‘ಹಾಂ ಈಗ ವೈರ್​ ಎಳೀ ನೋಡೋಣ’ ಸಹಾಯಕ ಎಲೆಕ್ಟ್ರಿಷಿಯನ್​ ಮಿಸ್ಟರ್​ ಬೆಕ್ಕಣ್ಣ

Cat Video : ಎಂಥ ಗಂಭೀರವಾಗಿ ಇದು ಎಲೆಕ್ಟ್ರಿಷಿಯನ್​ಗೆ ಸಹಾಯ ಮಾಡುತ್ತಿದೆ. ಈ ವಿಡಿಯೋ ನೋಡಿದ ಯಾರಾದರೂ ಕಳ್ಳಬೆಕ್ಕು, ಸೋಮಾರಿಬೆಕ್ಕು, ಕಿಡಿಗೇಡಿ ಬೆಕ್ಕು, ಸೊಕ್ಕಿನ ಬೆಕ್ಕು ಅಂತ ಹೇಳೋದಕ್ಕೆ ಸಾಧ್ಯವಾ? ಮಿಲಿಯನ್​ಗಟ್ಟಲೆ ಜನ ಫಿದಾ!

‘ಹಾಂ ಈಗ ವೈರ್​ ಎಳೀ ನೋಡೋಣ’ ಸಹಾಯಕ ಎಲೆಕ್ಟ್ರಿಷಿಯನ್​ ಮಿಸ್ಟರ್​ ಬೆಕ್ಕಣ್ಣ
A cat assisting to an electrician
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 26, 2022 | 1:57 PM

Viral Video : ಈ ಬೆಕ್ಕುಗಳು ಎಷ್ಟೇ ಕಿಡಿಗೇಡಿತನ ಮಾಡಿದರೂ ಅವು ಎಂದಿಗೂ ಮುದ್ದುಮುದ್ದೇ. ಹಾಗಾಗಿ ಅವು ಏನೇ ತಂಟೆ ಮಾಡಿದರೂ ಅವುಗಳ ಮುಖ ನೋಡಿದಾಕ್ಷಣ ನಾವೇ ಸೋತುಬಿಡುತ್ತೇವೆ. ಅಂಥ ಗಂಭೀರ ವದನ, ಅನನ್ಯ ಸೌಂದರ್ಯ, ಅಷ್ಟೇ ಭಾವುಕ, ಅಷ್ಟೇ ಚುರುಕು, ಸ್ಪಂದನಾತ್ಮಕ ಮತ್ತು ಶರಣಾಗತ. ನೀವು ಏನೇ ಕೆಲಸ ಮಾಡಿ ಬಾಲಂಗೋಸಿಯಂತೆ ತಾನೂ ಬಂದೆ ಎಂದು ಪ್ರತ್ಯಕ್ಷವೇ. ಮಾಡುವ ಕೆಲಸದಲ್ಲಿ ತನ್ನದೂ ಒಂದು ಕೈ ಇರಲೇಬೇಕು. ಆಗಲೇ ಇವುಗಳ ಜೀವಕ್ಕೆ ಸಮಾಧಾನ. ಈಗಿಲ್ಲಿ ನೋಡಿ ಎಲೆಕ್ಟ್ರಿಷಿಯನ್​ಗೆ ಸಹಾಯ ಮಾಡುವಲ್ಲಿ ಮುಂದಾಗಿದೆ ಈ ಬೆಕ್ಕು. ಎಂಥ ಗಂಭೀರವಾಗಿ ಪ್ರೌಢ ಕಳೆಯಿಂದ ಈ ಕೆಲಸದಲ್ಲಿ ತೊಡಗಿಕೊಂಡಿದೆ ಎಂದರೆ…

Madeyousmile ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಫ್ರಿಡ್ಜ್​ ಮೇಲೆ ಏರಿ, ಸೀಲಿಂಗ್​ ಅನ್ನು ಪರೀಕ್ಷಿಸುತ್ತಿದೆ. ಎಷ್ಟೊಂದು ಆಸಕ್ತಿಯಂದ ವೈರ್​ ಅನ್ನು ಗಮನಿಸುತ್ತಿದೆ ನೋಡಿ. ಎಲೆಕ್ಟ್ರಿಷಿಯನ್​ಗೆ ನಗು ತಡೆಯಲಾಗುತ್ತಿಲ್ಲ. ನಿನ್ನೆಯಷ್ಟೇ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈಗಾಗಲೇ 3.5 ಮಿಲಿಯನ್ ಜನರು ಈ ತಮಾಷೆಯಾದ ವಿಡಿಯೋ ನೋಡಿದ್ದಾರೆ. 2.6 ಲಕ್ಷ ಜನರು ಇಷ್ಟಪಟ್ಟಿದ್ದಾರೆ. 853 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ನೋಡಿ : ‘ಇಲಿ ನುಂಗಿ ನುಂಗಿ ಮಲಗಿದ್ದು ಸಾಕು ಟ್ರೆಡ್​ಮಿಲ್​ ಮಾಡು ಬಾ’ ಅಕ್ಕನ ಮಾತು ಕೇಳಿದ ಬೆಕ್ಕು

ಇಂಥ ಬೆಕ್ಕನ್ನು ಈತನಕ ನೋಡಿಯೇ ಇಲ್ಲ ಎಂದು ಅಚ್ಚರಿಗೆ ಒಳಗಾಗಿದ್ದಾರೆ ನೆಟ್ಟಿಗರು. ಬಹಳ ಸ್ಮಾರ್ಟ್ ಇದ್ದಾನೆ ಎಲೆಕ್ಟ್ರಿಷಿಯನ್​ ಎಂದಿದ್ದಾರೆ ಮತ್ತೊಬ್ಬರು. ಇವನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ, ನನ್ನ ಎಲ್ಲಾ ಕೆಲಸಗಳಲ್ಲಿ ಸಹಾಯ ಮಾಡಲು ಸಂತೋಷದಿಂದ ನೇಮಿಸಿಕೊಳ್ಳುತ್ತೇನೆ ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ತಮ್ಮ ತಮ್ಮ ಮನೆಯ ಬೆಕ್ಕುಗಳು ಹೀಗೆ ಕೆಲಸದಲ್ಲಿ ಸಹಾಯ ಮಾಡುವ ವಿಡಿಯೋ ಅನ್ನು ಹಾಕಿದ್ಧಾರೆ.

ಮಧ್ಯಾಹ್ನದ ಈ ಚಳಿಬಿಸಲು ಹೊತ್ತಿನಲ್ಲಿ ಈ ಮುದ್ದಾದ ವಿಡಿಯೋ ನಿಮ್ಮ ಮುಖದ ಮೇಲೆ ನಗು ತರಿಸಿರಬೇಕಲ್ಲ, ಹಾಗೆಯೇ ಅಕ್ಕರೆಯನ್ನೂ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:44 pm, Sat, 26 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ