Gowri Shankara: ರವಿಚಂದ್ರನ್​ ಚಿತ್ರದಲ್ಲಿ ದುಬಾರಿ ಶ್ವಾನ ನಟನೆ; 10 ಲಕ್ಷ ರೂಪಾಯಿ ಸಂಭಾವನೆ

Gowri Shankara: ರವಿಚಂದ್ರನ್​ ಚಿತ್ರದಲ್ಲಿ ದುಬಾರಿ ಶ್ವಾನ ನಟನೆ; 10 ಲಕ್ಷ ರೂಪಾಯಿ ಸಂಭಾವನೆ

ಮದನ್​ ಕುಮಾರ್​
|

Updated on:Feb 01, 2023 | 3:50 PM

‘ಗೌರಿ ಶಂಕರ’ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ರವಿಚಂದ್ರನ್​ ಮತ್ತು ಅಪೂರ್ವಾ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಒಂದು ಶ್ವಾನ ಕೂಡ ಮುಖ್ಯ ಪಾತ್ರ ಮಾಡುತ್ತಿದೆ.

‘ಕ್ರೇಜಿ ಸ್ಟಾರ್​’ ರವಿಚಂದ್ರನ್​ (Ravichandran) ಅವರು ‘ಗೌರಿ ಶಂಕರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕುಂಚ ಕಲಾವಿದನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಚ್ಚರಿ ಏನೆಂದರೆ ಈ ಸಿನಿಮಾದಲ್ಲಿ ದುಬಾರಿ ಬೆಲೆಯ ಶ್ವಾನ (Costliest Dog) ಕೂಡ ನಟಿಸುತ್ತಿದೆ. ವಿಶೇಷ ತಳಿಯ ಈ ನಾಯಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ‘ಗೌರಿ ಶಂಕರ’ (Gowri Shankara Movie) ಚಿತ್ರದ ಕಥೆ ಡಿಫರೆಂಟ್​ ಆಗಿದ್ದು, ತುಂಬ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಆಗುತ್ತಿದೆ. ರವಿಚಂದ್ರನ್​ ಜೊತೆ ನಟಿ ಅಪೂರ್ವಾ ಅವರು ಅಭಿನಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Feb 01, 2023 03:50 PM