ಬಿಜೆಪಿಗೆ ಹಿಂದೂ ಮತ್ತು ಮುಸಲ್ಮಾನರು ಜಗಳ ಮಾಡುವುದು ಬೇಕು, ಬೇರೇನೂ ಬೇಡ: ಜಮೀರ್ ಅಹ್ಮದ್, ಶಾಸಕ
ಪ್ರಧಾನಿ ಮೋದಿ 2014ರಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ, ಅಚ್ಛೇ ದಿನ್ ಆಯೆಂಗೆ ಅಂತ ಹೇಳಿದ್ದರು. ಯಾರಿಗಾದರೂ ಅಚ್ಛೇ ದಿನ್ ಬಂದವೇ? ಯಾರಿಗಾದರೂ ನೌಕರಿ ಸಿಕ್ಕಿತೇ, ಯಾರದ್ದಾದರೂ ವಿಕಾಸ ಆಯಿತೇ? ಎಂದು ಜಮೀರ್ ಕೇಳಿದರು,
ಕೋಲಾರ: ಕೆಲದಿನಗಳಿಂದ ಕಣ್ಮರೆಯಾಗಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಕೋಲಾರದಲ್ಲಿ ಇಂದು ಸಾರ್ವಜನಿಕರೆದುರು ಪ್ರತ್ಯಕ್ಷರಾದರು. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಜಮೀರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ 2014ರಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ, ಅಚ್ಛೇ ದಿನ್ ಆಯೆಂಗೆ ಅಂತ ಹೇಳಿದ್ದರು. ಯಾರಿಗಾದರೂ ಅಚ್ಛೇ ದಿನ್ ಬಂದವೇ? ಯಾರಿಗಾದರೂ ನೌಕರಿ ಸಿಕ್ಕಿತೇ, ಯಾರದ್ದಾದರೂ ವಿಕಾಸ ಆಯಿತೇ? ಬಿಜೆಪಿಗೆ ಇದ್ಯಾವುದೂ ಬೇಕಿಲ್ಲ, ಅವರಿಗೆ ಕೇವಲ ಹಿಂದೂ-ಮುಸಲ್ಮಾನರ ನಡುವೆ ಜಗಳ ತಂದಿಡುವುದು ಬೇಕು, ಎಂದು ಜಮೀರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

