AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡಿನ ಪಾರ್ಕ್​ನಲ್ಲಿ ಜೀವಂತ ಬೆಕ್ಕನ್ನು ಚೀಲದಲ್ಲಿ ಕಟ್ಟಿ ಎಸೆದಾಗ…

Cat : ಜನವರಿ 26ರಂದು ಈ ಘಟನೆ ನಡೆದಿದೆ. ನಾಯಿಯೊಂದಿಗೆ ಪಾರ್ಕ್​ಗೆ ವಾಕಿಂಗ್​ ಬಂದ ಮಹಿಳೆ ಈ ಬೆಕ್ಕನ್ನು ನೋಡಿದ್ದಾರೆ. ತಕ್ಷಣವೇ ಪ್ರಾಣಿ ದತ್ತಿ ಸಂಘಕ್ಕೆ ವಿಷಯ ತಿಳಿಸಿದ್ದಾರೆ. ಆತಂಕ, ಒತ್ತಡಕ್ಕೆ ಒಳಗಾಗಿದ್ದ ಬೆಕ್ಕು ಚಿಕಿತ್ಸೆ ಪಡೆಯುತ್ತಿದೆ.

ಇಂಗ್ಲೆಂಡಿನ ಪಾರ್ಕ್​ನಲ್ಲಿ ಜೀವಂತ ಬೆಕ್ಕನ್ನು ಚೀಲದಲ್ಲಿ ಕಟ್ಟಿ ಎಸೆದಾಗ...
ಪ್ರಾತಿನಿಧಿಕ ಚಿತ್ರ
ಶ್ರೀದೇವಿ ಕಳಸದ
|

Updated on:Feb 06, 2023 | 5:55 PM

Share

Viral News : ಬೆಕ್ಕೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮುದ್ದುಮುದ್ಧಾಗಿರುವ ಮೆತ್ತಗಿನ ಈ ಸಾಕುಪ್ರಾಣಿಗೂ ಮನುಷ್ಯರ ಸಹವಾಸ ಬೇಕೇಬೇಕು. ಆದರೆ ಇಷ್ಟು ಮುದ್ದಾದ ಪ್ರಾಣಿಯನ್ನು ಯಾರಿಗಾದರೂ ಬೀದಿಯಲ್ಲಿ ಬಿಡಲು ಸಾಧ್ಯವೆ? ಇಂಥದ್ದರಲ್ಲಿ ಇಂಗ್ಲೆಂಡಿನ ಪಾರ್ಕ್​ನಲ್ಲಿ ಯಾರೋ ಒಬ್ಬರು ಜೀವಂತ ಬೆಕ್ಕನ್ನು ಚೀಲದಲ್ಲಿ ಕಟ್ಟಿ ಎಸೆದು ಹೋಗಿದ್ದಾರೆ. ಇದು ಬೆಕ್ಕುಪ್ರಿಯರನ್ನು ಗಾಸಿಗೊಳಿಸಿದೆ. ಇದೀಗ ಈ ಬೆಕ್ಕು ರೊಥರ್ ಹ್ಯಾಮ್​ ಜಿಲ್ಲಾಪ್ರಾಣಿ ಕೇಂದ್ರದಲ್ಲಿ ವೈದ್ಯರ ಆರೈಕೆಯಲ್ಲಿದೆ.

ಇದನ್ನೂ ಓದಿ : ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್

ಈ ಬೆಕ್ಕು ಡೇನ್​ ಪಾರ್ಕ್​ನಲ್ಲಿ ಪತ್ತೆಯಾಗಿದೆ. ಲಾಂಡ್ರಿ ಝಿಪ್​ ಅಪ್​ ಬ್ಯಾಗ್​ನಲ್ಲಿ ಹಾಕಿ ಯಾರೋ ಎಸೆದು ಹೋಗಿದ್ದರು. ತನ್ನ ನಾಯಿಯೊಂದಿಗೆ ವಾಕಿಂಗ್​ ಬಂದ ಮಹಿಳೆಯೊಬ್ಬರು ಇದನ್ನು ಗಮನಿಸಿದ್ದಾರೆ. ನಂತರ ಅದನ್ನು ಎತ್ತಿಕೊಂಡು ಝಿಪ್​ ಅನ್​​ಲಾಕ್​ ಮಾಡಿ ಪ್ರಾಣಿ ದತ್ತಿ ಸಂಸ್ಥೆಗೆ ಸುದ್ದಿ ಮುಟ್ಟಿಸಿದ್ದಾರೆ. ಜನವರಿ 26ರಂದು ಈ ಘಟನೆ ನಡೆದಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ರಾಶಿ ಪೆಂಗ್ವಿನ್​​ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ

ಬೂದು ಮತ್ತು ಬಿಳೀ ಬಣ್ಣದ ಮೂರು ವರ್ಷದ ಬೆನ್ನು ಬಹಳಷ್ಟು ಒತ್ತಡ ಮತ್ತು ಆತಂಕಕ್ಕೆ ಈಡಾಗಿತ್ತು. ಇದು ಸಾಕಿದ ಬೆಕ್ಕಾದರೂ ಬೇಡವೆಂದು ಹೀಗೆ ಬೀದಿಗೆ ಎಸೆದ ಬೆಕ್ಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಯಾವ ಪ್ರಾಣಿಗಳನ್ನು ಹೀಗೆ ಕ್ರೂರವಾಗಿ ಕಾಣಬಾರದು. ಸಾಕಿದ ಪ್ರಾಣಿಗಳು ಬೇಡವೆನ್ನಿಸಿದಾಗ ಪ್ರಾಣಿ ದಯಾ ಸಂಘಗಳ ಸುಪರ್ದಿಗೆ ಒಪ್ಪಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ‘ಹಾಂ ಈಗ ವೈರ್​ ಎಳೀ ನೋಡೋಣ’ ಸಹಾಯಕ ಎಲೆಕ್ಟ್ರಿಷಿಯನ್​ ಮಿಸ್ಟರ್​ ಬೆಕ್ಕಣ್ಣ

ಪ್ರತೀ ಜೀವಿಗೂ ಅದರದೇ ಆದ ಘನತೆ ಇರುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು. ಕ್ರೂರತೆ ಎಲ್ಲರೊಳಗೂ ಇರುತ್ತದೆ. ಆದರೆ ಮಾನವೀಯತೆನ್ನು ಬೆಳೆಸಿಕೊಳ್ಳುವುದಕ್ಕೇ ಪ್ರಾಣಿ ಪಕ್ಷಿಗಳ ಬಾಂಧವ್ಯವನ್ನು ಮನುಷ್ಯ ಬೆಸೆದುಕೊಳ್ಳುತ್ತಾ ಹೋಗುತ್ತಾನೆ. ಆದರೆ ಈಗಿಲ್ಲಿ ಹೀಗಾಗಿರುವುದು ಮಾತ್ರ ಅಸಹ್ಯದ ಪರಮಾವಧಿ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:55 pm, Mon, 6 February 23

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು