‘ಸೈರನ್’​ ಬಾರಿಸಿದ ಚಿಕ್ಕಣ್ಣ; ಉಪಾಧ್ಯಕ್ಷರಿಂದ ಬಿಡುಗಡೆ ಆಯ್ತು ಪ್ರವೀರ್​ ಶೆಟ್ಟಿ ಸಿನಿಮಾ ಟೀಸರ್​

Siren Kannada Movie: ‘ಸೈರನ್​’ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಚಿತ್ರದ ಮೂಲಕ ಪ್ರವೀಣ್ ಶೆಟ್ಟಿ ಮಗ ಪ್ರವೀರ್​ ಶೆಟ್ಟಿ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

‘ಸೈರನ್’​ ಬಾರಿಸಿದ ಚಿಕ್ಕಣ್ಣ; ಉಪಾಧ್ಯಕ್ಷರಿಂದ ಬಿಡುಗಡೆ ಆಯ್ತು ಪ್ರವೀರ್​ ಶೆಟ್ಟಿ ಸಿನಿಮಾ ಟೀಸರ್​
‘ಸೈರನ್’ ಸಿನಿಮಾ ಟೀಸರ್ ಲಾಂಚ್​ ಕಾರ್ಯಕ್ರಮ
Follow us
TV9 Web
| Updated By: ಮದನ್​ ಕುಮಾರ್​

Updated on: Aug 05, 2022 | 7:25 AM

ಚಿತ್ರರಂಗಕ್ಕೆ ಪ್ರತಿ ದಿನ ಹೊಸಬರ ಆಗಮನ ಆಗುತ್ತದೆ. ಈಗ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ (Praveer Shetty) ಕೂಡ ಎಂಟ್ರಿ ನೀಡುತ್ತಿದ್ದಾರೆ. ಅವರ ಮೊದಲ ಸಿನಿಮಾಗೆ ‘ಸೈರನ್​’ ಎಂದು ಶೀರ್ಷಿಕೆ ಇಡಲಾಗಿದೆ. ಟೀಸರ್​ ಬಿಡುಗಡೆ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದೆ. ಖ್ಯಾತ ಹಾಸ್ಯ ನಟ, ‘ಸ್ಯಾಂಡಲ್​ವುಡ್​ ಉಪಾಧ್ಯಕ’ ಚಿಕ್ಕಣ್ಣ (Chikkanna) ಅವರು ಈ ಚಿತ್ರದ ಟೀಸರ್​ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ‘ಸೈರನ್​’ ಟೀಸರ್​ ಬಿಡುಗಡೆ ಸಮಾರಂಭಕ್ಕೆ ಅನೇಕ ಗಣ್ಯರು ಹಾಜರಿ ಹಾಕಿದ್ದರು. ನಿರ್ಮಾಪಕ ಉಮಾಪತಿ ಗೌಡ, ಪತ್ರಕರ್ತ ರಂಗನಾಥ್​ ಭಾರದ್ವಜ್​, ಲಹರಿ ವೇಲು, ಶಿವಾನಂದ ಶೆಟ್ಟಿ, ಶರತ್​ ಚಂದ್ರ ಸಾಹಿಲ್​ ಸೇರಿದಂತೆ ಅನೇಕರು ಬಂದು ಪ್ರವೀರ್​ ಶೆಟ್ಟಿಗೆ ಶುಭ ಹಾರೈಸಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ‘ಸೈರನ್​’ (Siren Kannada Movie) ಟೀಸರ್​ ಲಾಂಚ್​ ಮಾಡಲಾಗಿದೆ.

‘ರಸ್ತೆಯಲ್ಲಿ ‘ಸೈರನ್’ ಸದ್ದಿಗೆ ಎಲ್ಲರೂ ದಾರಿ ಬಿಡುತ್ತಾರೆ. ಕನ್ನಡ ಚಿತ್ರರಂಗದಲ್ಲೂ ಈ ‘ಸೈರನ್’ ಭಾರಿ ಸೌಂಡು ಮಾಡಲಿ. ಭರ್ಜರಿ ಯಶಸ್ಸು ಕಾಣಲಿ. ಟೀಸರ್ ಮೂಲಕವೇ ಪ್ರವೀರ್ ಶೆಟ್ಟಿ ಒಳ್ಳೆಯ ಭರವಸೆ ಮೂಡಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದು ಟೀಸರ್ ರಿಲೀಸ್​ ಮಾಡಿದ ಬಳಿಕ ಚಿಕ್ಕಣ್ಣ ಹಾರೈಸಿದ್ದಾರೆ. ರಾಜ ವೆಂಕಯ್ಯ ನಿರ್ದೇಶನ ಮಾಡುತ್ತಿರುವ ‘ಸೈರನ್​’ ಚಿತ್ರಕ್ಕೆ ಬಿಜು ಶಿವಾನಂದ್ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾವನ್ನು ‘ಪವರ್ ಸ್ಟಾರ್’ ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಿಸುವುದಾಗಿ ನಾಯಕ ಪ್ರವೀರ್ ಶೆಟ್ಟಿ ಹೇಳಿದ್ದಾರೆ. ಅವರ ಜೊತೆ ಲಾಸ್ಯ, ಸುಕನ್ಯ ಮುಂತಾದವರು ನಟಿಸಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ನಿರ್ದೇಶಕ ರಾಜ ವೆಂಕಯ್ಯ ಅವರಿಗೆ ಇದೆ. ಛಾಯಾಗ್ರಾಹಕನಾಗಿ, ಸಂಕಲನಕಾರನಾಗಿಯೂ ಅವರು ಕೆಲಸ ಮಾಡಿದ್ದಾರೆ. ‘ಸೈರನ್’ ಚಿತ್ರದ ಮೂಲಕ ಅವರೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ‘ನಾಯಕ ಪ್ರವೀರ್ ಶೆಟ್ಟಿ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಆಡಿಯೋ ರಿಲೀಸ್ ಸಮಯದಲ್ಲಿ ಈ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದು ರಾಜ ವೆಂಕಯ್ಯ ಹೇಳಿದ್ದಾರೆ.

ಇದನ್ನೂ ಓದಿ
Image
Love 360: ಶಿವಣ್ಣ ಮೆಚ್ಚಿದ ‘ಲವ್​ 360 ಟ್ರೇಲರ್​’: ಚಿತ್ರತಂಡ ಹಾಗೂ ಸಿದ್​ ಶ್ರೀರಾಮ್​ ಬಗ್ಗೆ ವಿಶೇಷ ಮಾತು
Image
Vikrant Rona: ಜಪಾನ್​ನಲ್ಲೂ ಸುದೀಪ್​ ಅಭಿಮಾನಿಯಿಂದ ರಕ್ಕಮ್ಮ ಹಾಡಿಗೆ ಡ್ಯಾನ್ಸ್​; ವಿಡಿಯೋ ವೈರಲ್​
Image
25 ವರ್ಷಗಳ ನೆನಪಿನ ಪುಟ ತೆರೆದ ಹರೀಶ್​ ರಾಜ್​; ಚಿತ್ರರಂಗದಲ್ಲಿ ‘ಕಲಾಕಾರ್​’ ಮೈಲಿಗಲ್ಲು
Image
‘ವಿಕ್ರಾಂತ್ ರೋಣ’ ಚಿತ್ರದ ಕೆಲವು ದೃಶ್ಯದ ಬಗ್ಗೆ ತಕರಾರು ತೆಗೆದ ನಟ ಚೇತನ್ ಕುಮಾರ್

‘ಪ್ರವೀಣ್ ಶೆಟ್ಟಿ ಮತ್ತು ನಾವು ನೆರೆಹೊರೆಯವರು. ಅವರ ಮಗನ ಚಿತ್ರ ಭರ್ಜರಿ ಗೆಲುವು ಸಾಧಿಸಲಿ’ ಎಂದು ಲಹರಿ ಸಂಸ್ಥೆಯ ವೇಲು ಶುಭ ಕೋರಿದರು. ‘ಪ್ರವೀಣ್ ಶೆಟ್ಟಿ ಅವರ ಸ್ನೇಹಿತರ ಬಳಗ ದೊಡ್ಡದು. ಮುಂದೆ ಈ ಸಿನಿಮಾದ ಕಾರ್ಯಕ್ರಮಗಳನ್ನು ಅರಮನೆ ಆವರಣದಲ್ಲಿ ಮಾಡುವಂತೆ ವಿನಂತಿಸುತ್ತೇನೆ. ಟೀಸರ್ ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ಭರವಸೆ ಇದೆ’ ಎಂದಿದ್ದಾರೆ ನಿರ್ಮಾಪಕ ಉಮಾಪತಿ ಗೌಡ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ