KD Movie: ‘ಕೆಡಿ’ ಸಿನಿಮಾದಲ್ಲಿ ರವಿಚಂದ್ರನ್ಗೆ ಖಡಕ್ ಪಾತ್ರ; ಹೊಸ ವರ್ಷಕ್ಕೆ ರಿವೀಲ್ ಆಯ್ತು ಅಣ್ಣಯ್ಯಪ್ಪ ಲುಕ್
Ravichandran | Dhruva Sarja: ‘ಕೆಡಿ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರು ಅಣ್ಣಯ್ಯಪ್ಪ ಎಂಬ ಪಾತ್ರ ಮಾಡುತ್ತಿದ್ದಾರೆ.
ನಟ ರವಿಚಂದ್ರನ್ (Crazy Star Ravichandran) ಅವರು ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲಂತಹ ಕಲಾವಿದ. ಅಂಥ ಪ್ರತಿಭಾವಂತ ನಟ ಈಗ ‘ಕೆಡಿ’ ಸಿನಿಮಾ (KD Movie) ತಂಡವನ್ನು ಸೇರಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಸಖತ್ ಖುಷಿ ಆಗಿದೆ. ಹೊಸ ವರ್ಷದ ಪ್ರಯುಕ್ತ ಇಂದು (ಜ.1) ಈ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಜೋಗಿ’ ಪ್ರೇಮ್ (Jogi Prem) ನಿರ್ದೇಶನ ಮಾಡುತ್ತಿರುವ, ಧ್ರುವ ಸರ್ಜಾ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ಈ ಸಿನಿಮಾದಲ್ಲಿ ರವಿಚಂದ್ರನ್ ಅವರು ಅಣ್ಣಯ್ಯಪ್ಪ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ತಿಳಿಸುವ ಸಲುವಾಗಿ ಪೋಸ್ಟರ್ ಹಂಚಿಕೊಳ್ಳಲಾಗಿದ್ದು, ಇದನ್ನು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಸಿನಿಪ್ರಿಯರಿಗೆ ನಿರೀಕ್ಷೆ ಇದ್ದೇ ಇರುತ್ತದೆ. ಅವರ ಜೊತೆ ರವಿಚಂದ್ರನ್ ಕೈ ಜೋಡಿಸಿರುವುದು ಹೈಪ್ ಹೆಚ್ಚಲು ಕಾರಣ ಆಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ‘ಕೆಡಿ’ ಸಿನಿಮಾ ಮೂಡಿಬರುತ್ತಿದೆ. ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ರವಿಚಂದ್ರನ್ ಅವರ ಲುಕ್ ಸಖತ್ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: KD ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸುವುದು ಬಹುತೇಕ ಖಚಿತ: ಸುಳಿವು ನೀಡಿದ ಧ್ರುವ ಸರ್ಜಾ
ಕಪ್ಪು ಬಟ್ಟೆ, ಉದ್ದ ಕೂದಲು, ಕೂಲಿಂಗ್ ಗ್ಲಾಸ್, ಹಣೆಯಲ್ಲಿ ವಿಭೂತಿ.. ಹೀಗೆ ವಿಶೇಷ ಗೆಟಪ್ನಲ್ಲಿ ರವಿಚಂದ್ರನ್ ಅವರ ಪಾತ್ರ ಇರಲಿದೆ. ಸಿಕ್ಕಾಪಟ್ಟೆ ಗತ್ತಿನಲ್ಲಿ ಕಾರೊಳಗೆ ಕುಳಿತು ಅವರು ಪೋಸ್ ನೀಡಿದ್ದಾರೆ. ಈ ಪೋಸ್ಟರ್ನಿಂದಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಈ ಖಡಕ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಪ್ರೇಮ್ ಅವರು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ- ಪ್ರೇಮ್ ಸಿನಿಮಾಗೆ ‘ಕೆಡಿ’ ಟೈಟಲ್; ಅದ್ದೂರಿಯಾಗಿ ಲಾಂಚ್ ಆಯ್ತು ಶೀರ್ಷಿಕೆ
ಮಾಸ್ ಸಿನಿಮಾಗಳಿಂದ ಫೇಮಸ್ ಆದವರು ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ. ‘ಕೆಡಿ’ ಚಿತ್ರದಲ್ಲೂ ಅವರ ಮಾಸ್ ಅವತಾರ ಮುಂದುವರಿಯಲಿದೆ ಎಂಬುದಕ್ಕೆ ಟೀಸರ್ನಲ್ಲಿ ಸುಳಿವು ನೀಡಲಾಗಿತ್ತು. ರೆಟ್ರೋ ಕಾಲದ ಕಥೆ ಈ ಚಿತ್ರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ತಕ್ಕಂತೆಯೇ ರವಿಚಂದ್ರನ್ ಅವರ ಲುಕ್ ಮೂಡಿಬಂದಿದೆ. ಅಭಿಮಾನಿಗಳ ವಲಯದಲ್ಲಿ ಹೊಸ ಪೋಸ್ಟರ್ ವೈರಲ್ ಆಗುತ್ತಿದೆ.
View this post on Instagram
‘ಕೆಡಿ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಾಣಲಿದೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ. ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ. ತೆರೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅವರ ವೃತ್ತಿಜೀವನಕ್ಕೆ ಇದು ಮಹತ್ವದ ಸಿನಿಮಾ ಆಗುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:23 pm, Sun, 1 January 23