ರಾಶಿ ಪೆಂಗ್ವಿನ್ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ
Optical Illusion : ಈ ಸಲ ನಿಮಗೆ ಸಮಯದ ಗಡುವು ಇಲ್ಲ. ಏಕೆಂದರೆ ಈಗಾಗಲೇ ಇಂಥ ಚಿತ್ರಗಳಲ್ಲಿರುವ ಸವಾಲುಗಳನ್ನು ನೀವು ಪರಿಹರಿಸಿ ಪರಿಣತರಾಗಿದ್ದೀರಾ. ಸರಿ ಹಾಗಿದ್ದರೆ, ಇಲ್ಲಿರುವ ಬೆಕ್ಕುಗಳನ್ನು ಹುಡುಕಿ ಬೇಗ.

Viral Optical Illusion : ನಿಮಗೀಗೀಗ ಇಂಥ ಆಪ್ಟಿಕಲ್ ಇಲ್ಲ್ಯೂಷನ್ ಚಿತ್ರಗಳು ಸುಲಭವೆನ್ನಿಸುತ್ತಿರಬಹುದು. ಮೇಲಿಂದ ಮೇಲೆ ಇವುಗಳಲ್ಲಿ ಅಡಗಿರುವ ಸವಾಲುಗಳನ್ನು ನೋಡಿ ನಿಧಾನಕ್ಕೆ ಇವುಗಳನ್ನು ಚಿತ್ರಿಸುವ ತಂತ್ರಗಳ ಪರಿಚಯವಾಗಿರಬಹುದು. ಹಾಗಾದರೆ ಇದೀಗ ವೈರಲ್ ಆಗುತ್ತಿರುವ ಈ ಚಿತ್ರವನ್ನು ಗಮನಿಸಿ. ಇಷ್ಟೊಂದು ಪೆಂಗ್ವಿನ್ಗಳ ಮಧ್ಯೆ ಮೂರೇ ಮೂರು ಬೆಕ್ಕುಗಳು ಎಲ್ಲಿ ಅಡಗಿ ಕುಳಿತಿರಬಹುದು ಎಂದು.
ಎಂದಿನಂತೆ ಹಂಗೇರಿಯನ್ ಕಲಾವಿದ ಗ್ರೆಗರಿ ಡುಡಾಸ್ ಈ ಚಿತ್ರವನ್ನು ಬಿಡಿಸಿದ್ದಾರೆ. ನೆಟ್ಟಿಗರು ತಲೆ ಕೆರೆದುಕೊಂಡು ಬೆಕ್ಕುಗಳನ್ನು ಹುಡುಕುತ್ತಿದ್ದಾರೆ. ಜೀವಂತ ಬೆಕ್ಕಗಳಾಗಿದ್ದರೆ ಹಾಲಿನ ವಾಸನೆಗೆ ನೀವಿದ್ದಲ್ಲಿಗೇ ಬಂದು ಬಿಡುತ್ತಿದ್ದವು. ಆದರೆ ಇವು ಚಿತ್ರಿಸಿದ ಬೆಕ್ಕುಗಳು. ಹೀಗಾಗಿ ನೀವು ನಿಮ್ಮ ಮೆದುಳಿಗೆ, ಕಣ್ಣಿಗೆ ಕೆಲಸವನ್ನು ಕೊಡಲೇಬೇಕು.

ಬೆಕ್ಕುಗಳನ್ನು ಹುಡುಕಿ
ಮೂರೇ ಮೂರು ಬೆಕ್ಕುಗಳು ಅಡಗಿ ಕುಳಿತಿವೆ. ನಿಮಗೆ ಸಮಯದ ಮಿತಿ ಕೊಟ್ಟಿಲ್ಲ. ಹಾಗಾಗಿ ಆರಾಮಾಗಿ ಬೆಕ್ಕುಗಳನ್ನು ಹುಡುಕಿ. ಕೆಲಸ ಮಾಡಿ ಮಾಡಿ ನಿಮ್ಮ ತಲೆ ಒಂದೇ ದಿಕ್ಕಿನತ್ತ ಓಡಿರುತ್ತದೆ. ಅದಕ್ಕೂ ಸ್ವಲ್ಪ ಬಿಡುವು ಕೊಡಿ. ಹೀಗೆ ಅನ್ಯ ವಿಷಯಗಳ ರುಚಿ ತೋರಿಸಿ ಮತ್ತೆ ನಿಮ್ಮ ಮೆದುಳಿಗೆ ಶಕ್ತಿಯನ್ನು ತುಂಬಿ. ಒಂದು ಸುಳಿವು ಬೇಕೆ? ಎರಡು ಬೆಕ್ಕುಗಳು ಚಿತ್ರದ ಬಲಭಾಗದ ಅಂಚಿನಲ್ಲಿವೆ. ಈಗ ಸುಲಭವಾಯಿತಲ್ಲವಾ ಹುಡುಕುವುದು? ಇಲ್ಲವಾ, ಗೊತ್ತಾಗುತ್ತಿಲ್ಲವಾ? ಹಾಗಿದ್ದರೆ ಈ ಕೆಳಗಿನ ಚಿತ್ರ ನೋಡಿ.

ಉತ್ತರ ಇಲ್ಲಿದೆ
ಈ ಸಲವೂ ಕಷ್ಟವಾಯಿತಾ? ಅಥವಾ ಸುಲಭಕ್ಕೆ ಉತ್ತರ ಸಿಕ್ಕಿತಾ? ಸರಿ ಈ ಮೂರೂ ಬೆಕ್ಕುಗಳಿಗೆ ಹಾಲು ಕೊಟ್ಟು ನೀವು ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳಿ. ಮತ್ತೊಂದು ವೈರಲ್ ಆಪ್ಟಿಕಲ್ ಇಲ್ಲ್ಯೂಷನ್ ಚಿತ್ರದೊಂದಿಗೆ ಮತ್ತೆ ಭೇಟಿಯಾಗೋಣ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ