AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎದೆ ನಡುಕ ಹುಟ್ಟಿಸುವ ಭಯಾನಕ ಬಂಗೀ ಜಂಪಿಂಗ್‌ ವಿಡಿಯೋವೊಂದು ಇಲ್ಲಿದೆ

ಇಲ್ಲೊಂದು ಬಂಗೀ ಜಂಪಿಂಗ್‌ ವಿಡಿಯೋ ಸಕ್ಕತ್ತ್​​​ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಒಂದು ಕ್ಷಣ ನೀವು ಹೆದರುವುದಂತೂ ಗ್ಯಾರಂಟಿ.

Viral Video: ಎದೆ ನಡುಕ ಹುಟ್ಟಿಸುವ ಭಯಾನಕ ಬಂಗೀ ಜಂಪಿಂಗ್‌ ವಿಡಿಯೋವೊಂದು ಇಲ್ಲಿದೆ
ಭಯಾನಕ ಬಂಗೀ ಜಂಪಿಂಗ್‌ Image Credit source: NDTV
ಅಕ್ಷತಾ ವರ್ಕಾಡಿ
|

Updated on:Feb 01, 2023 | 4:21 PM

Share

ಸಾಕಷ್ಟು ಸಾಹಸ ಪ್ರಿಯರಿಗೆ ಜೀವನದಲ್ಲಿ ಒಂದು ಸಲವಾದರೂ ಬಂಗೀ ಜಂಪಿಂಗ್‌ ಮಾಡಲೇ ಬೇಕು ಎಂಬ ಕನಸಿರುತ್ತದೆ. ಕನಸನ್ನು ನನಸು ಮಾಡಿಕೊಂಡವರೂ ಸಾಕಷ್ಟಿದ್ದಾರೆ, ನೀವೂ ಕೂಡ ಬಂಗೀ ಜಂಪಿಂಗ್‌ ಅನುಭವನ್ನು ಪಡೆದುಕೊಂಡಿರುತ್ತೀರಿ. ಆದರೆ ಇಲ್ಲೊಂದು ಬಂಗೀ ಜಂಪಿಂಗ್‌ ವಿಡಿಯೋ ಸಕ್ಕತ್ತ್​​​ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಒಂದು ಕ್ಷಣ ನೀವು ಹೆದರುವುದಂತೂ ಗ್ಯಾರಂಟಿ.  ಈ ವಿಡಿಯೋವನ್ನು ಲಕ್ಸುರಿ ಟ್ರಾವೆಲ್ ಎಕ್ಸ್​ಪ್ಲೋರ್ (luxurytravelexplore) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಲಕ್ಸುರಿ ಟ್ರಾವೆಲ್ ಎಕ್ಸ್​ಪ್ಲೋರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಒಮ್ಮೆ ನೀವೇ ನೋಡಿ:

ಇದನ್ನೂ ಓದಿ: 16 ದೋಸೆ ಪ್ಲೇಟ್​ ಒಂದೇ ಕೈಯಲ್ಲಿ; ವಿದ್ಯಾರ್ಥಿ ಭವನದ ಸರ್ವರ್ ಕೌಶಲಕ್ಕೆ ಆನಂದ ಮಹೀಂದ್ರಾ ಮೆಚ್ಚುಗೆ

ಈ ವಿಡಿಯೋದಲ್ಲಿ ವ್ಯಕ್ತಿಯನ್ನು ಬೆಟ್ಟದ ಮಧ್ಯದಲ್ಲಿ ಕೇಬಲ್ ಮೂಲಕ ಕರೆದೊಯ್ಯಲಾಗಿದೆ. ನಂತರ ಇದ್ದಕ್ಕಿದ್ದಂತೆ ಕ್ಲಿಪ್‌ನಿಂದ ಕೇಬಲ್ ಬೇರ್ಪಡಿಸಿದ ತಕ್ಷಣ, ವ್ಯಕ್ತಿಯು ವೇಗವಾಗಿ ನೂರಾರು ಅಡಿ ಕೆಳಗೆ ಬೀಳುವುದನ್ನು ಕಾಣಬಹುದು. ಈ ವಿಡಿಯೋ ಒಮ್ಮೆ ನಿಮ್ಮನ್ನು ನಡುಕ ಹುಟ್ಟಿಸುತ್ತದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ವ್ಯಕ್ತಿ, ಈ ಸಾಹಸವನ್ನು ನೀವೂ ಟ್ರೈ ಮಾಡ್ತೀದ್ರೆ 10,000 ಡಾಲರ್​​ ಕೊಡಲಾಗುವುದು ಎಂದು ಸವಾಲು ಹಾಕಿದ್ದಾರೆ.

ಈ ವೀಡಿಯೊವನ್ನು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೀಕ್ಷಣೆ ಕಂಡಿದೆ. ಈ ವಿಡಿಯೋವನ್ನು ಲಕ್ಸುರಿ ಟ್ರಾವೆಲ್ ಎಕ್ಸ್​ಪ್ಲೋರ್ (luxurytravelexplore) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಈಗಾಗಲೇ 5 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಜನರು ಕನಸಿನಲ್ಲಿಯೂ ಅಂತಹ ಸಾಹಸಕ್ಕೆ ಕೈ ಹಾಕಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಈ ಪೋಸ್ಟ್​​ ಸಾಕಷ್ಟು ಬಳಕೆದಾರರು ಶೇರ್​ ಮಾಡಿದ್ದಾರೆ.

ಇನ್ನಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 4:21 pm, Wed, 1 February 23