KFC Agarbathi: ಕೆಎಫ್ಸಿ ಫ್ರೈಡ್ ಚಿಕನ್ ಅಗರಬತ್ತಿ; ಸೋಷಿಯಲ್ ಮೀಡಿಯಾದಲ್ಲಿ ಜನರು ಗರಂ; ಏನಿದರ ವಿಶೇಷತೆ?
Fried Chicken Incense Sticks: ಕೆಎಫ್ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ.
ನವದೆಹಲಿ: ಜನಪ್ರಿಯ ಚಿಕನ್ ಖಾದ್ಯಗಳ ಸ್ಟೋರ್ ಆಗಿರುವ ಕೆಎಫ್ಸಿ (KFC- Kentucky Fried Chicken) ಈಗ ಮತ್ತೆ ವಿವಾದಕ್ಕೆ ಸಿಲುಕಿದೆ. ತನ್ನ ಖಾದ್ಯಗಳ ಶೈಲಿಯಲ್ಲಿ ಅಗರಬತ್ತಿಯನ್ನು ಕೆಎಫ್ಸಿ ತಯಾರಿಸಿ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಥಾಯ್ಲೆಂಡ್ ವಿಭಾಗದ ಕೆಎಫ್ಸಿ ಇಂಥದ್ದೊಂದು ಪ್ರಯೋಗ ಮಾಡಿದೆ.
ಅಗರಬತ್ತಿಗೂ ಚಿಕನ್ಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಆದರೆ, ಇಲ್ಲಿ ಕೆಎಫ್ಸಿಯ ವಿಶೇಷ ಚಿಕನ್ ತಿನಿಸುಗಳಿಗೆ ಹೋಲುವಂತಿರುವ ಅಗರಬತ್ತಿಗಳನ್ನು ಕೆಎಫ್ಸಿ ತಯಾರಿಸಿದೆ. ಈ ಊದುಬತ್ತಿಯನ್ನು ಹಚ್ಚಿದರೆ ಥೇಟ್ ಕೆಎಫ್ಸಿ ಶೈಲಿಯ ತಿನಿಸುಗಳ ವಾಸನೆ ಬರುತ್ತದೆ. ನೋಡಲೂ ಕೂಡ ಕೆಎಫ್ಸಿಯ ಡ್ರಮ್ಸ್ಟಿಕ್ ಚಿಕನ್ಗಳಂತೆ ಕಂಡರೂ ಈ ಅಗರಬತ್ತಿಯನ್ನು ತಿನ್ನಲು ಬರುವುದಿಲ್ಲ. ಕೇವಲ ನೋಡಲು ಮತ್ತು ಆಘ್ರಾಣಿಸಲು ಮಾತ್ರ ಇದು ಚಿಕನ್ನಂತೆ ಇರುತ್ತದೆ.
ಕೆಎಫ್ಸಿಯ ಥಾಯ್ಲೆಂಡ್ ವಿಭಾಗವು ಈ ಫ್ರೈಡ್ ಚಿಕನ್ ಅಗರಬತ್ತಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಜನರ ಟೀಕೆಗೆ ಗುರಿಯಾಗಿದೆ. ಅದಾದ ಬಳಿಕ ಈ ಪೋಸ್ಟ್ ಅನ್ನು ಕೆಎಫ್ಸಿ ಅಳಿಸಿಹಾಕಿತು.
KFC incense sticks. That’s one way to get your ancestors’ attention over the Lunar New Year ? Proudly brought to you by late stage capitalism ??♂️ #啋 #大吉利是
Source: Subtle Cantonese Traits pic.twitter.com/c0ohwujykJ
— Sidney Wong 黃吉贊 (@SidneyGJWong) January 11, 2023
ಇದರ ತಯಾರಿಕೆ ಹೇಗೆ?
ಕೆಎಫ್ಸಿ ಸಂಸ್ಥೆಯದ್ದೇ ಆದ ವಿಶೇಷ ರಿಸಿಪಿ ಇದೆ. ಇದರಲ್ಲಿ 11 ಸಸ್ಯ ಮತ್ತು ಮಸಾಲೆಗಳನ್ನೊಳಗೊಂಡ ರಿಸಿಪಿ ಅದು. ಅದೇ ರೀತಿಯ ಫ್ಲೇವರ್ ಬರುವಂತೆ ಅಗರಬತ್ತಿಯನ್ನು ತಯಾರಿಸುವುದು ಕೆಎಫ್ಸಿಗೆ ಸವಾಲಿನ ಕೆಲಸವಾಗಿತ್ತು. ಅದಕ್ಕಾಗಿ ಕೆಎಫ್ಸಿ ಸೆಂಟ್ ವಿಭಾಗವು ಕೆಲ ತಜ್ಞ ಸಂಸ್ಥೆಗಳ ಜೊತೆ ಸೇರಿ ಈ ಕಾರ್ಯ ಮಾಡಿದೆ.
ಅಂದಹಾಗೆ ಈ ಕೆಎಫ್ಸಿ ಫ್ರೈಡ್ ಚಿಕನ್ ಅಗರಬತ್ತಿಯು ಮಾರಾಟಕ್ಕಿಲ್ಲ. ಸೌರಮಾನ ಹೊಸ ವರ್ಷದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ಕೊಡಲು ಮಾತ್ರ ಇದರ ತಯಾರಿಕೆ ಮಾಡಲಾಗಿತ್ತು. ಯಾರಿಗೆ ಗೊತ್ತು, ಈ ಅಗರಬತ್ತಿ ಜನರಿಗೆ ಇಷ್ಟವಾಗಿಬಿಟ್ಟಿದ್ದರೆ ಕೆಎಫ್ಸಿ ಕೌಂಟರುಗಳಲ್ಲಿ ಇದನ್ನು ಮಾರಾಟಕ್ಕಿಡಲಾಗುತ್ತಿತ್ತೇನೋ…
Published On - 4:08 pm, Mon, 30 January 23