ಸ್ಯಾಂಡಲ್ವುಡ್ನಲ್ಲಿ ಶಿವಣ್ಣ-ರವಿಚಂದ್ರನ್ ಬರ್ತ್ಡೇ ಸಂಭ್ರಮ; ಸ್ಟಾರ್ ನಟರ ಹುಟ್ಟುಹಬ್ಬ ಒಟ್ಟಾಗಿ ಆಚರಿಸಲು ಪ್ಲ್ಯಾನ್
ಶಿವರಾಜ್ಕುಮಾರ್ ಅವರು ಜುಲೈ 12ರಂದು ಜನಿಸಿದ್ದಾರೆ. ರವಿಚಂದ್ರನ್ ಅವರು ಜನಿಸಿದ್ದು ಮೇ 30ರಂದು. ಇವರ ಬರ್ತ್ಡೇಯನ್ನು ದೊಡ್ಡದಾಗಿ ನಡೆಸಲು ಪ್ಲ್ಯಾನ್ ನಡೆದಿದೆ.
ನಟ ಶಿವರಾಜ್ಕುಮಾರ್ (Shivarajkumar) ಹಾಗೂ ರವಿಚಂದ್ರನ್ ಅವರು ಸಮಕಾಲೀನರು. ಅವರ ನಡುವೆ ಒಂದು ವರ್ಷ ವಯಸ್ಸಿನ ಅಂತರವಿದೆ. ಇಬ್ಬರೂ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಶಿವರಾಜ್ಕುಮಾರ್ ಅವರು 125ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ರವಿಚಂದ್ರನ್ (Ravichandran) ಅವರು ನಟನೆಯ ಜತೆಗೆ ನಿರ್ಮಾಪಕನಾಗಿ, ನಿರ್ದೇಶಕನಾಗಿ ಗಮನ ಸೆಳೆದಿದ್ದಾರೆ. ಶಿವಣ್ಣಗೆ 60 ವರ್ಷ ವಯಸ್ಸು. ರವಿಚಂದ್ರನ್ಗೆ 61 ವರ್ಷ ತುಂಬಿದೆ. ಈಗ ಇಬ್ಬರ ಬರ್ತ್ಡೇಯನ್ನು ಒಟ್ಟಾಗಿ ಆಚರಿಸಲು ಕರ್ನಾಟಕ ಫಿಲಂ ಚೇಂಬರ್ ನಿರ್ಧರಿಸಿದೆ.
ಶಿವರಾಜ್ಕುಮಾರ್ ಅವರು ಜುಲೈ 12ರಂದು ಜನಿಸಿದ್ದಾರೆ. ರವಿಚಂದ್ರನ್ ಅವರು ಜನಿಸಿದ್ದು ಮೇ 30ರಂದು. ಇವರ ಬರ್ತ್ಡೇಯನ್ನು ದೊಡ್ಡದಾಗಿ ನಡೆಸಲು ಪ್ಲ್ಯಾನ್ ನಡೆದಿದೆ. ಫಿಲಂ ಚೇಂಬರ್ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಅವರು ಟಿವಿ9 ಕನ್ನಡದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಅವರು ಈ ಬಾರಿ 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬರ್ತ್ಡೇಯನ್ನು ದೊಡ್ಡದಾಗಿ ಆಚರಿಸಲು ಪುನೀತ್ ರಾಜ್ಕುಮಾರ್ ಈ ಮೊದಲು ನಿರ್ಧರಿಸಿದ್ದರು. ಆದರೆ, ಪುನೀತ್ ಅಕಾಲಿಕ ಮರಣ ಹೊಂದಿದರು. ಅಪ್ಪು ಇಲ್ಲ ಎಂಬ ಕಾರಣಕ್ಕೆ ಶಿವರಾಜ್ಕುಮಾರ್ ಅವರು ಈ ಬಾರಿ ಬರ್ತ್ಡೇ ಆಚರಿಸಿಕೊಂಡಿಲ್ಲ. ಈ ಕಾರಣಕ್ಕೆ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಶಿವಣ್ಣ ಹಾಗೂ ರವಿಚಂದ್ರನ್ ಬರ್ತ್ಡೇ ದೊಡ್ಡದಾಗಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಘೋಸ್ಟ್’ ಸ್ವಾಗತಿಸಿದ ಕಿಚ್ಚ ಸುದೀಪ್; ಶಿವರಾಜ್ಕುಮಾರ್ ಲುಕ್ ನೋಡಿ ಫ್ಯಾನ್ಸ್ ಫಿದಾ
ಅಂದುಕೊಂಡಂತೆ ನಡೆದರೆ ಇದು ಸ್ಯಾಂಡಲ್ವುಡ್ ಪಾಲಿಗೆ ಬಹುದೊಡ್ಡ ದಿನವಾಗಲಿದೆ. ಶಿವಣ್ಣ ಹಾಗೂ ರವಿಚಂದ್ರನ್ ಸ್ಯಾಂಡಲ್ವುಡ್ನಲ್ಲಿ ಅಜಾತಶತ್ರುಗಳು. ಈ ಕಾರಣಕ್ಕೆ ಬಹುತೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ಸಾಧ್ಯತೆ ಇದೆ. ಸ್ಯಾಂಡಲ್ವುಡ್ ಮಾತ್ರವಲ್ಲದೆ ಪರಭಾಷೆಯ ಸ್ಟಾರ್ಗಳನ್ನು ಆಹ್ವಾನಿಸಲು ಚಿಂತನೆ ನಡೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ರೂಪಿಸಲಾಗುತ್ತಿದೆ.
Published On - 4:32 pm, Thu, 4 August 22