Budget 2023 | ನಿರ್ಮಲಾ ಸೀತಾರಾಮನ್ ಘೋಷಿಸಿರುವ ಯಾವ ಯೋಜನೆಯೂ ಸಾಕಾರಗೊಳ್ಳದು: ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Budget 2023 | ನಿರ್ಮಲಾ ಸೀತಾರಾಮನ್ ಘೋಷಿಸಿರುವ ಯಾವ ಯೋಜನೆಯೂ ಸಾಕಾರಗೊಳ್ಳದು: ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 01, 2023 | 6:24 PM

ಹಿಂದೆ ಮಹಾದಾಯಿ ಯೋಜನೆಗೆ ರೂ. 1,000 ಕೋಟಿ ಬಿಡುಗಡೆ ಮಾಡಲಾಗಿದ್ದರೂ ಒಂದು ರೂಪಾಯಿಯನ್ನಾದರೂ ರಾಜ್ಯ ಸರ್ಕಾರ ಖರ್ಚು ಮಾಡಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ ಬಜೆಟ್ 2023 ಅನ್ನು ತೀವ್ರವಾಗಿ ಟೀಕಿಸಿದರು. ಇದು ಪ್ರಧಾನಿ ನರೇಂದ್ರ ಮೋದಿಯವರ ಆಧಿಕಾರಾವಧಿಯ ಕೊನೆಯ ಬಜೆಟ್ ಅಗಿದ್ದರೂ ಅದರಲ್ಲಿ ಜನ ಖುಷಿಪಟ್ಟುಕೊಳ್ಳುವಂಥದ್ದೇನೂ ಇಲ್ಲ. 2014 ರಲ್ಲಿ ಮನಮೋಹನ್ ಸಿಂಗ್ (Manmohan Singh) ಪ್ರಧಾನಿಯಾಗಿದ್ದ ಅವಧಿಯ ಕೊನೆ ವರ್ಷದಲ್ಲಿ ಭಾರತದ ಮೇಲೆ ರೂ. 54.90 ಲಕ್ಷ ಕೋಟಿ ಸಾಲವಿತ್ತು. ಆದರೆ, ಪ್ರಧಾನಿ ಮೋದಿ 10 ವರ್ಷಗಳ ಆಧಿಕಾರದಲ್ಲಿ ಸಾಲದ ಮೊತ್ತ ರೂ 118 ಲಕ್ಷ ಕೋಟಿ ತಲುಪಿದೆ ಎಂದು ಸಿದ್ದರಾಮಯ್ಯ ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಗೆ ರೂ 5,300 ಕೋಟಿ ಮೀಸಲಿಟ್ಟಿರುವ ಬಗ್ಗೆ ವಿತ್ತೀಯ ಸಚಿವರು ಘೋಷಣೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ನೋಟಿಫಿಕೇಷನ್ ಬಿಡುಗಡೆ ಮಾಡದೆ ಆ ಹಣವನ್ನು ಯೋಜನೆಗೆ ಖರ್ಚುಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ಕಾರಣಕ್ಕೆ ಹಿಂದೆ ಮಹಾದಾಯಿ ಯೋಜನೆಗೆ ರೂ. 1,000 ಕೋಟಿ ಬಿಡುಗಡೆ ಮಾಡಲಾಗಿದ್ದರೂ ಒಂದು ರೂಪಾಯಿಯನ್ನಾದರೂ ರಾಜ್ಯ ಸರ್ಕಾರ ಖರ್ಚು ಮಾಡಿದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 01, 2023 06:23 PM