Ashika Ranganath: ಚೀಟಿ ನೋಡಿ ಸಿನಿಮಾ ಒಪ್ಪಿಕೊಂಡ ಆಶಿಕಾ ರಂಗನಾಥ್​; ಸಂಭಾವನೆ ಗುಟ್ಟು ಇಬ್ಬರಿಗೆ ಮಾತ್ರ ಗೊತ್ತು

Simple Suni | Gata Vaibhava: ಆಶಿಕಾ ರಂಗನಾಥ್​ ಅವರಿಗೆ ಎಷ್ಟು ಸಂಭಾವನೆ ಸಿಗಲಿದೆ ಎಂಬುದನ್ನು ಸುನಿ ಅವರು ಒಂದು ಚೀಟಿಯಲ್ಲಿ ಬರೆಯುತ್ತಾರೆ. ಅದನ್ನು ನೋಡಿದ ಆಶಿಕಾ ಫುಲ್​ ಖುಷಿ ಆಗಿ ಸಿನಿಮಾ ಒಪ್ಪಿಕೊಳ್ಳುತ್ತಾರೆ.

Ashika Ranganath: ಚೀಟಿ ನೋಡಿ ಸಿನಿಮಾ ಒಪ್ಪಿಕೊಂಡ ಆಶಿಕಾ ರಂಗನಾಥ್​; ಸಂಭಾವನೆ ಗುಟ್ಟು ಇಬ್ಬರಿಗೆ ಮಾತ್ರ ಗೊತ್ತು
ಆಶಿಕಾ ರಂಗನಾಥ್, ಸಿಂಪಲ್ ಸುನಿ, ದುಷ್ಯಂತ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 05, 2022 | 12:18 PM

ನಟಿ ಆಶಿಕಾ ರಂಗನಾಥ್​ (Ashika Ranganath) ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಹೀರೋಯಿನ್​ ಆಗಿ ಮಿಂಚುತ್ತಿದ್ದಾರೆ. ಸ್ಟಾರ್​ ನಟರ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆ ಆಗುವ ಮೂಲಕ ಅವರು ಸ್ಯಾಂಡಲ್​ವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಪರಭಾಷೆಯಿಂದಲೂ ಅವರಿಗೆ ಡಿಮ್ಯಾಂಡ್​ ಇದೆ. ಈ ವರ್ಷ ತೆರೆಕಂಡ ‘ಅವತಾರ ಪುರುಷ’ ಚಿತ್ರದಲ್ಲಿ ನಿರ್ದೇಶಕ ‘ಸಿಂಪಲ್​ ಸುನಿ’ (Simple Suni) ಜತೆ ಅವರು ಕೆಲಸ ಮಾಡಿದ್ದರು. ಈಗ ಅವರು ಮತ್ತೆ ಸುನಿ ಜೊತೆ ಕೈ ಜೋಡಿಸಿದ್ದಾರೆ. ಹೊಸ ಹೀರೋ ದುಷ್ಯಂತ್​ ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ಗತ ವೈಭವ’ (Gata Vaibhava) ಚಿತ್ರಕ್ಕೆ ಆಶಿಕಾ ರಂಗನಾಥ್​ ಹೀರೋಯಿನ್​ ಆಗಿದ್ದಾರೆ. ಈ ವಿಚಾರ ತಿಳಿಸಲು ಚಿತ್ರತಂಡ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಇಂದು (ಆಗಸ್ಟ್​ 5) ಆಶಿಕಾ ರಂಗನಾಥ್​ ಜನ್ಮದಿನ. ಆ ಪ್ರಯುಕ್ತ ಪ್ರೋಮೋದ ಜೊತೆ ಅವರ ಫಸ್ಟ್​ ಲುಕ್​ ಕೂಡ ವೈರಲ್​ ಆಗಿದೆ.

ತುಂಬ ಇಂಟರೆಸ್ಟಿಂಗ್​ ಆಗಿ ಈ ಪ್ರೋಮೋ ಮೂಡಿಬಂದಿದೆ. ‘ಗತ ವೈಭವ’ ಚಿತ್ರದ ಸಲುವಾಗಿ ಮಾತುಕಥೆ ಮಾಡಲು ಆಶಿಕಾ ರಂಗನಾಥ್​ ಅವರನ್ನು ಸುನಿ ಕರೆಸುತ್ತಾರೆ. ಆದರೆ ಈ ಚಿತ್ರಕ್ಕೆ ಹೊಸ ಹುಡುಗ ಹೀರೋ ಎಂದು ಗೊತ್ತಾದ ತಕ್ಷಣ ಆಶಿಕಾ ಹತ್ತಾರು ನೆಪ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ‘ಈಗ ಸ್ಟಾರ್​ ಸಿನಿಮಾಗಳನ್ನು ಮಾಡುತ್ತಿದ್ದೇನೆ.. ತೆಲುಗು-ತಮಿಳಿನಿಂದಲೂ ಆಫರ್​ ಬರುತ್ತಿದೆ..’ ಎಂದೆಲ್ಲ ಹೇಳುತ್ತಾರೆ. ಆಗ ಸುನಿ ಒಂದು ಚೀಟಿ ನೀಡುತ್ತಾರೆ!

ಇದನ್ನೂ ಓದಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ಆಶಿಕಾ ರಂಗನಾಥ್​ ಅವರಿಗೆ ಎಷ್ಟು ಸಂಭಾವನೆ ಸಿಗಲಿದೆ ಎಂಬುದನ್ನು ಆ ಚೀಟಿಯಲ್ಲಿ ಬರೆಯುತ್ತಾರೆ ಸುನಿ. ಆದರೆ ಅದು ಎಷ್ಟು ಎಂಬ ಗುಟ್ಟನ್ನು ಅವರು ರಟ್ಟು ಮಾಡುವುದಿಲ್ಲ. ಆ ವಿಚಾರ ವಿನಿಮಯ ಆಗುವುದು ಆಶಿಕಾ ಮತ್ತು ಸುನಿ ನಡುವೆ ಮಾತ್ರ. ಚೀಟಿ ನೋಡಿದ ಆಶಿಕಾ ಫುಲ್​ ಖುಷಿ ಆಗುತ್ತಾರೆ. ಅಲ್ಲಿಯ ತನಕ ಸ್ಟಾರ್​ ಸಿನಿಮಾ, ಪರಭಾಷೆ ಆಫರ್​ ಅಂತೆಲ್ಲ ನೆಪ ಹೇಳುತ್ತಿದ್ದವರು ಕೂಡಲೇ ಹೊಸ ಹುಡುಗನ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಸ್ಕ್ರಿಪ್ಟ್​ ಕೂಡ ಪೂರ್ತಿ ಓದುವುದಿಲ್ಲ!

ಈ ಪ್ರೋಮೋ ಸಖತ್​ ವೈರಲ್​ ಆಗಿದೆ. ಈ ಹಿಂದೆ ಹೀರೋ ಇಂಟ್ರೊಡಕ್ಷನ್​ ಸಲುವಾಗಿಯೂ ಸುನಿ ಇದೇ ರೀತಿ ಟೀಸರ್​ ಬಿಡುಗಡೆ ಮಾಡಿ ಗಮನ ಸೆಳೆದಿದ್ದರು. ಈ ಚಿತ್ರಕ್ಕೆ ಈಗಾಗಲೇ ಶೇ. 40ರಷ್ಟು ಶೂಟಿಂಗ್​ ಮುಗಿದಿದೆ. ‘ಸುನಿ ಸಿನಿಮಾಸ್’ ಬ್ಯಾನರ್​ನಲ್ಲಿ ದೀಪಿಕ್ ಹಾಗೂ ಸುನಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ವೈರಲ್​ ಆಗಿರುವ ಆಶಿಕಾ ರಂಗನಾಥ್​ ಅವರ ದೇವಕನ್ಯೆ ಗೆಟಪ್​ ಹಂಚಿಕೊಂಡು ಎಲ್ಲರೂ ಅವರಿಗೆ ಬರ್ತ್​ಡೇ ಶುಭಾಶಯ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:18 pm, Fri, 5 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ