‘ಪದೇಪದೇ 60 ಅಂತಾರೆ’: ವಯಸ್ಸಿನ ಬಗ್ಗೆ ನಿರೂಪಕಿ ಮಾತಾಡಿದ್ದಕ್ಕೆ ಶಿವಣ್ಣನ ರಿಯಾಕ್ಷನ್ ಹೇಗಿತ್ತು?
‘ಗಾಳಿಪಟ 2’ ಚಿತ್ರದ ಪ್ರೀ-ರಿಲೀಸ್ ಇವೆಂಟ್ಗೆ ಶಿವರಾಜ್ಕುಮಾರ್ ಅತಿಥಿಯಾಗಿ ಬಂದಿದ್ದರು. ವಯಸ್ಸಿನ ಬಗ್ಗೆ ನಿರೂಪಕಿ ಮಾತಾಡಿದ್ದಕ್ಕೆ ಅವರು ನಗುತ್ತಲೇ ಪ್ರತಿಕ್ರಿಯೆ ನೀಡಿದರು.
ನಟ ಶಿವರಾಜ್ಕುಮಾರ್ (Shivarajkumar) ಅವರ ಎನರ್ಜಿ ಕಂಡರೆ ಎಲ್ಲರಿಗೂ ಅಚ್ಚರಿ ಆಗುತ್ತದೆ. ಅವರಿಗೆ 60 ವರ್ಷ ವಯಸ್ಸು. ಈಗಲೂ ಅವರು ಸಿನಿಮಾಗಳಲ್ಲಿ ಭರ್ಜರಿಯಾಗಿ ಫೈಟ್ ಮಾಡುತ್ತಾರೆ. ಯುವಕರೂ ನಾಚುವಂತೆ ಡ್ಯಾನ್ಸ್ ಮಾಡುತ್ತಾರೆ. ಹಾಗಾಗಿ ಅವರಿಗೆ 60 ವರ್ಷ ಆದರೂ ಕೂಡ ಎನರ್ಜಿ 16ನೇ ವಯಸ್ಸಿನವರ ಹಾಗಿದೆ. ಈ ಬಗ್ಗೆ ಅನೇಕ ವೇದಿಕೆಯಲ್ಲಿ ಪ್ರಸ್ತಾಪ ಆಗುವುದುಂಟು. ‘ಗಾಳಿಪಟ 2’ (Gaalipata 2) ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲೂ ನಿರೂಪಕಿ ಈ ಮಾತು ಹೇಳಿದ್ದರು. ಆಗ ಶಿವಣ್ಣ, ‘ಪದೇಪದೇ 60 ಅಂತಾರೆ’ ಎಂದು ಹೇಳಿ ನಕ್ಕರು.
Latest Videos