ಭಲೇ ಮಗಾ ಮೆಚ್ಚಿದೆ ನಿನ್ನ ಹಾಡು! ನಾಗಾಲ್ಯಾಂಡ್ ಸಚಿವರು ಹಂಚಿಕೊಂಡ ಈ ವಿಡಿಯೋ ನೋಡಿ
Nagaland : ಜಗತ್ತಿನ ಎಲ್ಲಾ ಮಕ್ಕಳೂ ಹೀಗೆ ತಮ್ಮ ಪ್ರತಿಭೆಗಳ ಮೂಲಕ ತೆರೆದುಕೊಳ್ಳುವ ಅಗತ್ಯವಿದೆ. ಈ ಬಾಲಕ ಹಾಡುವುದನ್ನು ಕೇಳಿದರೆ ನಿಮ್ಮ ಈ ದಿನ ಪಾವನ!
Viral Video : ಈ ಹುಡುಗನಲ್ಲಿ ಸ್ವರಲಯಗತಿ ಇದೆ. ತನ್ಮಯತೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸದಿಂದ ಹಾಡುವ ಛಾತಿ ಇದೆ. ತನ್ನ ಶಾಲೆಯಲ್ಲಿ ಈತ ಹಾಡುತ್ತಿದ್ದಾನೆ. ಖಂಡಿತ ಇವನ ಹಾಡನ್ನು ನೀವು ಕೇಳಲೇಬೇಕು. 43 ಸೆಕೆಂಡುಗಳ ಈ ಹಾಡು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಈ ವಿಡಿಯೋ ಅನ್ನು ನಾಗಾಲ್ಯಾಂಡ್ನ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವೀಟ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ನೆಟ್ಟಿಗರು ಮತ್ತೆ ಮತ್ತೆ ಕೇಳುತ್ತ ತೇಲಾಡುತ್ತಿದ್ದಾರೆ.
Bas itna confidence chahiye life me. ?
ಇದನ್ನೂ ಓದಿ“ज़िन्दगी जीने के लिए नज़रो की नहीं ! नज़ारो की ज़रूरत होती है !!” pic.twitter.com/EcGrUnXtUi
— Temjen Imna Along (@AlongImna) January 18, 2023
‘ಇಷ್ಟು ಆತ್ಮವಿಶ್ವಾಸವಿದ್ದರೆ ಸಾಕು ಬದುಕಿನಲ್ಲಿ’ ಎಂದಿದ್ದಾರೆ ಸಚಿವರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಚಾರ, ತಿಳಿಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರ ಗಮನ ಸೆಳೆಯುವ ಇವರು ಇದೀಗ ಈ ಹುಡುಗನ ಹಾಡಿಗೆ ಮಾರುಹೋಗಿದ್ದಾರೆ. ವಿಡಿಯೋ ಗಮನಿಸಿ, ಈ ಹುಡುಗನ ಸಹಪಾಠಿಗಳು ಇವನ ಹಾಡನ್ನು ಎಂಥ ಖುಷಿಯಿಂದ ಕೇಳುತ್ತಿದ್ದಾರೆ. ಈ ಪುಟ್ಟ ಹುಡುಗನೋ ಜಗತ್ತಿನ ಗೊಡವೆಯೇ ಬೇಡವೆಂಬಂತೆ ತಲ್ಲೀನನಾಗಿ ಹಾಡುತ್ತಿದ್ದಾನೆ. ಎಂಥ ಶುದ್ಧ, ಇಂಪಾದ ಏರುಧ್ವನಿ ಮತ್ತು ಅವನ ಮುದ್ಧಾದ ಗಂಭೀರ ಗತ್!
ಇದನ್ನೂ ಓದಿ : ‘ಯಾರು ಮುದ್ದಾಗಿದ್ದಾರೆ?’ ನಾಗಾಲ್ಯಾಂಡಿನ ಸಚಿವರು ಕೇಳುತ್ತಿದ್ದಾರೆ
ಈ ಹಾಡು ನೇಪಾಳಿ ಭಾಷೆಯಲ್ಲಿದೆ. ವ್ಯಕ್ತಿಯೊಬ್ಬ ತನ್ನ ಅತ್ತೆ-ಮಾವನ ಮನೆಗೆ ಹೋಗಿ ಒಳ್ಳೆಯ ಊಟ ಮತ್ತು ಪಾನೀಯವನ್ನು ಸೇವಿಸುವ ಆಶಯವನ್ನು ವ್ಯಕ್ತಪಡಿಸುತ್ತಿರುವುದರ ಸುತ್ತ ಈ ಹಾಡಿನ ಸಾಹಿತ್ಯ ಹೆಣೆದುಕೊಂಡಿದೆ. ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ನಾಗಾಲ್ಯಾಂಡ್ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ ಸಚಿವ
ಎಂಥ ಆತ್ಮವಿಶ್ವಾಸ ಈ ಹುಡುಗನ ಧ್ವನಿಯಲ್ಲಿ. ಅದೆಷ್ಟು ಸಹಜವಾಗಿ ಹೊಮ್ಮಿದೆ. ಜಗತ್ತಿನ ಎಲ್ಲಾ ಮಕ್ಕಳೂ ಹೀಗೆ ತೆರೆದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ ಒಬ್ಬರು. ಹ್ಯಾಟ್ಸ್ ಆಫ್! ನನಗೆ ಈ ಹುಡುಗ ಆತ್ಮವಿಶ್ವಾಸವನ್ನು ಕಲಿಸುತ್ತಿದ್ದಾನೆ. ನಿಮ್ಮಲ್ಲಿರುವ ಸಾಮರ್ಥ್ಯಗಳ ಮೇಲೆ ವಿಶ್ವಾಸವಿಡಿ ಎಂದು ಹೇಳುತ್ತಿದ್ದಾನೆ ಎಂದಿದ್ದಾರೆ ಮತ್ತೊಬ್ಬರು.
ಈತ ಹಾಡುತ್ತಿರುವ ಭಾಷೆ ಅರ್ಥವಾಗುತ್ತಿಲ್ಲ. ಆದರೆ ಭಾವ ಮತ್ತು ಆತ್ಮವಿಶ್ವಾಸ ಅನನ್ಯ ಎಂದಿದ್ಧಾರೆ ಮಗದೊಬ್ಬರು. ಇದನ್ನು ಕೇಳಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:51 pm, Wed, 18 January 23