Union Budget 2023: ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬಜೆಟ್‌ನಲ್ಲಿ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ಇದು ಮೋದಿಯವರ ಹೆಡ್‌ಲೈನ್ ಮ್ಯಾನೇಜ್ಮೆಂಟ್ಗಾಗಿ ಮಾಡಿದ OPUD ಓವರ್ ಪ್ರಾಮಿಸ್, ಅಂಡರ್ ಡೆಲಿವರ್ ಕಾರ್ಯತಂತ್ರ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಬುಧವಾರ) ಕೇಂದ್ರ ಬಜೆಟ್ 2023 (Union Budget 2023) ಮಂಡನೆ ಮಾಡಿದ್ದಾರೆ. ಬಜೆಟ್ ಬಗ್ಗೆ ರಾಷ್ಟ್ರೀಯ ನಾಯಕರು ಪ್ರತಿಕ್ರಿಯಿಸಿದ್ದು , ಬಡವರಿಗೆ ಏನೂ ಸಿಕ್ಕಿಲ್ಲ ಎಂದಿದ್ದಾರೆ. ಮುಂಬರುವ 3-4 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಬಜೆಟ್ ಮಂಡಿಸಿದೆ. ಬಡವರಿಗೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಬಜೆಟ್‌ನಲ್ಲಿ ಏನೂ ಇಲ್ಲ.,ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು MNREGA ಉದ್ಯೋಗಗಳಿಗೆ ಯಾವುದೇ ಕ್ರಮಗಳಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಕೇಂದ್ರ ಬಜೆಟ್ 2023 ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
The budget was presented by the Modi govt keeping in view the upcoming Assembly polls in 3-4 states. There’s nothing in the budget for poor people & to control inflation. No steps for jobs, to fill govt vacancies & MNREGA: Congress president Mallikarjun Kharge on #UnionBudget2023 pic.twitter.com/af8AHZhEhN
— ANI (@ANI) February 1, 2023
ಕಳೆದ ವರ್ಷದ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಎಂಜಿಎನ್‌ಆರ್‌ಇಜಿಎ ಮತ್ತು ಎಸ್‌ಸಿಗಳ ಕಲ್ಯಾಣಕ್ಕೆ ನೀಡಿದ ಅನುದಾನದ ಬಗ್ಗೆ ಶ್ಲಾಘನೆ ವ್ಯಕ್ತವಾಗಿತ್ತು. ಇಂದು ವಾಸ್ತವ ಸ್ಪಷ್ಟವಾಗಿದೆ. ವಾಸ್ತವಿಕ ವೆಚ್ಚವು ಬಜೆಟ್‌ಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಇದು ಮೋದಿಯವರ ಹೆಡ್‌ಲೈನ್ ಮ್ಯಾನೇಜ್‌ಮೆಂಟ್ ಗಾಗಿ ಮಾಡಿದ OPUD ಓವರ್ ಪ್ರಾಮಿಸ್, ಅಂಡರ್ ಡೆಲಿವರ್ ಕಾರ್ಯತಂತ್ರ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಬಜೆಟ್‌ನಲ್ಲಿ ಕೆಲವು ಉತ್ತಮ ಅಂಶಗಳಿದ್ದರೂ, ಎಂಎನ್‌ಆರ್‌ಇಜಿಎ, ಬಡ ಗ್ರಾಮೀಣ ಕಾರ್ಮಿಕರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಅವರು ಕಡಿಮೆ ತೆರಿಗೆ ಪದ್ಧತಿಯಲ್ಲಿ ನಂಬಿಕೆಯುಳ್ಳವರು.ಆದ್ದರಿಂದ “ಯಾವುದೇ ತೆರಿಗೆ ಕಡಿತಗಳು ಸ್ವಾಗತಾರ್ಹ ಏಕೆಂದರೆ ಜನರ ಕೈಗೆ ಹೆಚ್ಚಿನ ಹಣವನ್ನು ನೀಡುವುದು ಆರ್ಥಿಕತೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ” ಎಂದು ಕಾರ್ತಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕ ಕೆ ಸುರೇಶ್ ಇದನ್ನು ಕಾರ್ಪೊರೇಟ್ ಪರವಾದ ಬಜೆಟ್ ಎಂದು ಕರೆದಿದ್ದಾರೆ. ಈ ಬಜೆಟ್‌ನಲ್ಲಿ ಅದಾನಿ ಸಂಸ್ಥೆಯ ಎಲ್ಲಾ ಹಿತಾಸಕ್ತಿಗಳನ್ನು ಈಡೇರಿಸಲಾಗಿದೆ, ಆದರೆ ಸಾಮಾನ್ಯ ಜನರನ್ನು ಕಡೆಗಣಿಸಲಾಗಿದೆ. ಈ ಬಜೆಟ್ ಅದಾನಿ, ಅಂಬಾನಿ, ಗುಜರಾತ್‌ಗೆ ಮೀಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, 2023-24ರ ಬಜೆಟ್ ದೇಶದ ಜನರಿಗೆ “ಆಶಾ” (ಭರವಸೆ) ಬದಲಿಗೆ “ನಿರಾಶಾ” (ಹತಾಶೆ) ನೀಡಿದೆ. “ಬಿಜೆಪಿ ತನ್ನ ಬಜೆಟ್‌ನ ದಶಕವನ್ನು ಪೂರ್ಣಗೊಳಿಸುತ್ತಿದೆ, ಆದರೆ ಅದು ಮೊದಲು ಸಾರ್ವಜನಿಕರಿಗೆ ಏನನ್ನೂ ನೀಡದಿದ್ದಾಗ ಅದು ಈಗ ಏನು ನೀಡುತ್ತದೆ?” ಎಂದು ಟ್ವೀಟ್ ಮಾಡಿದ್ದಾರೆ.
ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Wed, 1 February 23