Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​

Vikrant Rona | Kichcha Sudeep Fans: ‘ವಿಕ್ರಾಂತ್​ ರೋಣ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ನಡುವೆ ಕಿಚ್ಚ ಸುದೀಪ್​ ಅವರ ಈ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 02, 2022 | 10:14 AM

ನಟ ಸುದೀಪ್​ ಅವರನ್ನು ಕಂಡರೆ ಎಲ್ಲ ವಯೋಮಾನದ ಅಭಿಮಾನಿಗಳಿಗೂ ಸಖತ್​ ಇಷ್ಟ. ಅದರಲ್ಲೂ ವಿಶೇಷವಾಗಿ ಮಕ್ಕಳು ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಅವರ ಸಿನಿಮಾಗಳನ್ನು ನೋಡಿ ಪುಟಾಣಿ ಫ್ಯಾನ್ಸ್​ ಎಂಜಾಯ್​ ಮಾಡುತ್ತಾರೆ. ಕಿಚ್ಚ ಸುದೀಪ್​ (Kichcha Sudeep) ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆ ಆಸೆ ಈಡೇರಲು ಸಮಯ ಕೂಡಿ ಬರಬೇಕು. ಈಗ ವಿಶೇಷ ಅಭಿಮಾನಿಯ ಬಯಕೆಯನ್ನು ಸುದೀಪ್​ ಈಡೇರಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ (Heart Disease) ಬಳಲುತ್ತಿರುವ ಬಾಲಕನ್ನು ಕಿಚ್ಚ ಭೇಟಿ ಮಾಡಿದ್ದಾರೆ. ಆ ಮೂಲಕ ತಮ್ಮ ಪುಟಾಣಿ ಅಭಿಮಾನಿಗೆ ಅವರು ಖುಷಿ ನೀಡಿದ್ದಾರೆ. ಅದೇ ರೀತಿ, ಆಟೋ ಚಾಲಕರೊಬ್ಬರ ಪ್ರೀತಿಗೆ ಸ್ವತಃ ಸುದೀಪ್​ ಮನಸೋತಿದ್ದಾರೆ. ಈ ಎರಡೂ ಘಟನೆಗಳ ಬಗ್ಗೆ ತಿಳಿದ ಬಳಿಕ ತಮ್ಮ ನೆಚ್ಚಿನ ನಟನ ಹೃದಯವಂತಿಕೆ ಕಂಡು ಫ್ಯಾನ್ಸ್​ (Kichcha Sudeep Fans) ಭೇಷ್​ ಎನ್ನುತ್ತಿದ್ದಾರೆ.

ಆಜಾನ್​ ಖಾನ್​ ಎಂಬ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ಕಿಚ್ಚ ಸುದೀಪ್​ ಎಂದರೆ ಪಂಚಪ್ರಾಣ. ‘ಅಭಿನಯ ಚಕ್ರವರ್ತಿ’ಯನ್ನು ಒಮ್ಮೆಯಾದೂ ಭೇಟಿ ಮಾಡಬೇಕು ಎಂದು ಆತ ಕಂಡಿದ್ದ ಕನಸು ಸೋಮವಾರ (ಆಗಸ್ಟ್​ 1) ನನಸಾಗಿದೆ. ‘ವಿಕ್ರಾಂತ್​ ರೋಣ’ ಸಿನಿಮಾದ ನಿರ್ಮಾಪಕ ಜಾಕ್​ ಮಂಜು ಅವರ ಸಹಾಯದಿಂದ ಕಿಚ್ಚ ಸುದೀಪ್ ಅವರನ್ನು ಆಜಾನ್​ ಖಾನ್​ ಭೇಟಿ ಮಾಡಿದ್ದಾನೆ. ಫೇವರಿಟ್​ ಹೀರೋ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಆತ ಸಂಭ್ರಮಿಸಿದ್ದಾನೆ.

ಇನ್ನೊಂದೆಡೆ, ಆಟೋ ಚಾಲಕರೊಬ್ಬರ ಪ್ರೀತಿಯನ್ನು ಕಂಡು ಸುದೀಪ್​ ಖುಷಿಯಾಗಿದ್ದಾರೆ. ಅಭಿಮಾನಿಯ ಆಟೋ ಹಿಂದೆ ‘ಕಿಚ್ಚನ ಮೇಲೆ ಹುಚ್ಚು ಪ್ರೀತಿ’ ಎಂದು ಬರೆದಿರುವ ಸಾಲುಗಳು ಸುದೀಪ್​ ಕಣ್ಣಿಗೆ ಕಾಣಿಸಿದೆ. ಬೆಂಗಳೂರಿನ ಜಯನಗರದಲ್ಲಿ ಕಂಡ ಆ ಆಟೋದ ಚಾಲಕನನ್ನು ಕರೆದು ಸುದೀಪ್​ ಮಾತನಾಡಿಸಿದ್ದಾರೆ. ಅಭಿಮಾನಿಯ ಜೊತೆ ಫೋಟೋಗೆ ಪೋಸ್​ ನೀಡಿ ಚಾಲಕನನ್ನು ಖುಷಿಪಡಿಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ
Image
‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
Image
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು
Image
Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​
Image
ಕ್ರಿಕೆಟ್​ ದಿಗ್ಗಜರಿಂದ ಸಿಕ್ಕ ಗಿಫ್ಟ್​​ಗಳ ಪೂರ್ತಿ ಪಟ್ಟಿ ನೀಡಿದ ಕಿಚ್ಚ ಸುದೀಪ್​; ಇವುಗಳಿಗೆ ಬೆಲೆ ಕಟ್ಟೋಕಾಗಲ್ಲ

ಕಿಚ್ಚ ಸುದೀಪ್​ ಅವರ ಈ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ‘ವಿಕ್ರಾಂತ್​ ರೋಣ’ ಸಿನಿಮಾಗೆ ಸಿಕ್ಕಿರುವ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಜುಲೈ 28ರಂದು ತೆರೆಕಂಡ ಈ ಚಿತ್ರ ಜಯಭೇರಿ ಬಾರಿಸಿದೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಬಾಕ್ಸ್​ ಆಫೀಸ್​ ಗಳಿಕೆಯಲ್ಲೂ ಈ ಚಿತ್ರ ಅನೇಕ ದಾಖಲೆಗಳನ್ನು ಬರೆಯುತ್ತಿದೆ.

ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
ಔರಂಗಜೇಬನ ಸಮಾಧಿ ಸಂಬಂಧಿತ ವಿವಾದ, ನಾಗ್ಪುರದಲ್ಲಿ ಹಿಂಸಾಚಾರ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
Daily Devotional: ದೇವಾಲಯದ ಹೊಸ್ತಿಲು ಮುಟ್ಟಿ ನಮಸ್ಕರಿಸುವುದರ ಹಿಂದಿನ ಫಲ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಸೂರ್ಯ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ