ನೇಪಾಳ ವಿಮಾನ ದುರಂತಕ್ಕೂ ಮುನ್ನ ಕೊನೆಯ ಟಿಕ್ಟಾಕ್ ಮಾಡಿದ ಗಗನಸಖಿಯ ವಿಡಿಯೋ ವೈರಲ್
Pokhara Plane Crash : ವಿಮಾನ ಅಪಘಾತವಾಗುವಾಗ ಸೆರೆಯಾದ ವಿಡಿಯೋ ಇಲ್ಲಿದೆ. ಹಾಗೆಯೇ ನೇಪಾಳದ ಜನಪ್ರಿಯ ಟಿಕ್ಟಾಕರ್, ಗಗನಸಖಿ ಈ ವಿಮಾನ ಪತನಗೊಳ್ಳುವ ಮೊದಲು ಚಿತ್ರೀಕರಿಸಿದ ಕೊನೆಯ ಟಿಕ್ಟಾಕ್ ವಿಡಿಯೋ ಕೂಡ ಇಲ್ಲಿದೆ.
Viral Video : ಯೇಟಿ ಏರ್ಲೈನ್ಸ್ನ (Yeti Airlines) ವಿಮಾನವು ಭಾನುವಾರದಂದು ನೇಪಾಳದಲ್ಲಿ ಪತನಗೊಳ್ಳುವ ಮೊದಲು ಗಗನಸಖಿಯೊಬ್ಬಳು ಮಾಡಿದ ಕೊನೆಯ ಟಿಕ್ಟಾಕ್ ವಿಡಿಯೋ ಇದೀಗ ವೈರಲ್ ಆಗಿದೆ. ಈ ದುರಂತದಲ್ಲಿ ಸಾವನ್ನಪ್ಪಿದ ನಾಲ್ಕು ಸಿಬ್ಬಂದಿಗಳ ಪೈಕಿ ಗಗನಸಖಿ ಓಷಿನ್ ಏಲ್ (Oshin Ale) ಕೂಡ ಒಬ್ಬರು. ಇವರು ನೇಪಾಳದ ಪ್ರಸಿದ್ಧ ಟಿಕ್ಟಾಕರ್ (TikToker) ಆಗಿದ್ದರು. ಯಾರಿಗೆ ಗೊತ್ತಿತ್ತು, ಈ ನಗು ಹೀಗೆ ಮಾಸುತ್ತದೆಯೆಂದು. ನೋಡಿ ಏಷಿನ್ ಕೊನೆಯ ವಿಡಿಯೋ.
The Air hostess in #YetiAirlinesCrash
ಇದನ್ನೂ ಓದಿLive life to the fullest as long as you are alive because death is unexpected!
Just sharing TikTok video of Air Hostess Oshin Magar who lost her life in #NepalPlaneCrash today
जहां भी रहो ऐसे ही रहो! Rest in Peace !!?#Nepal #planecrash pic.twitter.com/Bh6DBDnhnt
— Deep Ahlawat ??? (@DeepAhlawt) January 15, 2023
Moneycontrol ವರದಿಯ ಪ್ರಕಾರ, ಪೊಖಾರಾದಲ್ಲಿ ನಿರ್ಮಾಣಗೊಂಡ ಹೊಸ ವಿಮಾನ ನಿಲ್ದಾಣದಲ್ಲಿ ವಿಮಾನವು ಇಳಿಯುವ ಸಂದರ್ಭದಲ್ಲಿ ನದಿಯ ಕಮರಿಗೆ ಬಿದ್ದು ದುರಂತಕ್ಕೀಡಾಗಿದೆ. ಈ ವಿಮಾನದಲ್ಲಿ ಭಾರತೀಯರು ಸೇರಿದಂತೆ 72 ಪ್ರಯಾಣಿಕ ಪೈಕಿ 68 ಜನರು ಸಾವನ್ನಪ್ಪಿದ್ದಾರೆ. ವಿಮಾನವು ದುರಂತಕ್ಕೆ ಈಡಾಗುವ ಹೃದಯವಿದ್ರಾವಕ ಕ್ಷಣಗಳು ಇಲ್ಲಿವೆ.
TW śmierć, katastrofa
Nagranie z samolotu, który rozbił się w Nepalu ukazujące moment wypadku. Hinduskie media potwierdzają, że materiał jest autentyczny. Transmisję z lotu miał prowadzić na żywo Sonu Jaiswal, obywatel Indii. pic.twitter.com/kwHXmx0fo3
— ???? ??????? ?? ????? ? (@azazelowa) January 16, 2023
ಭಾರತೀಯ ಪ್ರಯಾಣಿಕರೊಬ್ಬರು ಅಪಘಾತಕ್ಕೆ ಮೊದಲು ಕೆಲ ಕ್ಷಣಗಳ ಕಾಲ ಫೇಸ್ಬುಕ್ ಲೈವ್ ಸ್ಟ್ರೀಮ್ ಮಾಡಿದ್ಧಾರೆ. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದ ಘಾಝೀಪುರದ ನಾಲ್ವರು ಪ್ರಯಾಣಿಕರಲ್ಲಿ ಒಬ್ಬರಾದ ಸೋನು ಜೈಸ್ವಾಲ್ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇವರೂ ಕೂಡ ಅಪಘಾತದಲ್ಲಿ ಮಡಿದಿದ್ಧಾರೆ.
ಇದನ್ನೂ ಓದಿ : Pokhara Air Crash ಪೋಖರಾದಲ್ಲಿ ನಡೆದದ್ದು ನೇಪಾಳದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ
ನೇಪಾಳದ ಮಾಜಿ ಸಂಸದ ಮತ್ತು ನೇಪಾಳ ಕಾಂಗ್ರೆಸ್ ಕೇಂದ್ರ ಸಮಿತಿಯ ಸದಸ್ಯ ಅಭಿಷೇಕ್ ಪ್ರತಾಪ್ ಷಾ, ‘ನಾನು ಈ ವಿಡಿಯೋ ಅನ್ನು ಸ್ನೇಹಿತನಿಂದ ಪಡೆದುಕೊಂಡಿದ್ದೇನೆ. ಅಪಘಾತದ ನಂತರ ಅವಶೇಷಗಳಡಿ ಈ ಮೊಬೈಲ್ ಸಿಕ್ಕಿದೆ. ಮೊದಲ ಸಲ ಇಂಥ ಭಯಾನಕ ದೃಶ್ಯವನ್ನು ನೋಡಿದ್ದು. ಇದು ತುಂಬಾ ನೋವು ತರುವಂಥ ವಿಷಯ, ದೊಡ್ಡ ದುರಂತ’ ಎಂದು ಅವರು ಟ್ವೀಟ್ ಮಾಡಿದ್ಧಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:44 am, Tue, 17 January 23