ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್
Viral Video : ನಮ್ಮ ಹೊಟ್ಟೆಯಷ್ಟೇ ತುಂಬಿದರೆ ಸಾಲದು. ನಮ್ಮ ಸುತ್ತಮುತ್ತಲಿನ ಜೀವಿಗಳ ಬಗ್ಗೆಯೂ ಕರುಣೆ ಇರಬೇಕು. ಇದಕ್ಕೆ ನಿದರ್ಶನ ಈ ವಿಡಿಯೋ. ಆ ಕೋತಿ ಕೆಳಗೆ ಬಾರದು, ಈ ತಾತನಿಗೆ ರೊಟ್ಟಿ ಮೇಲೆ ಎಸೆಯಲಾಗದು. ಆಮೇಲೆ?
Viral Video : ಅನೇಕರಿಗೆ ಪ್ರಾಣಿಗಳ ಸಾಂಗತ್ಯವಿಲ್ಲದೆ ಬದುಕುವುದು ಏನೋ ಖಾಲೀತನ ಉಂಟುಮಾಡುತ್ತದೆ. ಆದ್ದರಿಂದ ಸದಾ ಪ್ರಾಣಿಗಳೊಂದಿಗೆ ಒಡನಾಡಿಕೊಂಡಿರಲು ಮನುಷ್ಯ ಹಾತೊರೆಯುತ್ತಾನೆ. ಇದು ಮನುಷ್ಯನ ಸಹಜ ಸ್ವಭಾವ. ಸಾಧ್ಯವಾದವರು ಮನೆಗಳಲ್ಲಿ ಪ್ರಾಣಿಗಳನ್ನು ಸಾಕುತ್ತಾರೆ. ಉಳಿದವರು ತಮ್ಮ ಸುತ್ತಮುತ್ತಲು ಕಾಣಸಿಗುವ ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವೃದ್ಧರೊಬ್ಬರು ಎತ್ತರದ ಕಟ್ಟಡದ ಮೇಲೆ ಕುಳಿತಿರುವ ಕೋತಿಗೆ ರೊಟ್ಟಿ ಎಸೆಯಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿView this post on Instagram
ಕೊನೆಗೆ ಅವರು ಎಸೆಯುವ ರೊಟ್ಟಿ ಕೋತಿಯನ್ನು ತಲುಪುವುದಿಲ್ಲ. ಆಗ ದಾರಿಹೋಕರು ಆ ರೊಟ್ಟಿಯನ್ನು ಅದಕ್ಕೆ ತಲುಪಿಸಿ ಸಹಾಯ ಮಾಡುತ್ತಾರೆ. ಈ ವಿಡಿಯೋ ಅನ್ನು ಶಿವಂ ಬಾಪಟ್ ಎನ್ನುವವರು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 2ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 1.9 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ : ‘ತಾಯಿ, ಸಿನೆಮಾಗಾಗಿ ಹಾಡುವಿರೆ? ನಿಮ್ಮ ಫೋನ್ ನಂಬರ್ ಕಳುಹಿಸಿ’ ಸೋನು ಸೂದ್ ಟ್ವೀಟ್
ಇಂಥ ದಯಾಮಯಿಗಳು ಇರುವುದರಿಂದಲೇ ಜಗತ್ತು ಉಸಿರಾಡುತ್ತಿದೆ ಎಂದಿದ್ದಾರೆ ಅನೇಕ ನೆಟ್ಟಿಗರು. ಜಗತ್ತಿನಲ್ಲಿ ಇಂಥ ಪ್ರಾಣಿಪ್ರಿಯರ ಸಂತತಿ ಹೆಚ್ಚಬೇಕು ಎಂದಿದ್ದಾರೆ ಅನೇಕರು. ಆದರೆ ಈ ಕೋತಿ ಯಾಕೆ ಕೆಳಗೆ ಬರುತ್ತಿಲ್ಲ ಎಂದು ಕೇಳಿದ್ದಾರೆ ಒಬ್ಬರು. ಈ ವಿಡಿಯೋದಲ್ಲಿರುವ ಎಲ್ಲರಿಗೂ ಆರೋಗ್ಯ ಭಾಗ್ಯ ದೊರೆಯಲಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಪ್ರಾಣಿಗಳು ನಮಗೆ ಅನೇಕ ರೀತಿಯ ಜೀವನಪಾಠಗಳನ್ನು ಕಲಿಸುತ್ತವೆ ಹಾಗೆಯೇ ಇಂಥ ಅಜ್ಜಂದಿರೂ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ