‘ಲವ್​ 360’ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್​

Rachana Inder | Love 360 Movie: ನಟಿಯರಿಗೆ ಚಾಲೆಂಜಿಂಗ್​ ಪಾತ್ರ ಸಿಕ್ಕಾಗ ಹೆಚ್ಚು ಖುಷಿ ಆಗುತ್ತದೆ. ‘ಲವ್​ 360’ ಸಿನಿಮಾದಲ್ಲಿ ರಚನಾ ಇಂದರ್ ಅವರಿಗೆ ಅಂಥ ಪಾತ್ರ ಸಿಕ್ಕಿದೆ.

‘ಲವ್​ 360’ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್​
ರಚನಾ ಇಂದರ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 03, 2022 | 7:15 AM

‘ಲವ್​ ಮಾಕ್ಟೇಲ್​’ ಸಿನಿಮಾದಿಂದ ರಾಜ್ಯಾದ್ಯಂತ ಜನಪ್ರಿಯತೆ ಪಡೆದ ನಟಿ ರಚನಾ ಇಂದರ್​ (Rachana Inder) ಅವರಿಗೆ ಅನೇಕ ಅವಕಾಶಗಳು ಹರಿದುಬರುತ್ತಿವೆ. ‘ಲವ್ ಮಾಕ್ಟೇಲ್​ 2’ (Love Mocktail 2) ಚಿತ್ರದಲ್ಲೂ ಅವರ ಪಾತ್ರ ಗಮನ ಸೆಳೆಯಿತು. ನಂತರ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಕೂಡ ಅವರು ಪ್ರೇಕ್ಷಕರನ್ನು ರಂಜಿಸಿದರು. ಈಗ ರಚನಾ ಇಂದರ್​ ಅವರು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಯಶಸ್ಸು ಪಡೆಯುತ್ತಿರುವ ಅವರು ‘ಹೆಂಗೆ ನಾವು’ ಎನ್ನುತ್ತ ನಗು ಬೀರುತ್ತಿದ್ದಾರೆ. ರಚನಾ ನಟಿಸಿರುವ ಹೊಸ ಸಿನಿಮಾ ‘ಲವ್​ 360’ (Love 360 Movie) ಈಗ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್​ 19ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಅನೇಕ ಕಾರಣಗಳಿಂದ ಈ ಚಿತ್ರ ಗಮನ ಸೆಳೆಯುತ್ತಿದೆ. ಹೊಸ ನಟ ಪ್ರವೀಣ್​ ಈ ಚಿತ್ರಕ್ಕೆ ಹೀರೋ.

ನಟಿಯರಿಗೆ ಚಾಲೆಂಜಿಂಗ್​ ಪಾತ್ರ ಸಿಕ್ಕಾಗ ಹೆಚ್ಚು ಖುಷಿ ಆಗುತ್ತದೆ. ‘ಲವ್​ 360’ ಸಿನಿಮಾದಲ್ಲಿ ರಚನಾ ಇಂದರ್ ಅವರಿಗೆ ಅಂಥ ಪಾತ್ರ ಸಿಕ್ಕಿದೆ. ‘ಮೊಗ್ಗಿನ ಮನಸು’, ‘ಕೃಷ್ಣ ಲೀಲಾ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಶಾಂಕ್​ ಅವರು ‘ಲವ್​ 360’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಅವರ ಸಿನಿಮಾದಲ್ಲಿ ನಾಯಕಿಯರ ಪಾತ್ರಗಳು ತುಂಬ ಚೆನ್ನಾಗಿ ಚಿತ್ರಿತವಾಗಿರುತ್ತವೆ. ಅದ್ದರಿಂದ ಈ ಬಾರಿ ರಚನಾ ಇಂದರ್​ ಅವರು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರ ಆಗುವ ನಿರೀಕ್ಷೆ ಇದೆ.

ಬಿಡುಗಡೆಗೂ ಮುನ್ನವೇ ‘ಲವ್​ 360’ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದ ಹಾಡುಗಳು ಮಿಲಿಯನ್​ಗಟ್ಟಲೆ ವೀವ್ಸ್​ ಪಡೆದು ಬೀಗುತ್ತಿವೆ. ಸಿದ್ ಶ್ರೀರಾಮ್​ ಧ್ವನಿ ನೀಡಿರುವ ‘ಜಗವೇ ನೀನು ಗೆಳತಿಯೇ..’ ಹಾಡು ಸೂಪರ್​ ಹಿಟ್​ ಆಗಿದೆ. ಯೂಟ್ಯೂಬ್​ನಲ್ಲಿ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇತ್ತೀಚೆಗೆ ಬಿಡುಗಡೆಯಾದ ‘ಭೋರ್ಗರೆದು ಕೇಳಿದೆ ಕಡಲು..’ ಹಾಡು ಕೂಡ 10 ಲಕ್ಷ ವೀವ್ಸ್​ ಪಡೆಯುವತ್ತ ಮುನ್ನುಗ್ಗುತ್ತಿದೆ. ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ
Image
ಹಾಡಿನ ಮೂಲಕ ‘ಭೋರ್ಗರೆದು’ ಸದ್ದು ಮಾಡ್ತಿದೆ ‘ಲವ್​ 360’ ಸಿನಿಮಾ; ಸಾಂಗ್ಸ್​ ಸೂಪರ್​ ಹಿಟ್​
Image
‘ಹರಿಕಥೆ ಅಲ್ಲ ಗಿರಿಕಥೆ’ ರಿಲೀಸ್​ ಆದ ಖುಷಿಯಲ್ಲಿ ‘ಹೆಂಗೆ ನಾವು’ ರಚನಾ ಜತೆ ಹೊಸ ಹುಡುಗಿ ತಪಸ್ವಿನಿ ಮಾತು
Image
Darling Krishna: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಶಶಾಂಕ್​
Image
‘ಹೆಂಗೆ ನಾವು..’ ಅಂತ ಫೇಮಸ್​ ಆದ ರಚನಾ ಇಂದರ್​ಗೆ ಜನ್ಮದಿನ; ಇಲ್ಲಿವೆ ಸುಂದರ ಫೋಟೋಗಳು

ರಚನಾ ಇಂದರ್​ ನಟಿಸಿದ ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ಬೇರೆ ನಾಯಕಿಯರು ಕೂಡ ಇದ್ದರು. ಆದರೆ ‘ಲವ್​ 360’ ಸಿನಿಮಾದಲ್ಲಿ ಅವರು ಮುಖ್ಯ ಹೀರೋಯಿನ್​ ಆಗಿ ನಟಿಸಿದ್ದಾರೆ. ಹಾಗಾಗಿ ಅವರಿಗೆ ಈ ಚಿತ್ರ ಸಖತ್​ ಸ್ಪೆಷಲ್​ ಆಗಿದೆ. ಈ ಚಿತ್ರದ ಟೀಸರ್​ನಲ್ಲಿ ಅವರ ಪಾತ್ರದ ಬಗ್ಗೆ ಸುಳಿವು ನೀಡಲಾಗಿದೆ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್