16 ದೋಸೆ ಪ್ಲೇಟ್ ಒಂದೇ ಕೈಯಲ್ಲಿ; ವಿದ್ಯಾರ್ಥಿ ಭವನದ ಸರ್ವರ್ ಕೌಶಲಕ್ಕೆ ಆನಂದ ಮಹೀಂದ್ರಾ ಮೆಚ್ಚುಗೆ
Masala Dosa : ಸರ್ವರ್ ಕೌಶಲವನ್ನು ಮೆಚ್ಚುವಂಥದ್ಧೇ. ಆದರೆ ಒಂದರ ಮೇಲೊಂದು ಪ್ಲೇಟ್ ಇಟ್ಟಾಗ ದೋಸೆ ಶುಚಿಯಾಗಿರುತ್ತವೆಯೇ? ಎಂದು ಕೇಳಿದ್ಧಾರೆ ಕೆಲವರು. ಇನ್ನೂ ಕೆಲವರು ಅದ್ಭುತ ಎಂದಿದ್ದಾರೆ.
Viral News : ಕೆಲಸವನ್ನು ಕೆಲಸವಂತಷ್ಟೇ ಮಾಡಿದರೆ ಇದೆಲ್ಲ ಸಾಧ್ಯವಾಗದು. ಕೆಲಸದ ಬಗ್ಗೆ ಪ್ರೀತಿ ಇದ್ಧಾಗ ಕೌಶಲ ತಂತಾನೇ ಹುಟ್ಟಿಕೊಳ್ಳುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಸರ್ವರ್ 16 ದೋಸೆಯ ಪ್ಲೇಟ್ಗಳನ್ನು ಬ್ಯಾಲೆನ್ಸ್ ಮಾಡುವ ರೀತಿ ನೋಡಿದ ಯಾರಿಗೂ ಅಚ್ಚರಿ ಮೂಡಿಸುತ್ತದೆ. ಆನಂದ ಮಹೀಂದ್ರಾ ಈತನ ಕೌಶಲಕ್ಕೆ ಮಾರುಹೋಗಿ ಈ ಟ್ವೀಟ್ ಮಾಡಿದ್ದಾರೆ.
We need to get ‘Waiter Productivity’ recognised as an Olympic sport. This gentleman would be a contender for Gold in that event… pic.twitter.com/2vVw7HCe8A
ಇದನ್ನೂ ಓದಿ— anand mahindra (@anandmahindra) January 31, 2023
ಹೋಟೆಲುಗಳಿಗೆ ಹೋದಾಗ ನೀವು ಗಮನಿಸಿರುತ್ತೀರಿ. ಹತ್ತು ಜನ ಸರ್ವರ್ಗಳಲ್ಲಿ ಒಬ್ಬರಾದರೂ ನಿಮ್ಮ ಗಮನ ಸೆಳೆದಿರುತ್ತಾರೆ. ತಿಂಡಿಗಳ ಲಿಸ್ಟ್ ಹೇಳುವ ರೀತಿ ಇರಬಹುದು. ಅಡುಗೆಮನೆಗೆ ಆರ್ಡರ್ ಮಾಡುವ ರೀತಿ ಇರಬಹುದು ಹೀಗೆ. ಆದರೆ 16 ದೋಸೆ ತಟ್ಟೆಗಳನ್ನು ಹೀಗೆ ಒಂದೇ ಏಟಿಗೆ ತಂದು ಗ್ರಾಹಕರಿಗೆ ಕೊಡುವುದೆಂದರೆ? ಆಶ್ಚರ್ಯವೇ ತಾನೆ?
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ಈ ವಿಡಿಯೋ ಅನ್ನು ಈಗಾಗಲೇ 1.5 ಮಿಲಿಯನ್ ಜನರು ನೋಡಿದ್ದಾರೆ. ಸರ್ವರ್ಗಳು ಹುಟ್ಟಿನಿಂದಲೇ ಎಂಜಿನಿಯರ್ ಸರ್. ಅವರಿಗೆ ಅರಿವಿಲ್ಲದೆಯೇ ವಿಜ್ಞಾನ ಅವರೊಳಗೆ ಇಳಿದಿರುತ್ತದೆ. ಸುಡುವ ತಟ್ಟೆಗಳನ್ನು ನಿಭಾಯಿಸುವುದು ಅವರಿಗೆ ಗೊತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಬಹುಶಃ ದೇವರು ಇವನಿಗೆಂದೇ ಉದ್ದನೆಯ ಕೈಗಳನ್ನು ರೂಪಿಸಿರಬಹುದು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : ಎಲ್ಲವನ್ನೂ ಮಾರಿದ! ದೊಡ್ಡ ವಾಟರ್ ಟ್ಯಾಂಕೊಂದನ್ನು ಐಷಾರಾಮಿ ಮನೆಯನ್ನಾಗಿಸಲು
ಇವರ ಕೌಶಲ ತಂತ್ರವ ಎಲ್ಲವೂ ಮೆಚ್ಚುವಂಥದ್ದು. ಆದರೆ ಒಂದರ ಮೇಲೊಂದ ಪ್ಲೇಟ್ ಇಟ್ಟಾಗ ದೋಸೆ ಶುಚಿಯಾಗಿರುತ್ತದೆ ಎನ್ನಲು ಏನು ಗ್ಯಾರಂಟಿ ಎಂದು ಕೇಳಿದ್ದಾರೆ ಮತ್ತೊಬ್ಬರು. ಓಹೋ ಇದು ಬೆಂಗಳೂರಿನ ಗಾಂಧೀಬಜಾರ್ದಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ