AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Canada Hindu Temple Defaced: ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲೆ ಭಾರತ ವಿರೋಧಿ ಘೋಷಣೆ ಕೆತ್ತಿ ವಿರೂಪಗೊಳಿಸಿದ ಮತಾಂಧರು

ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದೆ. ಈ ಬಾರಿ ಬ್ರಾಂಪ್ಟನ್​ನ ಜನಪ್ರಿಯ ದೇವಾಲಯದ ಮೇಲೆ ಹಿಂದೂ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ.

Canada Hindu Temple Defaced: ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲೆ ಭಾರತ ವಿರೋಧಿ ಘೋಷಣೆ ಕೆತ್ತಿ ವಿರೂಪಗೊಳಿಸಿದ ಮತಾಂಧರು
ಕೆನಡಾದ ಗೌರಿ ಶಂಕರ ಮಂದಿರImage Credit source: Twitter
ನಯನಾ ರಾಜೀವ್
|

Updated on:Jan 31, 2023 | 8:09 AM

Share

ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದೆ. ಈ ಬಾರಿ ಬ್ರಾಂಪ್ಟನ್​ನ ಜನಪ್ರಿಯ ದೇವಾಲಯದ ಮೇಲೆ ಹಿಂದೂ ವಿರೋಧಿ, ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಇದು ಭಾರತೀಯ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಗೌರಿ ಶಂಕರ ದೇವಸ್ಥಾನದಲ್ಲಿ ನಡೆದ ಈ ವಿಧ್ವಂಸಕ ಘಟನೆಯನ್ನು ಖಂಡಿಸಿರುವ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ದೇವಾಲಯಕ್ಕೆ ಹಾನಿ ಮಾಡಿದ ಘಟನೆಯು ಕೆನಡಾದಲ್ಲಿರುವ ಭಾರತೀಯ ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ಕೆನಡಾದ ಹಿಂದೂ ಸಮುದಾಯದ ಭಾವನೆಗಳಿಗೆ ದೇವಸ್ಥಾನದಲ್ಲಿ ನಡೆದ ಈ ಹೇಯ ಘಟನೆಯಿಂದ ಘಾಸಿಯಾಗಿದೆ ಎಂದು ಹೇಳಿಕೆಯನ್ನು ನೀಡಲಾಗಿದೆ.

ಈ ವಿಷಯದ ಕುರಿತು ನಾವು ಕೆನಡಾದ ಆಡಳಿತಕ್ಕೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ, ಭಾರತೀಯ ಪರಂಪರೆಯ ಪ್ರತೀಕವಾಗಿರುವ ಈ ದೇವಾಲಯದ ಗೋಡೆಗಳ ಮೇಲೆ ಭಾರತದ ವಿರುದ್ಧ ದ್ವೇಷಪೂರಿತ ವಿಷಯಗಳನ್ನು ಬರೆಯಲಾಗಿದೆ. ಕೆನಡಾದ ಆಡಳಿತವು ಪ್ರಸ್ತುತ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ, ಬ್ರಾಂಪ್ಟನ್​ನಲ್ಲಿರುವ ಹಿಂದೂ ದೇವಾಲಯದ ಧ್ವಂಸವು ಹೊಸ ಘಟನೆಯಲ್ಲ, ಕಳೆದ ಜುಲೈನಿಂದ ಇಂತಹ ಮೂರು ಘಟನೆಗಳು ನಡೆದಿವೆ.

ಮತ್ತಷ್ಟು ಓದಿ:Pakistan: ಹಿಂದೂ ದೇವಾಲಯದ ಮೇಲೆ ದಾಳಿ, ದೇವತೆಗಳ ವಿಗ್ರಹಗಳು ಧ್ವಂಸ!

ಕಳೆದ ಸೆಪ್ಟೆಂಬರ್​ನಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯರ ವಿರುದ್ಧ ದ್ವೇಷ ಹಾಗೂ ಭಾರತ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿವೆ ಎಂಬ ಕುರಿತು ಹೇಳಿಕೆ ನೀಡಿತ್ತು. ಕೆನಡಾ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ 2019 ಮತ್ತು 2021ರ ನಡುವೆ ಕೆನಡಾದಲ್ಲಿ ಧರ್ಮ, ಲೈಂಗಿಕ ದೌರ್ಜನ್ಯ, ಕೋಮು ದ್ವೇಷಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಶೇ.72ರಷ್ಟು ಹೆಚ್ಚಾಗಿದೆ. ಇದು ಅಲ್ಲಿನ ಭಾರತೀಯರಲ್ಲಿ ಭಯ ಹುಟ್ಟಿಸಿದೆ.

ಕೆನಡಾ ಹೊರತುಪಡಿಸಿ ಆಸ್ಟ್ರೇಲಿ, ನ್ಯೂಜಿಲೆಂಡ್​ನಲ್ಲೂ ಹಿಂದೂ ದೇವಾಲಯಗಳ ಮೇಲೆ ದಾಳಿ ಹೆಚ್ಚುತ್ತಿರುವುದು ಮತ್ತಷ್ಟು ಕಳವಳಕಾರಿ ಸಂಗತಿಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:05 am, Tue, 31 January 23