Vikrant Rona: ಜಪಾನ್​ನಲ್ಲೂ ಸುದೀಪ್​ ಅಭಿಮಾನಿಯಿಂದ ರಕ್ಕಮ್ಮ ಹಾಡಿಗೆ ಡ್ಯಾನ್ಸ್​; ವಿಡಿಯೋ ವೈರಲ್​

Kichcha Sudeep | Ra Ra Rakkamma: ದೇಶ ಮತ್ತು ಭಾಷೆಯ ಗಡಿ ಮೀರಿ ವಿಕ್ರಾಂತ್​ ರೋಣ ಸಿನಿಮಾ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ಹೆಜ್ಜೆ ಹಾಕಿರುವ​ ‘ರಾ ರಾ ರಕ್ಕಮ್ಮ..’ ಹಾಡು ವಿದೇಶಿಗರಿಗೂ ಇಷ್ಟ ಆಗಿದೆ.

Vikrant Rona: ಜಪಾನ್​ನಲ್ಲೂ ಸುದೀಪ್​ ಅಭಿಮಾನಿಯಿಂದ ರಕ್ಕಮ್ಮ ಹಾಡಿಗೆ ಡ್ಯಾನ್ಸ್​; ವಿಡಿಯೋ ವೈರಲ್​
ಜಪಾನ್​ನಲ್ಲಿ ಸುದೀಪ್​ ಅಭಿಮಾನಿ
Follow us
TV9 Web
| Updated By: ಮದನ್​ ಕುಮಾರ್​

Updated on: Aug 04, 2022 | 7:22 AM

ಕನ್ನಡದ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಮೋಡಿ ಮಾಡಿದೆ. ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ ಪುಲ್​ ಪ್ರದರ್ಶನ ಕಂಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಜೊತೆಗೆ ವಿದೇಶದಲ್ಲೂ ಈ ಚಿತ್ರದ ಬಗ್ಗೆ ಕ್ರೇಜ್​ ಸೃಷ್ಟಿ ಆಗಿದೆ. ‘ರಾ ರಾ ರಕ್ಕಮ್ಮ..’ (Ra Ra Rakkamma) ಹಾಡಿಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮತ್ತು ಲಕ್ಷಾಂತರ ಅಭಿಮಾನಿಗಳು ರೀಲ್ಸ್ ಮಾಡಿದ್ದಾರೆ. ಈಗ ಜಪಾನ್​ನಲ್ಲಿನ ವ್ಯಕ್ತಿಯೊಬ್ಬರು ಇದೇ ಹಾಡಿಗೆ ರೀಲ್ಸ್​ ಮಾಡಿ ಗಮನ ಸೆಳೆದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ವಿದೇಶಿ ನೆಲದಲ್ಲೂ ಕಿಚ್ಚ ಸುದೀಪ್​ (Kichcha Sudeep) ಬಗ್ಗೆ ಜನರು ಇಟ್ಟುಕೊಂಡಿರುವ ಅಭಿಮಾನಕ್ಕೆ ಈ ವಿಡಿಯೋ ಸಾಕ್ಷಿ. ಕಿಚ್ಚನ ಅಭಿಮಾನಿಗಳು ಹೆಮ್ಮೆಯಿಂದ ಈ ವಿಡಿಯೋವನ್ನು ಶೇರ್​ ಮಾಡುತ್ತಿದ್ದಾರೆ.

ಅನೂಪ್​ ಭಂಡಾರಿ ಅವರು ನಿರ್ದೇಶಿಸಿದ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಜಾಕ್​ ಮಂಜು ಬಂಡವಾಳ ಹೂಡಿದ್ದಾರೆ. ಅಂದುಕೊಂಡ ರೀತಿಯೇ ಮೊದಲ ದಿನ (ಜುಲೈ 28) ಈ ಸಿನಿಮಾಗೆ ಅತ್ಯುತ್ತಮ ಓಪನಿಂಗ್​ ಸಿಕ್ಕಿತು. ಈ ಚಿತ್ರದಿಂದ ನಿರ್ಮಾಪಕರಿಗೆ ಲಾಭ ಆಗಿದೆ. ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ಸಕ್ಸಸ್​ ಮೀಟ್​ ಮಾಡಲಾಗಿದೆ.

ಇದನ್ನೂ ಓದಿ
Image
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
Image
Kichcha Sudeep: ‘ಕನ್ನಡ್​’ ಎಂದರೆ ಸಹಿಸಲ್ಲ ಸುದೀಪ್​; ಹಿಂದಿ ಮಂದಿಗೆ ಕಿಚ್ಚ ಖಡಕ್​ ತಿರುಗೇಟು ನೀಡಿದ ವಿಡಿಯೋ ವೈರಲ್​
Image
Bigg Boss OTT: ಬಿಗ್​​ ಬಾಸ್​ ಶೋ ಹಿಂದೆ ಸುದೀಪ್​ಗೆ ಹಲವು ಚಾಲೆಂಜ್​; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ
Image
Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​

ಮೂಲಗಳ ಪ್ರಕಾರ ‘ವಿಕ್ರಾಂತ್​ ರೋಣ’ ಚಿತ್ರ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಿದ ಈ ಚಿತ್ರದಿಂದ ಸುದೀಪ್​ ಅವರ ವೃತ್ತಿಜೀವನಕ್ಕೆ ಹೊಸ ವೇಗ ಸಿಕ್ಕಿದೆ. ನಿರ್ದೇಶಕ ಅನೂಪ್​ ಭಂಡಾರಿ, ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಸೇರಿದಂತೆ ಎಲ್ಲ ತಂತ್ರಜ್ಞರು ಶೈನ್​ ಆಗುತ್ತಿದ್ದಾರೆ.

ಬಾಲಿವುಡ್​ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ನಟಿಸಿದ್ದಾರೆ. ‘ರಾ ರಾ ರಕ್ಕಮ್ಮ..’ ಹಾಡಿನಲ್ಲಿ ಅವರು ನರ್ತಿಸಿದ ಪರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಜಾನಿ ಮಾಸ್ಟರ್​ ಕೊರಿಯೋಗ್ರಫಿ ಕ್ಲಿಕ್​ ಆಗಿದೆ. ಈ ಸಿನಿಮಾ ಹಿಟ್​ ಆಗುವಲ್ಲಿ ಹಾಡುಗಳ ಕೊಡುಗೆ ಕೂಡ ದೊಡ್ಡದಿದೆ. ಪಾತ್ರವರ್ಗದಲ್ಲಿರುವ ನಿರೂಪ್​ ಭಂಡಾರಿ, ನೀತಾ ಅಶೋಕ್​ ಮುಂತಾದವರಿಗೂ ಈ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕಿದೆ.