Darling Krishna: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಶಶಾಂಕ್​

Darling Krishna Birthday: ‘ಮೊಗ್ಗಿನ ಮನಸ್ಸು’ ಖ್ಯಾತಿಯ ನಿರ್ದೇಶಕ ಶಶಾಂಕ್​ ಅವರ ಜೊತೆ ಡಾರ್ಲಿಂಗ್​ ಕೃಷ್ಣ ಕೈ ಜೋಡಿಸಿದ್ದಾರೆ. ಇಬ್ಬರ ಕಾಂಬಿನೇಷನ್​ನ ಹೊಸ ಚಿತ್ರ ಅನೌನ್ಸ್​ ಆಗಿದೆ.

Darling Krishna: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಶಶಾಂಕ್​
ಶಶಾಂಕ್​, ಡಾರ್ಲಿಂಗ್​ ಕೃಷ್ಣ
Follow us
TV9 Web
| Updated By: ಮದನ್​ ಕುಮಾರ್​

Updated on:Jun 12, 2022 | 11:39 AM

ನಟ, ನಿರ್ದೇಶಕ ಡಾರ್ಲಿಂಗ್​ ಕೃಷ್ಣ (Darling Krishna) ಅವರಿಗೆ ಇಂದು (ಜೂನ್​ 12) ಜನ್ಮದಿನದ ಸಂಭ್ರಮ. ಕುಟುಂಬದವರ ಜೊತೆ ಅವರು ಈ ದಿನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಅವರಿಗೆ ಶುಭ ಕೋರುತ್ತಿದ್ದಾರೆ. ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬದ (Darling Krishna Birthday) ಪ್ರಯುಕ್ತ ನಿರ್ದೇಶಕ ಶಶಾಂಕ್​ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಶಶಾಂಕ್ (Director Shashank)​ ಅವರ ಬ್ಯಾನರ್​ ಮೂಲಕವೇ ಈ ಸಿನಿಮಾ ಮೂಡಿಬರಲಿದೆ ಎಂಬುದು ವಿಶೇಷ. ‘ಮೊಗ್ಗಿನ ಮನಸ್ಸು’, ‘ಕೃಷ್ಣನ್​ ಲವ್​ ಸ್ಟೋರಿ’, ‘ಕೃಷ್ಣ ಲೀಲಾ’ ಸಿನಿಮಾಗಳ ಮೂಲಕ ಭರ್ಜರಿ ಯಶಸ್ಸು ಕಂಡವರು ಶಶಾಂಕ್​. ಅಂಥ ನಿರ್ದೇಶಕರ ಜೊತೆ ಡಾರ್ಲಿಂಗ್​ ಕೃಷ್ಣ ಕೈ ಜೋಡಿಸುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

‘ಲವ್​ ಮಾಕ್ಟೇಲ್​’ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಡಾರ್ಲಿಂಗ್​ ಕೃಷ್ಣ ಯಶಸ್ಸು ಕಂಡರು. ಅದರ ಸೀಕ್ವೆಲ್​ ಆಗಿ ಬಂದ ‘ಲವ್​ ಮಾಕ್ಟೇಲ್​ 2’ ಕೂಡ ಸೂಪರ್​ ಹಿಟ್​ ಆಯಿತು. ಈ ಗೆಲುವಿನ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಆ ಪೈಕಿ ನಿರ್ದೇಶಕ ಶಶಾಂಕ್​ ಜೊತೆಗಿನ ಸಿನಿಮಾ ಬಗ್ಗೆ ಹೆಚ್ಚು ಕೌತುಕ ಮೂಡಿದೆ.

ಇದನ್ನೂ ಓದಿ
Image
ಆ್ಯಕ್ಷನ್​ ಅವತಾರದಲ್ಲಿ ಡಾರ್ಲಿಂಗ್​ ಕೃಷ್ಣ: ಇಲ್ಲಿದೆ ‘ದಿಲ್​ ಪಸಂದ್​’ ಸಿನಿಮಾದ ಮೇಕಿಂಗ್​ ವಿಡಿಯೋ
Image
‘ಎರಡು ಸಿನಿಮಾ ಹಿಟ್​ ಆದ್ಮೇಲೆ, ಡೈರೆಕ್ಟರ್​ ಬಗ್ಗೆ ಮಾತನಾಡೋಕೆ ಆಗಲ್ಲ’; ಡಾರ್ಲಿಂಗ್​ ಕೃಷ್ಣ ಬಗ್ಗೆ ಮಿಲನಾ ಮಾತು
Image
‘ಲವ್​ ಮಾಕ್ಟೇಲ್​ 3’ ಕೂಡ ಬರುತ್ತಾ? ಗೆದ್ದ ಖುಷಿಯಲ್ಲಿ ಡಾರ್ಲಿಂಗ್​ ಕೃಷ್ಣ ನೀಡಿದ ಉತ್ತರ ಇಲ್ಲಿದೆ..
Image
ಮದುವೆ ಬಳಿಕ ಹೇಗಿದೆ ಮಿಲನಾ-ಡಾರ್ಲಿಂಗ್​ ಕೃಷ್ಣ ದಂಪತಿಯ ಸಿನಿಮಾ ಜರ್ನಿ ಮತ್ತು ಜೀವನ?

ಸದ್ಯ ಈ ಚಿತ್ರಕ್ಕೆ ಶೀರ್ಷಿಕೆ ಅನೌನ್ಸ್​ ಆಗಿಲ್ಲ. ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು ಕೂಡ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಚಿತ್ರದ ಬಗ್ಗೆ ಸುದ್ದಿ ನೀಡಲು ಶಶಾಂಕ್ ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ಇರುವ ‘ಟೇಲ್​ ಆಫ್​ ರಿಯಲ್​ ಮ್ಯಾನ್​’ ಎಂಬ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:39 am, Sun, 12 June 22

ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ