AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರೆಸ್ಟೋರೆಂಟ್​​ನಲ್ಲಿ ಕಿಂಗ್​ಫಿಷರ್​​, ಬೀರ್​, ವಿಸ್ಕಿ ಬೆಲೆ ನೋಡಿ ಎಣ್ಣೆ ಪ್ರಿಯರು ಫುಲ್ ಚಿತ್​​ ಆಗಿದ್ದಾರೆ, ಆನಂದಬಾಷ್ಪದಲ್ಲಿ ಮುಳುಗಿದ್ದಾರೆ!

ನೌಕಾಪಡೆ ಅಧಿಕಾರಿಗಳ ಮೆಸ್​ ಒಂದರಲ್ಲಿ ಈ ದರಪಟ್ಟಿ ಕಾಣಿಸಿದೆ. ಮೆನು ಬಿಲ್ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಏಕೆಂದರೆ ಹೊರಗಿನ ಮಾರುಕಟ್ಟೆಯಲ್ಲಿ ನೂರಾರು, ಸಾವಿರಾರು ಬೆಲೆ ಬಾಳುವ ಪಾನೀಯಗಳು ಮತ್ತು ತಿಂಡಿಗಳು ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ.

ಈ ರೆಸ್ಟೋರೆಂಟ್​​ನಲ್ಲಿ ಕಿಂಗ್​ಫಿಷರ್​​, ಬೀರ್​, ವಿಸ್ಕಿ ಬೆಲೆ ನೋಡಿ ಎಣ್ಣೆ ಪ್ರಿಯರು ಫುಲ್ ಚಿತ್​​ ಆಗಿದ್ದಾರೆ, ಆನಂದಬಾಷ್ಪದಲ್ಲಿ ಮುಳುಗಿದ್ದಾರೆ!
ಈ ರೆಸ್ಟೋರೆಂಟ್​​ನಲ್ಲಿ ಕಿಂಗ್​ಫಿಷರ್​​, ಬೀರ್​, ವಿಸ್ಕಿ ಬೆಲೆ ನೋಡಿ ಎಣ್ಣೆ ಪ್ರಿಯರು ಫುಲ್ ಚಿತ್​​
TV9 Web
| Edited By: |

Updated on: Feb 06, 2023 | 12:49 PM

Share

ನೌಕಾಪಡೆಯ ಅಧಿಕಾರಿಗಳ ಮೆಸ್‌ನಲ್ಲಿ ಮದ್ಯದ (Liquor) ಈ ಮೆನು ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಫುಲ್ ಚಿತ್​ ಆಗಿದ್ದಾರೆ! ಏಕೆಂದರೆ ಈ ರೆಸ್ಟೊರೆಂಟ್‌ನಲ್ಲಿ ಕಿಂಗ್‌ಫಿಶರ್ (beer) 44 ರೂ. ಗೆ ಸಿಗುತ್ತಿದ್ದು, ವಿಸ್ಕಿ ದರವೂ (whisky) ಅತ್ಯಂತ ಅಗ್ಗವಾಗಿದೆ. ಸಾಮಾನ್ಯವಾಗಿ ನಾವು ಡ್ರಿಂಕ್ಸ್ , ಫುಡ್, ಸ್ನ್ಯಾಕ್ಸ್ ಗಳಿಗೆ ರೆಸ್ಟೊರೆಂಟ್ ಗೆ ಹೋದಾಗಲೆಲ್ಲ… ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣುಗಳು ಮೆನುವಿನಲ್ಲಿರುವ ದರ ಪಟ್ಟಿಯತ್ತ ಸಾಗುತ್ತದೆ. ನಮ್ಮ ಬಜೆಟ್‌ಗೆ ಸರಿಹೊಂದುವ ವಸ್ತುವನ್ನು ಹುಡುಕಿ, ಆಯ್ಕೆ ಮಾಡುವುದು ವಾಡಿಕೆ. ಆದರೆ ಇಲ್ಲಿ ಮದ್ಯ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಅದನ್ನು ಕಂಡು ಆನಂದತುಂದಲಿತರಾದ ಮದ್ಯ ವ್ಯಸನಿಗಳು ಆನಂದಬಾಷ್ಪ ಸುರಿಸುತ್ತಿದ್ದಾರೆ.

ಹೌದು ಭಾರತೀಯ ನೌಕಾಪಡೆ ಅಧಿಕಾರಿಗಳ ಮೆಸ್​ ಒಂದರಲ್ಲಿ ಈ ದರಪಟ್ಟಿ ಕಾಣಿಸಿಕೊಂಡಿದ್ದು, ಮೆನು ಬಿಲ್ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಏಕೆಂದರೆ ಹೊರಗಿನ ಮಾರುಕಟ್ಟೆಯಲ್ಲಿ ನೂರಾರು, ಸಾವಿರಾರು ಬೆಲೆ ಬಾಳುವ ಪಾನೀಯಗಳು ಮತ್ತು ತಿಂಡಿಗಳು ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಅದಕ್ಕೆ ಸಂಬಂಧಿಸಿದ ಬಿಲ್ ಸದ್ಯ ವೈರಲ್ ಆಗಿದೆ. ಒಮ್ಮೆ ನೀವೂ ನೋಡಿ..

ಅನಂತ್ ಎಂಬ ಟ್ವಿಟರ್ ಬಳಕೆದಾರರು ನೇವಿ ಆಫೀಸರ್ಸ್ ಮೆಸ್ ಶುಲ್ಕದ ಬಿಲ್ ಅನ್ನು ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಪೋಸ್ಟ್‌ಗೆ “ನನ್ನ ಬೆಂಗಳೂರಿನ ಮೆದುಳಿಗೆ ಈ ಬೆಲೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂಬ ಶೀರ್ಷಿಕೆಯನ್ನೂ ಲಗತ್ತಿಸಿದ್ದಾರೆ. ವಿಸ್ಕಿ ಮತ್ತು ಬಿಯರ್‌ನಂತಹ ವಿವಿಧ ಬ್ರಾಂಡ್‌ಗಳ ದುಬಾರಿ ಪಾನೀಯಗಳನ್ನು ಬಜೆಟ್ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಬಿಲ್ ತೋರಿಸುತ್ತದೆ. ವಾಸ್ತವವಾಗಿ.. ಸೇನಾ ಸಿಬ್ಬಂದಿ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿರುವುದರಿಂದ ಅವರಿಗೆ ಕೇಂದ್ರ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ.

ಅದಕ್ಕಾಗಿಯೇ ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಮದ್ಯ ಮತ್ತು ವಿವಿಧ ರೀತಿಯ ದಿನಸಿ ವಸ್ತುಗಳು ಹೊರಗಿನ ಮಾರುಕಟ್ಟೆಗಳಿಗಿಂತ ಕೇವಲ 10 ರಿಂದ 15 ಪ್ರತಿಶತದಷ್ಟು ಅಗ್ಗವಾಗಿ ಲಭ್ಯವಿರುತ್ತವೆ. ಈ ವಿಷಯ ತಿಳಿಯದ ನೆಟಿಜನ್‌ಗಳು ಕಮೆಂಟ್ ಸೆಕ್ಷನ್‌ನಲ್ಲಿ ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ‘ಎಲ್ಲಿ.. ಈ ಬೆಲೆಗಳನ್ನು ಯಾವಾಗ ನೋಡಿದೆ ಬ್ರೋ..? ಎಂದು ಒಬ್ಬರು ಕುತೂಹಲದಿಂದ ಕೇಳಿದ್ದಾರೆ. ‘ಹಹ್ಹ.. ಇದು ಡಿಎಸ್ಒಐ ಮೆನುವಿನಂತಿದೆ. ಬಟ್ ಇಷ್ಟ ಪಡುತ್ತೇನೆ! ಏಕೆಂದರೆ ನಾನು ಬೆಂಗಳೂರಿನಲ್ಲಿ 500 ರೂ.ಗೆ ಕಿಂಗ್ ಫಿಶರ್ ಖರೀದಿಸಿದೆ ಎಂದು ಇನ್ನೊಬ್ಬರು ಹೇಳಿಕೊಂಡಿದ್ದಾರೆ.

ನಾನು ಮುಂಬೈನಲ್ಲಿ ಮೊನ್ನೆ ಬಾರ್ ಮತ್ತು ರೆಸ್ಟೋರೆಂಟ್‌ಗೆ ಹೋಗಿದ್ದೆ. ಅಲ್ಲಿನ ಬೆಲೆಗಳನ್ನು ನೋಡಿ ಬೆಚ್ಚಿಬಿದ್ದಿದ್ದೆ. 60 ML ಗೆ ನಂಬಲಾಗದ ದರಗಳನ್ನು ಹೇಳಿಕೊಂಡಿದ್ದಾರೆ. ಆದರೆ ಅದೆಲ್ಲಾ ಸರಿ ಈ ಅಗ್ಗದ ರೆಸ್ಟೋರೆಂಟ್ ಎಲ್ಲಿದೆ? ಎಂದೂ ಅನೇಕ ಮದ್ಯ ಪ್ರಿಯರು ಪ್ರಶ್ನಾರ್ಥಕ ಚಿಹ್ನೆಯನ್ನು ಮುಂದಿಟ್ಟಿದ್ದಾರೆ. ಬಹುಶಃ ಇದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೇನಾ ಮೆಸ್​​ ಒಂದರಲ್ಲಿ ಇರಬಹುದು ಎಂದು ಮತ್ತೊಬ್ಬರು ಸಮಾಧಾನ ಮಾಡಿಕೊಂಡಿದ್ದಾರೆ.