‘ಆಪ್ತತೆ’ ಎಂಬ ಅಮೂಲ್ಯ ರತ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ

BIAL : ಹ್ಯಾಪ್ಪಿ ಜರ್ನಿ! ಸೌಜನ್ಯಯುತ ಧ್ವನಿ ಬೆಂಗಳೂರು ವಿಮಾನ ನಿಲ್ದಾಣದ ಶೌಚಾಲಯದಿಂದ ವಾಪಾಸು ಹೊರಡುವ ಪ್ರತಿಯೊಬ್ಬರನ್ನೂ ತಾಕುತ್ತದೆ. ಹಾಂ, ಈ ಅಕ್ಕ ನಮಗೆ ಗೊತ್ತು, ನೆಟ್ಟಿಗರನೇಕರಲ್ಲಿ ಈ ಟ್ವೀಟ್​ ಸಂಚಲನ ಮೂಡಿಸುತ್ತಿದೆ.

‘ಆಪ್ತತೆ’ ಎಂಬ ಅಮೂಲ್ಯ ರತ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಪ್ರಾತಿನಿಧಿಕ ಚಿತ್ರ
Follow us
| Updated By: ಶ್ರೀದೇವಿ ಕಳಸದ

Updated on:Jan 19, 2023 | 11:02 AM

Viral : ನಮ್ಮ ನಮ್ಮ ಕೆಲಸಗಳನ್ನು ತಲೆಯಲ್ಲಿ ತುರುಕಿಕೊಂಡು ರೋಬೋಟ್​ಗಳಂತೆ ಓಡಾಡುವುದೇ ಬದುಕು ಎಂಬಂತೆ ವರ್ತಿಸುತ್ತಿರುತ್ತೇವೆ. ಹಾಗಾಗಿ ಹೃದಯ ಎನ್ನುವುದು ಕೆಲವೊಮ್ಮೆ ಮಂಜುಗಡ್ಡೆಯಂತಾಗಿರುತ್ತದೆ.  ಯಾರಾದರೂ ಅಪರಿಚಿತರು ತಮ್ಮ ಆಪ್ತ, ಸೌಜನ್ಯಯುತ ಮಾತುಗಳಿಂದ ಸ್ಪರ್ಶ ನೀಡಿದಾಗ ಮಾತ್ರ ಅದು ಕರಗಿ ಮನಸ್ಸು ಹಗೂರವಾಗುತ್ತದೆ. ಆ ಹಗೂರವಾದ ಕ್ಷಣವನ್ನು ಒಳಗಿಟ್ಟುಕೊಳ್ಳದೆ ಇತರರೊಂದಿಗೆ ಹಂಚಿಕೊಂಡು ಆ ಪುಳಕವನ್ನು ಹಂಚಿ ಸಂಭ್ರಮಿಸುತ್ತೇವೆ. ಈಗ ವೈರಲ್ ಆಗಿರುವ ಈ ಟ್ವೀಟ್ ಗಮನಿಸಿ. ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿಗೆ ಇದು ಸಂಬಂಧಿಸಿದ್ದು. ಇಲ್ಲಿಯ ಮಹಿಳಾ ಶೌಚಾಲಯದ ಸಿಬ್ಬಂದಿಯ ಸೌಜನ್ಯಯುತ ನಡೆ ಪ್ರಯಾಣಿಕರ ಹೃದಯವನ್ನು ಬೆಚ್ಚಗಾಗಿಸಿದೆ.

ಕೆಲಸದ ಸ್ಥಳಗಳಲ್ಲಿ ಕೆಲಸದ ಹೊರತಾಗಿ ಆಪ್ತವಾಗಿ ಸ್ಪಂದಿಸುವ ಮನೋಭಾವ ನಮ್ಮಲ್ಲಿ ಎಷ್ಟು ಜನಕ್ಕಿದೆ? ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಆದರೆ ನಮ್ಮ ನಡುವೆ ಕೆಲವರಾದರೂ ಹೀಗೆ ಆಪ್ತವಾಗಿ ಸ್ಪಂದಿಸುವ ಮನಸ್ಸನ್ನು ಉಳಿಸಿಕೊಂಡಿದ್ದಾರೆಂದರೆ ಮಾನವೀಯತೆ ಇನ್ನೂ ಉಸಿರಾಡುತ್ತಿದೆ ಎಂದರ್ಥ. ಏನು ಮಾಡುವುದು ಬದುಕು ಎಂದರೆ ನಿರಂತರ ಓಡು ಓಡು ಓಡು ಎಂಬಂತಾಗಿದೆ.

ಇದನ್ನೂ ಓದಿ : ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್

ಬೆಂಗಳೂರಿನ ವಿಮಾನ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿರುವ ಮಹಿಳಾ ಸಿಬ್ಬಂದಿಯೊಬ್ಬರು, ಶೌಚಾಲಯದಿಂದ ವಾಪಾಸು ಹೊರಡುವ ಪ್ರತೀ ಪ್ರಯಾಣಿಕರಿಗೂ ‘ಹ್ಯಾಪ್ಪಿ ಜರ್ನಿ’ ಎಂದು ಹೇಳುತ್ತಾರೆ. ಈ ವಿಷಯವನ್ನು ಪ್ರಯಾಣಿಕರಾದ ಅಮಂಡಾ ಆಕೆಯ ಆಪ್ತತೆಗೆ, ಸೌಜನ್ಯತೆಗೆ ಮನಸೋತು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಬೆದರಿದ ಹರಿಣಿಯರು; ಕುಖ್ಯಾತ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ ವಿಮಾನ ಪ್ರಯಾಣದ ಫೋಟೋ ವೈರಲ್

‘ಆಕೆ ಹೀಗೆ ಪ್ರತಿಯೊಬ್ಬರಿಗೂ ಸಮಾಧಾನದಿಂದ ಹ್ಯಾಪ್ಪಿ ಜರ್ನಿ ಎಂದು ಹೇಳುವ ರೀತಿ ನನ್ನನ್ನು ತುಂಬಾ ಮುದಗೊಳಿಸುತ್ತದೆ. ನನ್ನ ಪ್ರತೀ ಪ್ರಯಾಣವೂ ಖುಷಿಯಿಂದಲೇ ಸಾಗಿದೆ’ ಎಂದಿದ್ದಾರೆ. ಅನೇಕ ನೆಟ್ಟಿಗರು ಈ ಪೋಸ್ಟ್​ ಓದಿ ಪ್ರತಿಕ್ರಿಯಿಸಿದ್ಧಾರೆ. ‘ಹೌದು, ಬೆಂಗಳೂರು ವಿಮಾನ ನಿಲ್ದಾಣದ ವಾಶ್​ರೂಮ್​ನಲ್ಲಿ ಈ ಅಕ್ಕನನ್ನು ನಾನು ಭೇಟಿಯಾಗಿದ್ದೇನೆ. ನನಗೂ ಆಕೆ ಹ್ಯಾಪ್ಪಿ ಜರ್ನಿ ಎಂದು ಹೇಳಿದ್ದಾರೆ’ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ಯಾಕೆ ಇದೆ? ಪ್ರಯಾಣಿಕರು ಅದನ್ನು ತೆರೆದರೆ ಏನಾಗುತ್ತದೆ?

ಮತ್ತೊಬ್ಬರು, ‘ಹೌದು ಕಳೆದ ವಾರವಷ್ಟೇ ಆಕೆಯನ್ನು ನಾನು ಭೇಟಿ ಮಾಡಿದ್ದೆ. ಬಹಳ ಮುದ್ದಾಗಿದ್ಧಾರೆ. ನನಗೂ ಕೂಡ ಹೀಗೇ ಹಾರೈಸಿದರು. ಹೊರಡುವಾಗ ಅವರನ್ನು ಒಮ್ಮೆ ಮಾತನಾಡಿಸಬೇಕೆಂದು ನೋಡಿದೆ. ಆದರೆ ಅವರು ವಾಶ್ರೂಮ್​ ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದರು. ಅವರು ವಾಪಾಸು ಬರುವವರೆಗೂ ಕಾಯ್ದು ವಿದಾಯ ಹೇಳಿ ಹೊರಟೆ’ ಎಂದಿದ್ದಾರೆ. ‘ಒಳ್ಳೆಯ ಹೆಣ್ಣುಮಗಳು ಆಕೆ. ಆಕೆಯನ್ನು ಭೇಟಿಯಾಗಲೆಂದೇ ನಾನು ಶೌಚಾಲಯಕ್ಕೆ ಭೇಟಿಕೊಡುತ್ತೇನೆ’ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

‘ಪುರುಷರ ಶೌಚಾಲಯದಲ್ಲಿಯೂ ಇಂಥ ಆಪ್ತತೆಯ ವಾತಾವರಣ ಇದೆ. ಅಲ್ಲಿಯ ಸಿಬ್ಬಂದಿ, ಟಿಶ್ಯೂ ರೋಲ್​ ಎಳೆದಿಟ್ಟುಕೊಂಡು, ವಾಶ್​ರೂಮಿನಿಂದ ಪ್ರಯಾಣಿಕರು ಹೊರಬರುವುದನ್ನೇ ಸೌಜನ್ಯಯುತವಾಗಿ ಕಾಯುತ್ತ ನಿಂತಿರುತ್ತಾರೆ. ಇದೆಲ್ಲವೂ ಹೃದಯವನ್ನು ಬೆಚ್ಚಗಾಗಿಸುತ್ತದೆ ಎಂದಿದ್ಧಾರೆ’ ಒಬ್ಬರು. ‘ಖಂಡಿತ ಒಪ್ಪುವೆ. ಅಲ್ಲಿಯ ಹೌಸ್​ಕೀಪಿಂಗ್​ ಸಿಬ್ಬಂದಿ ಅತ್ಯಂತ ಶಾಂತರೀತಿಯಲ್ಲಿ ವರ್ತಿಸುತ್ತಾರೆ’ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್​ಟಾಕ್​ ಮಾಡಿದ ಗಗನಸಖಿಯ ವಿಡಿಯೋ ವೈರಲ್

ಬಹುಶಃ ಅಲ್ಲಿಯ ಸಿಬ್ಬಂದಿಗೆ ತರಬೇತಿ ಕೊಟ್ಟಿರಬಹುದು ಎಂದು ಒಬ್ಬರು ನೀರಸವಾಗಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ಆಕೆ ಎಂದಾದರೂ ವಿಮಾನ ಪ್ರಯಾಣ ಮಾಡಿದ್ದಾರೆಯೇ? ಬಹುಶಃ ಆಕೆ ತನ್ನ ನಗರವನ್ನು ಆಕಾಶದಿಂದ ನೋಡುವ ಅಥವಾ ಸಮುದ್ರ ಮೇಲೆ ಹಾರಾಡುವ ಕನಸನ್ನು ಕಾಣುತ್ತಿರುತ್ತಾಳೇನೋ. ಆಕೆಯ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿದಲ್ಲಿ ಅನುಕೂಲವಾಗುತ್ತದೆ ಎಂದು ಮತ್ತೊಬ್ಬ ಪ್ರಯಾಣಿಕರು ಅಕ್ಕರೆಯಿಂದ ಕೇಳಿದ್ದಾರೆ.

ಇದನ್ನೂ ಓದಿ : ಮಗಳೇ ಪೈಲಟ್​; ಅಪ್ಪ ಮಗಳು ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಹೃದಯಸ್ಪರ್ಶಿ ಗಳಿಗೆಗಳು

ಆಪ್ತತೆ ಎನ್ನುವುದು ಎಂಥ ತುಟ್ಟಿಯಾಗಿದೆಯಲ್ಲವೆ? ಇಂಥ ಟ್ವೀಟ್​ಗಳೇ ಇದಕ್ಕೆ ಸಾಕ್ಷಿ. ಎಲ್ಲೋ ಅದು ಹನಿಯಂತೆ ಸಿಕ್ಕರೆ ಸಾಗರದಷ್ಟು ಖುಷಿಪಡುವುದನ್ನು ಮಾತ್ರ ಇನ್ನೂ ಉಳಿಸಿಕೊಂಡಿದ್ದೇವಲ್ಲ ಎನ್ನುವುದೇ ಸಮಾಧಾನ ಪಡುವ ವಿಷಯ. ಆದರೆ ಆಪ್ತತೆ ನಮಗರಿವಿಲ್ಲದೇ ಹೊಮ್ಮುವ ಸಹಜ ಗುಣ. ನಮ್ಮ ಸ್ವಭಾವವದಲ್ಲಿ ಮಿಳಿತವಾದಂಥದ್ದು. ಅದು ನಟಿಸಲು ಬಾರದು. ಶ್ರಮದ ಬದುಕಿದ್ದಲ್ಲಿ ಇದು ಸಹಜವಾಗಿ ಹಾಸುಹೊಕ್ಕಾಗಿರುತ್ತದೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:48 am, Thu, 19 January 23

ತಾಜಾ ಸುದ್ದಿ
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್