1992ರಲ್ಲಿ ಆದಾಯ ತೆರಿಗೆ ದರ ಎಷ್ಟಿತ್ತು?; ಬಜೆಟ್ ಮಂಡನೆಯ ದಿನವೇ ಇಲ್ಲೊಂದು ಪೋಸ್ಟ್ ಸಕ್ಕತ್ತ್ ವೈರಲ್ ಆಗಿದೆ !
Income Tax Slab in 1992 Budget: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು(ಫೆ.01) 5ನೇ ಬಜೆಟ್ ಮಂಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ 1992ರ ಆದಾಯ ತೆರಿಗೆ ದರ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ನೆಟ್ಟಿಗರು ಇದನ್ನು ಇಂದಿನ ಬಜೆಟ್‌ನೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು(ಫೆ.01) 5ನೇ ಬಜೆಟ್ ಮಂಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ 1992ರ ಆದಾಯ ತೆರಿಗೆ ದರ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ, ನೆಟ್ಟಿಗರು ಇದನ್ನು ಇಂದಿನ ಬಜೆಟ್‌ನೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ ಎಂದು ಅವರು ಪೋಸ್ಟ್ಗೆ ಪ್ರತಿಕ್ರಿಯಿಸುವ ಮೂಲಕ ತಿಳಿದುಬಂದಿದೆ. ಮೂವತ್ತು ವರ್ಷಗಳ ಹಿಂದೆ, ಯಾವ ಆದಾಯದ ಮೇಲೆ ಜನರು ಆದಾಯ ತೆರಿಗೆ ಪಾವತಿಸಬೇಕಾಗಿತ್ತು ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. 2023ರ ಬಜೆಟ್ ಮಂಡನೆಯ ದಿನವೇ ಈ ಪೋಸ್ಟ್ ಹಂಚಿಕೊಂಡಿದ್ದರಿಂದ ಸಾಕಷ್ಟು ಮಟ್ಟಿಗೆ ವೈರಲ್ ಆಗಿದೆ.
ಈ ಪೋಸ್ಟ್ನ್ನು ಟ್ವಿಟರ್‌ನಲ್ಲಿ ಹ್ಯಾಂಡಲ್ ಇಂಡಿಯನ್ ಹಿಸ್ಟರಿ ಪಿಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 1992ರ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಸ್ಲ್ಯಾಬ್ ಎಂದು ಕ್ಯಾಪ್ಟನ್ ಕೂಡ ಹಾಕಲಾಗಿದೆ. ಇದರಲ್ಲಿ ತಿಳಿಸಿರುವಂತೆ 28000 ಸಾವಿರ ರೂಪಾಯಿಗಳಿಗೆ ತೆರಿಗೆ ಇಲ್ಲ. 28001 ಸಾವಿರದಿಂದ 50000 ರೂಪಾಯಿಗಳ ಮೇಲೆ 20 ಪ್ರತಿಶತ ತೆರಿಗೆ. 50001 ರಿಂದ 100000 ವರೆಗೆ 30 ಪ್ರತಿಶತ ತೆರಿಗೆ ಮತ್ತು 1 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ 40 ಪ್ರತಿಶತ ಆದಾಯ ತೆರಿಗೆ ವಿಧಿಸಲಾಗಿತ್ತು ಎಂದು ತಿಳಿದು ಬಂದಿದೆ.
1992 :: New Income Tax Slabs In Budget
Up to Rs 28000 – Nil
Rs 28001 to 50000 – 20%
Rs 50001 to Rs 100000 – 30%
Above 1 Lac – 40% Income Tax
( Photo – Indian Express ) pic.twitter.com/nd8h7czxyF
— indianhistorypics (@IndiaHistorypic) February 1, 2023
ಇದನ್ನೂ ಓದಿ: ಎದೆ ನಡುಕ ಹುಟ್ಟಿಸುವ ಭಯಾನಕ ಬಂಗೀ ಜಂಪಿಂಗ್ ವಿಡಿಯೋವೊಂದು ಇಲ್ಲಿದೆ
ಇದು 1992 ರಲ್ಲಿ ಪ್ರಧಾನ ಮಂತ್ರಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ತೆರಿಗೆ ಲೆಕ್ಕಚಾರವನ್ನು ಅನ್ನು ಮೂರು ಭಾಗಗಳಾಗಿ ವಿಂಗಡಿಸಿದ ಅವಧಿಯದ್ದು. ಈ ಪೋಸ್ಟ್ ವೈರಲ್ ಆದ ತಕ್ಷಣ ಜನ ಇದಕ್ಕೆ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಇದನ್ನು ಇಂದಿನ ಬಜೆಟ್‌ನೊಂದಿಗೆ ಹೋಲಿಕೆ ಮಾಡಲು ಪ್ರಾರಂಭಿಸಿದ್ದಾರೆ. ಮೂವತ್ತು ವರ್ಷಗಳಲ್ಲಿ ಎಷ್ಟೊಂದು ಅಜಗಜಾಂತರದ ವ್ಯತ್ಯಾಸವಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
2023 ರಲ್ಲಿ, ಹೊಸ ಪ್ರಕಟಣೆಯ ಅಡಿಯಲ್ಲಿ, 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. 7 ಲಕ್ಷಕ್ಕಿಂತ ಹೆಚ್ಚು ಇದ್ದರೆ, ನೀವು ಮೂರು ಲಕ್ಷ ರೂಪಾಯಿಗಳವರೆಗೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. 3ರಿಂದ 6 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ಮತ್ತು 6ರಿಂದ 9 ಲಕ್ಷ ರೂ.ವರೆಗೆ ಶೇ.10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಪ್ರಸ್ತುತ, ಹೊಸ ಬಜೆಟ್ ನಡುವೆ, 1992 ರ ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:39 pm, Wed, 1 February 23