AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಾಯಿ, ಸಿನೆಮಾಗಾಗಿ ಹಾಡುವಿರೆ? ನಿಮ್ಮ ಫೋನ್​ ನಂಬರ್ ಕಳುಹಿಸಿ’ ಸೋನು ಸೂದ್​ ಟ್ವೀಟ್

Sonu Sood : ಎರಡು ವರ್ಷಗಳ ಹಿಂದೆ ಮಗಳೊಬ್ಬಳು ತಾಯಿಗೆ ಹಾಡುವಂತೆ ಕೇಳಿಕೊಳ್ಳುತ್ತಾಳೆ. ಆಗ ಆಕೆ ‘ಮೇರೆ ನೈನಾ ಸಾವನ ಬಾದೋ’ ಹಾಡುತ್ತಾಳೆ. ಮತ್ತೀಗ ಈ ರೀಲ್​ ವೈರಲ್ ಆಗುತ್ತಿದೆ. ಸೋನು ಸೂದ ಈ ಮಹಿಳೆಯ ಹುಡುಕಾಟದಲ್ಲಿದ್ದಾರೆ.

‘ತಾಯಿ, ಸಿನೆಮಾಗಾಗಿ ಹಾಡುವಿರೆ? ನಿಮ್ಮ ಫೋನ್​ ನಂಬರ್ ಕಳುಹಿಸಿ’ ಸೋನು ಸೂದ್​ ಟ್ವೀಟ್
ಮಗಳ ಒತ್ತಾಯಕ್ಕಾಗಿ ಹಾಡಿದ ಅಮ್ಮ
TV9 Web
| Updated By: ಶ್ರೀದೇವಿ ಕಳಸದ|

Updated on:Jan 28, 2023 | 3:47 PM

Share

Viral Video : ತಮ್ಮ ಪಾಡಿಗೆ ತಾವು ಹಾಡಿಕೊಂಡಿರುವ ಅನೇಕ ಸಾಮಾನ್ಯರು ನಮ್ಮ ನಡುವೆ ಇದ್ದಾರೆ. ಅವರೇನು ಶಾಸ್ತ್ರಬದ್ಧವಾಗಿ ಕಲಿತವರಲ್ಲ, ಶಿಸ್ತುಬದ್ಧರಾಗಿ ರಿಯಾಝ್ ಮಾಡಿದವರಲ್ಲ. ವೇದಿಕೆಗಾಗಿ ಹಪಹಪಿಸಿದವರಲ್ಲ. ಕಿವಿಗೆ ಬಿದ್ದಿದ್ದನ್ನು ಚಿತೈಸಿ ತಮ್ಮ ಪಾಡಿಗೆ ತಾವಿದ್ದಲ್ಲೇ ಭಾವಲೋಕದಲ್ಲಿ ಕಳೆದುಹೋಗುವವರು. ಬೇಸರಿಕೆಯ ಮಧ್ಯೆ ಆಸರಿಕೆಗಾಗಿ ಆಗಾಗ ಹಾಡಿಕೊಳ್ಳುವವರು. ವೈರಲ್ ಆದ ಹಳೆಯ ವಿಡಿಯೋ ಒಂದನ್ನು ಹಂಚಿಕೊಂಡ ನಟ, ನಿರ್ಮಾಪಕ ಸೋನು ಸೂದ್​, ಈ ಮಹಿಳೆಯ ದನಿಗೆ ಮನಸೋತಿದ್ದಾರೆ. ತಮ್ಮ ಸಿನೆಮಾದಲ್ಲಿ ಹಾಡಿಸಲು ಈಕೆಗೆ ಅವಕಾಶ ಕೊಡಬೇಕೆಂದು ಈಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.

ಮೇರೆ ನೈನಾ ಸಾವನ ಬಾದೋ, ಈ ಹಾಡನ್ನು ಈಕೆ ಎರಡು ವರ್ಷಗಳ ಹಿಂದೆ ಹಾಡಿದ್ದರು. ಈ ವಿಡಿಯೋ ಆಗ ಸಾಕಷ್ಟು ವೈರಲ್ ಆಗಿತ್ತು. ಈಗದು ಮತ್ತೆ ವೈರಲ್ ಆಗುತ್ತಿದೆ. ಆಕೆ ಅಡುಗೆಮನೆಯಲ್ಲಿ ರೊಟ್ಟಿ ಮಾಡುತ್ತಿರುವಾಗ ಆಕೆಯ ಮಗಳು, ಹಾಡನ್ನು ಹಾಡುವಂತೆ ಕೋರಿಕೊಳ್ಳುತ್ತಾಳೆ. ಆ ಕೋರಿಕೆಯ ಧ್ವನಿಗೆ ಎಂಥವರೂ ಕರಗಬೇಕು, ಅಷ್ಟು ಪ್ರೀತಿ ಮತ್ತು ವಿನಮ್ರ ರೇಕುಗಳಿಂದ ಕೂಡಿದೆ. ಅದಕ್ಕೆ ತಾಯಿ, ಎಷ್ಟು ಸಲ ಹಾಡಿದ್ದೇನಲ್ಲ, ನಾ ಮತ್ತೆ ಈಗ ಹಾಡುವುದಿಲ್ಲ ಎಂದು ಮೊದಲಿಗೆ ನಿರಾಕರಿಸುತ್ತಾಳೆ. ಕೊನೆಗೆ ಮಗಳ ಪ್ರೀತಿಗೆ ಮಣಿದು, ಇದೇ ಕೊನೆಯಸಲ ಎಂಬ ಶರತ್ತಿನ ಮೇಲೆ ಈ ಹಾಡನ್ನು ಹಾಡುತ್ತಾಳೆ.

ಇದನ್ನೂ ಓದಿ : ಚಾಕೊಲೇಟ್​ ವಧು; ದಯವಿಟ್ಟು ಇರುವೆ, ಮಕ್ಕಳಿಂದ ದೂರವಿರಿ ಎಂದ ನೆಟ್​ಮಂದಿ

1976ರಲ್ಲಿ ಬಿಡುಗಡೆಯಾದ ಮೆಹಬೂಬಾ ಸಿನೆಮಾದ ಹಾಡಿದು. ಲತಾ ಮಂಗೇಶ್ಕರ್ ಮತ್ತು ಕಿಶೋರ್​ ಕುಮಾರ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅಷ್ಟೇ ಇಂಪಾಗಿ ಈ ಮಹಿಳೆ ಹಾಡಿದ್ದಾರೆ. ಈಕೆಯಲ್ಲಿ ಸರಸ್ವತಿ ನೆಲೆಸಿದ್ದಾಳೆ ಎಂದು ಅನೇಕರು ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ಕೊನೆಯದಾಗಿ ಹಾಡುತ್ತೇನೆ ಎಂದಿದ್ದಾರಲ್ಲ ಆಕೆ, ಈಗ ನಿಮ್ಮ ಸಿನೆಮಾಗೆ ಹಾಡುತ್ತಾರಾ? ಎಂದು ಒಬ್ಬರು ಸೋನು ಸೂದ್​ಗೆ ಕೇಳಿದ್ದಾರೆ. ನೀವು ರಿಯಲ್ ಹೀರೋ ಸೋನು, ಇಂಥ ಬಡವರಿಗೆ ಅವಕಾಶ ಕಲ್ಪಿಸಬೇಕು ಎಂದಿದ್ದಾರೆ ಅನೇಕರು.

ಇದನ್ನೂ ಓದಿ : ಭಲೇ ಮಗಾ ಮೆಚ್ಚಿದೆ ನಿನ್ನ ಹಾಡು! ನಾಗಾಲ್ಯಾಂಡ್​ ಸಚಿವರು ಹಂಚಿಕೊಂಡ ಈ ವಿಡಿಯೋ ನೋಡಿ

ಇಂಥ ಪ್ರತಿಭಾವಂತರಿಗೆ ಒಂದು ಸಿನೆಮಾದಲ್ಲಿ ಹಾಡಲು ಅವಕಾಶ ಕೊಟ್ಟು, ಆನಂತರ ಅವರನ್ನು ಭ್ರಮೆಗೆ ಕೆಡವಿ ಮೇಲೇಳದಂತೆ ಮಾಡದೇ ಇದ್ದರೆ ಸಾಕು. ಅನೇಕ ರಿಯಾಲಿಟಿ ಷೋಗಳನ್ನು ನೋಡಿದಾಗ ಈ ಆತಂಕ ಸಹಜವಾಗಿ ಕಾಡುತ್ತದೆ. ತಮಗಿದ್ದ ಪ್ರತಿಭೆಯನ್ನು ಶ್ರಮದಿಂದ ಕರಗತ ಮಾಡಿಕೊಂಡು ಬದುಕನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ, ಸಹಾಯ ಮಾಡುವಂತಿದ್ದರೆ ಅವಕಾಶ ಕೊಟ್ಟಿದ್ದಕ್ಕೂ ಸಾರ್ಥಕ. ಇಲ್ಲವಾದಲ್ಲಿ ಸುಮ್ಮನೆ ಅವರ ಪಾಡಿಗೆ ಅವರನ್ನು ಇರಲು ಬಿಡುವುದು ಸೂಕ್ತ.

ಇದನ್ನು ಓದಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:38 pm, Sat, 28 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ