Emirates Plane: 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ಅದೇ ಏರ್ಪೋರ್ಟ್ಗೆ ಬಂದಿಳಿದ ಎಮಿರೇಟ್ಸ್ ವಿಮಾನ
ದುಬೈನಿಂದ ಪ್ರಯಾಣಿಕರನ್ನು ಹೊತ್ತು ನ್ಯೂಜಿಲೆಂಡ್ಗೆ ಹೊರಟಿದ್ದ ಎಮಿರೇಟ್ಸ್ ವಿಮಾನವು 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತದೇ ಏರ್ಪೋರ್ಟ್ಗೆ ಬಂದಿಳಿದ ಘಟನೆ ವರದಿಯಾಗಿದೆ.
ದುಬೈನಿಂದ ಪ್ರಯಾಣಿಕರನ್ನು ಹೊತ್ತು ನ್ಯೂಜಿಲೆಂಡ್ಗೆ ಹೊರಟಿದ್ದ ಎಮಿರೇಟ್ಸ್ ವಿಮಾನವು 13 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತದೇ ಏರ್ಪೋರ್ಟ್ಗೆ ಬಂದಿಳಿದ ಘಟನೆ ವರದಿಯಾಗಿದೆ. ಫಾಕ್ಸ್ ನ್ಯೂಸ್ ಈ ವರದಿ ಮಾಡಿದ್ದು, ಎಮಿರೇಟ್ಸ್ ವಿಮಾನ EK448 ಸ್ಥಳೀಯ ಕಾಲಮಾನ ಸುಮಾರು 10.30ರ ಸುಮಾರಿಗೆ ಟೇಕ್ಆಫ್ ಆಗಿತ್ತು. ಪೈಲಟ್ 9 ಸಾವಿರ ಮೈಲಿ ಕ್ರಮಿಸಿದ ನಂತರ ಅರ್ಧದಾರಿಯಲ್ಲೇ ಯೂ ಟರ್ನ್ ಮಾಡಿ, ಮತ್ತೆ ದುಬೈ ಏರ್ಪೋರ್ಟ್ಗೆ ಬಂದಿಳಿಯಿತು.
ಮತ್ತಷ್ಟು ಓದಿ: Air Asia: ಲಕ್ನೋದಿಂದ ಕೋಲ್ಕತ್ತಾಗೆ ಹೊರಟಿದ್ದ ಏರ್ ಏಷ್ಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ: ವಿಮಾನ ತುರ್ತು ಭೂಸ್ಪರ್ಶ
ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ತೀವ್ರ ಪ್ರವಾಹ ಸಂಭವಿಸಿದ್ದು, ವಾರಾಂತ್ಯದಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದರು.
Did you know the Auckland airport is the only airport in the world to have an immersive underwater experience in the terminal?
Brilliant architecture! pic.twitter.com/2weSzlMSQd
— STØNΞ | Roo Troop (@MorganStoneee) January 27, 2023
ಜನವರಿ 29ರ ಬೆಳಗ್ಗೆ 5 ಗಂಟೆಯವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸಿರಲಿಲ್ಲ. ನಿಲ್ದಾಣವು ಚಲಾವೃತವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆಕ್ಲೆಂಡ್ ಶುಕ್ರವಾರ ದಾಖಲೆಯ ಮಳೆಯೊಂದಿಗೆ ಅತ್ಯಂತ ಕೆಟ್ಟ ಪ್ರವಾಹವನ್ನು ಕಂಡಿದೆ. ನ್ಯೂಜಿಲೆಂಡ್‌ನ ಅತಿದೊಡ್ಡ ನಗರದಲ್ಲಿ ತುರ್ತು ಪರಿಸ್ಥಿತಿ ಮುಂದುವರಿದಿದೆ ಏಕೆಂದರೆ ಈ ವಾರ ಹೆಚ್ಚು ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಭೀಕರ ಪ್ರವಾಹದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗ ಸೊಂಟದವರೆಗೂ ಬರುವ ನೀರಿನಲ್ಲಿ ನಿವಾಸಿಗಳು ಸಿಲುಕಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ