AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

Dog : ಬದುಕಿದೆಯಾ ಎಂದು ಇತ್ತ ಕಡೆಯಿಂದ ಆಕೆ ಕೇಳುತ್ತಾಳೆ. ತಾರಾಬಾರಾ ಓಡಾಡುವ ಗಾಡಿಗಳನ್ನು ನಿಲ್ಲಿಸಿ ಈತ ಎತ್ತಿಕೊಂಡು ಬರುತ್ತಾನೆ. ನಂತರ ಗಾಡಿಯೇರಿ ಡಾಕ್ಟರ್ ಬಳಿ ಹೋಗುತ್ತಾರೆ ಇಬ್ಬರೂ.

ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ನಾಯಿಯನ್ನು ರಕ್ಷಿಸಿದ ಜೋಡಿ
TV9 Web
| Edited By: |

Updated on: Jan 30, 2023 | 5:53 PM

Share

Viral Video : ವೇಗವಾಗಿ ಚಲಿಸುವ ವಾಹನಗಳಿಗೆ ಸಿಕ್ಕು ದಿನವೂ ಅದೆಷ್ಟೋ ನಾಯಿ ಬೆಕ್ಕು ಪ್ರಾಣಿಗಳು ಗಾಯಗೊಳ್ಳುತ್ತವೆ. ಎಷ್ಟೋ ಸಲ ಸಾವನ್ನಪ್ಪಿರುತ್ತವೆ. ಆದರೆ ಅಪರೂಪಕ್ಕೆ ಇಂಥ ದಯಾಳುಗಳು ಅವುಗಳನ್ನು ಗಮನಿಸುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ರಾತ್ರಿಯಾಗಿದೆ. ಗಾಡಿಗಳು ಓಡಾಡುತ್ತಲೇ ಇವೆ. ಬಹುಶಃ ಈ ನಾಯಿ ಸತ್ತಿರಬೇಕೆಂದು ಇದನ್ನು ಅಂತ್ಯಕ್ರಿಯೆ ಮಾಡಿದರಾಯಿತೆಂದು ಈ ಜೋಡಿ ಗಾಡಿ ನಿಲ್ಲಿಸುತ್ತದೆ.  ಆದರೆ ಅದೃಷ್ಟವಶಾತ್ ನಾಯಿ ಬದುಕಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತಲೆಗೆ ಏಟಾಗಿದ್ದರಿಂದ ರಸ್ತೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದೆ. ಈ ಜೋಡಿ ಈ ನಾಯಿಯನ್ನು ಎತ್ತಿಕೊಂಡು ವೈದ್ಯರ ಬಳಿ ಕರೆದೊಯ್ದಿದೆ. ಸದ್ಯ ನಾಯಿ ಸುಧಾರಿಸಿಕೊಂಡು ಗೆಲುವಾಗಿದೆ. ಕರ್ತವ್ಯ ಸೊಸೈಟಿ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಈ ಜೋಡಿಯ ನಿಸ್ವಾರ್ಥವನ್ನು ಶ್ಲಾಘಿಸುತ್ತಿದ್ದಾರೆ. ಪರಾಗ ಪಾಂಡೇ ಎಂಬ ವೈದ್ಯರು ಈ ನಾಯಿಗೆ ಚಿಕಿತ್ಸೆ ನೀಡಿದ್ದಾರೆ.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಈತನಕ ಈ ವಿಡಿಯೋ 10 ಮಿಲಿಯನ್​ ಜನರನ್ನು ತಲುಪಿದೆ. ಇಂಥ ಕರುಣಾಮಯಿಗಳು ಇರುವುದಕ್ಕೇ ಜಗತ್ತು ಇಂದು ನಿರಾಳವಾಗಿ ಉಸಿರಾಡುತ್ತಿದೆ ಎಂದಿದ್ದಾರೆ ಅನೇಕರು. ಇಂಥವರು ಸಂತತಿ ಹೆಚ್ಚಲಿ ಎಂದು ಹಲವರು ಹಾರೈಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ