ಅಸಹಜ ಎಂದು ಅನ್ನಿಸಿಲ್ಲ ಎಂದಿದ್ದಾರೆ ಮತ್ತೊಬ್ಬರು. ನಾನು ಚೋಲೆ ಬಟೂರೆ ಎಂದು ಹಾಕಿಸಿಕೊಳ್ಳುತ್ತೇನೆ ಎಂದು ಇನ್ನೊಬ್ಬರು. ನಾನು ಚಹಾ ಎಂದು ಹಾಕಿಸಿಕೊಳ್ಳುತ್ತೇನೆ ಎಂದು ಮಗದೊಬ್ಬರು.

ಇದನ್ನೂ ಓದಿ : ಯುರೋಪ್​ಗೆ ಡ್ರಗ್ಸ್​​ ಕಳ್ಳಸಾಗಣೆ ಮಾಡುವುದು ಹೇಗೆ? ವ್ಯಕ್ತಿಯೊಬ್ಬನಿಗೆ ಚಾಟ್​ಜಿಪಿಟಿ ಸಲಹೆ ಕೊಟ್ಟಾಗ

ಈ ಪೋಸ್ಟ್​​ ಅನ್ನು ಈಗಾಗಲೇ 15,000 ಜನರು ನೋಡಿದ್ದಾರೆ. 147 ಜನ ಇಷ್ಟಪಟ್ಟಿದ್ದಾರೆ. 14 ಜನರು ರೀಟ್ವೀಟ್ ಮಾಡಿದ್ದಾರೆ. ನಾನಂತೂ ಈ ವ್ಯಕ್ತಿಯನ್ನು ಪೂರ್ತಿ ಬೆಂಬಲಿಸುತ್ತೇನೆ ಎಂದಿದ್ದಾರೆ ಒಬ್ಬರು. ನಾನಂತೂ ಗುಲಾಬ್​ ಜಾಮೂನ್ ಎಂದು ಹಾಕಿಸಿಕೊಳ್ಳುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ದಮ್ ಆಲೂ ಎಂದು ಇನ್ನೂ ಒಬ್ಬರು ಹೇಳಿದ್ದಾರೆ.

ಇದನ್ನು ನೋಡಿ ನಿಮಗೇನಾದರೂ ಹೀಗೆ ಟ್ಯಾಟೂ ಹಾಕಿಸಿಕೊಳ್ಳಬೇಕು ಅನ್ನಿಸಿತೆ? ಹಾಗಿದ್ದರೆ ನಿಮ್ಮಿಷ್ಟದ ಯಾವ ತಿಂಡಿಯ ಹೆಸರನ್ನು ನೀವು ಎಲ್ಲಿ ಹಾಕಿಸಿಕೊಳ್ಳಲು ಬಯಸುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:08 pm, Mon, 6 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ