Love 360: ಶಿವಣ್ಣ ಮೆಚ್ಚಿದ ‘ಲವ್​ 360 ಟ್ರೇಲರ್​’: ಚಿತ್ರತಂಡ ಹಾಗೂ ಸಿದ್​ ಶ್ರೀರಾಮ್​ ಬಗ್ಗೆ ವಿಶೇಷ ಮಾತು

Love 360 Trailer: ಶಿವರಾಜ್​ಕುಮಾರ್​ ಅವರಿಗೆ ‘ಲವ್​ 360’ ಸಿನಿಮಾದ ಟ್ರೇಲರ್​ ಇಷ್ಟ ಆಗಿದೆ. ಕಲಾವಿದರ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಅವರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

Love 360: ಶಿವಣ್ಣ ಮೆಚ್ಚಿದ ‘ಲವ್​ 360 ಟ್ರೇಲರ್​’: ಚಿತ್ರತಂಡ ಹಾಗೂ ಸಿದ್​ ಶ್ರೀರಾಮ್​ ಬಗ್ಗೆ ವಿಶೇಷ ಮಾತು
ನಿರ್ದೇಶಕ ಶಶಾಂಕ್​, ಶಿವರಾಜ್​ಕುಮಾರ್, ಸಿದ್​ ಶ್ರೀರಾಮ್​
Follow us
TV9 Web
| Updated By: ಮದನ್​ ಕುಮಾರ್​

Updated on:Aug 04, 2022 | 8:59 AM

ಹೊಸಬರ ಸಿನಿಮಾಗಳಿಗೆ ನಟ ಶಿವರಾಜ್​ಕುಮಾರ್​ (Shivarajkumar) ಅವರು ಸದಾ ಪ್ರೋತ್ಸಾಹ ನೀಡುತ್ತಾರೆ. ಈಗ ಅವರು ಕನ್ನಡದ ‘ಲವ್​ 360’ ಸಿನಿಮಾಗೆ ಬೆಂಬಲ ನೀಡಿದ್ದಾರೆ. ಟ್ರೇಲರ್​ ರಿಲೀಸ್​ ಮಾಡಿಕೊಡುವ ಮೂಲಕ ಹೊಸ ಕಲಾವಿದರ ಬೆನ್ನು ತಟ್ಟಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಶಾಂಕ್ (Director Shashank)​ ನಿರ್ದೇಶನ ಮಾಡಿದ್ದು, ಹೊಸ ನಟ ಪ್ರವೀಣ್​ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ರಚನಾ ಇಂದರ್​ (Rachana Inder) ಜೋಡಿ ಆಗಿದ್ದಾರೆ. ಇಂದು (ಆಗಸ್ಟ್​ 4) ಸಂಜೆ 4 ಗಂಟೆಗೆ ಆನಂದ್​ ಆಡಿಯೋ ಮೂಲಕ ‘ಲವ್ 360’ ಸಿನಿಮಾದ ಟ್ರೇಲರ್​ ವೀಕ್ಷಣೆಗೆ ಲಭ್ಯವಾಗಲಿದೆ. ಅದಕ್ಕೂ ಮುನ್ನ ಟ್ರೇಲರ್​ ನೋಡಿ ಮೆಚ್ಚಿಕೊಂಡಿರುವ ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರು ಇಡೀ ತಂಡಕ್ಕೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಶಿವರಾಜ್​ಕುಮಾರ್​ ಅವರಿಗೆ ‘ಲವ್​ 360’ ಸಿನಿಮಾದ ಟ್ರೇಲರ್​ ಇಷ್ಟ ಆಗಿದೆ. ಕಲಾವಿದರ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಅವರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ‘ನನ್ನ ನೆಚ್ಚಿನ ನಿರ್ದೇಶಕರಲ್ಲಿ ಶಶಾಂಕ್​ ಕೂಡ ಒಬ್ಬರು. ಅವರಲ್ಲಿ ಏನೋ ಒಂದು ವಿಶೇಷವಾದ ಗುಣ ಇದೆ. ನಾವಿಬ್ಬರು ತುಂಬ ದಿನದಿಂದ ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದೇವೆ. ಒಮ್ಮೆ ಅವರು ಸ್ಟೋರಿ ಕೂಡ ಹೇಳಿದ್ದರು. ಅದು ಯಾಕೋ ಟೇಕಾಫ್​​ ಆಗಿಲ್ಲ. ಆದಷ್ಟು ಬೇಗ ಅದನ್ನು ಮಾಡುತ್ತೇವೆ. ಈಗ ಅವರ ನಿರ್ದೇಶನದ ‘ಲವ್​ 360’ ಚಿತ್ರದ ಟ್ರೇಲರ್​ ನೋಡಿ ಖುಷಿ ಆಯಿತು’ ಎಂದು ಶಿವಣ್ಣ ಹೇಳಿದ್ದಾರೆ.

ಇದನ್ನೂ ಓದಿ
Image
‘ಲವ್​ 360’ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ‘ಹೆಂಗೆ ನಾವು’ ಖ್ಯಾತಿಯ ರಚನಾ ಇಂದರ್​
Image
‘ಪದೇಪದೇ 60 ಅಂತಾರೆ’: ವಯಸ್ಸಿನ ಬಗ್ಗೆ ನಿರೂಪಕಿ ಮಾತಾಡಿದ್ದಕ್ಕೆ ಶಿವಣ್ಣನ ರಿಯಾಕ್ಷನ್​ ಹೇಗಿತ್ತು?
Image
ಹಾಡಿನ ಮೂಲಕ ‘ಭೋರ್ಗರೆದು’ ಸದ್ದು ಮಾಡ್ತಿದೆ ‘ಲವ್​ 360’ ಸಿನಿಮಾ; ಸಾಂಗ್ಸ್​ ಸೂಪರ್​ ಹಿಟ್​
Image
Darling Krishna: ಡಾರ್ಲಿಂಗ್​ ಕೃಷ್ಣ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಶಶಾಂಕ್​

‘ಟ್ರೇಲರ್​ ತುಂಬ ಚೆನ್ನಾಗಿದೆ. ಶಶಾಂಕ್​ ಅವರ ವಿಶೇಷತೆ ಏನೆಂದರೆ, ಎಲ್ಲ ನಿರ್ದೇಶಕರು ಸ್ಟಾರ್​ ನಟರನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಶಶಾಂಕ್​ ಅವರು ತಮ್ಮ ಸ್ಟೋರಿಗೆ ಬೇಕಾದ ಸ್ಟಾರ್​ಗಳನ್ನು ಹುಟ್ಟುಹಾಕುತ್ತಾರೆ. ಪ್ರವೀಣ್​ ಹೊಸ ಹುಡುಗ ಅಂತ ಅನಿಸಲ್ಲ. ಅರ್ಜುನ್ ಜನ್ಯ-ಶಶಾಂಕ್​ ಕಾಂಬಿನೇಷನ್​ ಚೆನ್ನಾಗಿದೆ. ಇದರಲ್ಲಿ ಸಿದ್​ ಶ್ರೀರಾಮ್​ ‘ಜಗವೇ ನೀನು ಗೆಳತಿಯೇ..’ ಹಾಡು ಹೇಳಿದ್ದಾರೆ. ಅವರಿಗೋಸ್ಕರ ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ನಾನು ಅವರ ದೊಡ್ಡ ಅಭಿಮಾನಿ. ಅವರ ಧ್ವನಿ ಎಂದರೆ ನನಗೆ ತುಂಬ ಇಷ್ಟ. ಅದರಲ್ಲಿ ಸೆಳೆಯುವ ಗುಣ ಇದೆ. ಈ ಚಿತ್ರದಲ್ಲಿ ಒಂದು ಟ್ರಿಕ್ಕಿ ಚಿತ್ರಕಥೆ ಇದೆ ಅಂತ ನನಗೆ ಅನಿಸುತ್ತಿದೆ’ ಎಂದಿದ್ದಾರೆ ಶಿವಣ್ಣ.

‘ಪ್ರೀತಿ, ಆ್ಯಕ್ಷನ್​, ಸಸ್ಪನ್ಸ್​ ಎಲ್ಲವೂ ಟ್ರೇಲರ್​ನಲ್ಲಿ ಕಾಣಿಸಿದೆ. ಕನ್ನಡ ಚಿತ್ರರಂಗಕ್ಕೆ ಹೊಸಬರು ಬರಬೇಕು. ಅವರಿಗೆ ನಾವು ಹೆಚ್ಚು ಪ್ರೋತ್ಸಾಹ ನೀಡಿದಾಗ ಇನ್ನಷ್ಟು ಪ್ರತಿಭಾವಂತರು ಬರುತ್ತಾರೆ. ಲವ್​ 360 ಚಿತ್ರ ಯಶಸ್ವಿ ಆಗಲಿ. ನಾನು ಕೂಡ ಆಗಸ್ಟ್​ 19ರಂದು ಸಿನಿಮಾ ನೋಡುತ್ತೇನೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ಅವರ ಈ ಮಾತುಗಳಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ.

Published On - 8:59 am, Thu, 4 August 22