AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7.53 ಸೆಕೆಂಡುಗಳಲ್ಲಿ ಇಲ್ಲಿರುವ ಕಾರನ್ನು ಹುಡುಕಿದರೆ ಕಾರ್ ನಿಮಗೇ!

Optical Illusion : ಕೊಟ್ಟ ಸಮಯದಲ್ಲಿ ಉತ್ತರ ಹುಡುಕಲಾಗದೇ ಇದ್ದಾಗ ನಮ್ಮನ್ನು ಬಯ್ಯುತ್ತೀರಿ, ತಮಾಷೆ ಮಾಡುತ್ತೀರಿ. ಪರವಾಗಿಲ್ಲ, ನಾವು ಮಾತ್ರ ನಿಮ್ಮ ಮೆದುಳನ್ನು ಚುರುಕುಗೊಳಿಸುವ ಕೆಲಸವನ್ನು ಮಾಡುತ್ತಲೇ ಇರುತ್ತೇವೆ.

7.53 ಸೆಕೆಂಡುಗಳಲ್ಲಿ ಇಲ್ಲಿರುವ ಕಾರನ್ನು ಹುಡುಕಿದರೆ ಕಾರ್ ನಿಮಗೇ!
ಆಟಿಕೆ ಕಾರನ್ನು ಹುಡುಕಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 16, 2023 | 5:27 PM

Viral Optical Illusion : ಆಪ್ಟಿಕಲ್​ ಇಲ್ಲ್ಯೂಷನ್​ಗೆ ಸಂಬಂಧಿಸಿದ ಸಾಕಷ್ಟು ಸವಾಲುಗಳನ್ನು ಆಗಾಗ ಇದೇ ತಾಣದಲ್ಲಿ ನೋಡುತ್ತಿರುತ್ತೀರಿ ಮತ್ತು ಸವಾಲು ಬಿಡಿಸಲು ಪ್ರಯತ್ನಿಸುತ್ತಿರುತ್ತೀರಿ. ಸೆಕೆಂಡುಗಳ ಲೆಕ್ಕದಲ್ಲಿ ಸಮಯ ಕೊಟ್ಟಾಗ ಅನೇಕರಿಗೆ ಇದು ಕಷ್ಟಕರವಾಗಿದ್ದಿದೆ. ಇನ್ನೂ ಕೆಲವರು ಸಮಯ ಮೀರಿದರೂ ಉತ್ತರ ಹುಡುಕುವುದರಲ್ಲಿ ಆಸಕ್ತಿ ವಹಿಸಿರುತ್ತೀರಿ. ಉತ್ತರ ಸಿಗದಿದ್ದರೂ ನಿಮ್ಮ ಚಿತ್ತವನ್ನು ಏಕಾಗ್ರಗೊಳಿಸಿಕೊಳ್ಳಲು  ಮತ್ತು ಮೆದುಳಿಗೆ ವ್ಯಾಯಾಮ ನೀಡಲು ಇಂಥ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುತ್ತೀರಿ.

ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

ಇದೀಗ ಮತ್ತೊಂದು ಹೊಸ ಚಿತ್ರ ಸವಾಲು ಇಲ್ಲಿದೆ. ನಿಮ್ಮ ದೃಷ್ಟಿಗೂ ಬುದ್ಧಿಗೂ ಮಧ್ಯೆ ಇದು ಸವಾಲನ್ನು ಸೃಷ್ಟಿಸುತ್ತದೆ. ಈ ಬಾತ್ರೂಮಿನಲ್ಲಿರುವ ವಸ್ತುಗಳನ್ನು ಗಮನಿಸಿ. ಟೂತ್​ಬ್ರಷ್​, ಟವೆಲ್​, ಹೇರ್​ ಡ್ರೈಯರ್, ಡಸ್ಟ್​ ಬಿನ್​, ಟಿಶ್ಯೂ ರೋಲ್​, ಶಾಂಪೂ, ಸೋಪ್​, ಪೇಸ್ಟ್​, ಬಾತ್ರೂಮ್ ಕ್ಲೀನರ್ ಹೀಗೆ ಏನೆಲ್ಲ ಸಾಮಾನುಗಳು ಇಲ್ಲಿವೆ. ಇವುಗಳ ಮಧ್ಯೆಯೇ ಆಟಿಕೆಯ ಕಾರೊಂದು ಅಡಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್​

ಕಾಣುತ್ತಿದೆಯಾ ಆಟಿಕೆಯ ಕಾರು? ನೀವು ಯಾವ ವಯಸ್ಸಿನವರೇ ಆಗಿರಲಿ ಆದರೆ ಖಂಡಿತ ಉತ್ತರ ಹುಡುಕುತ್ತೀರಿ ಎಂಬ ವಿಶ್ವಾಸ  ನಮ್ಮದು. ಹೋಗಲಿ ಈಗ ಅವಧಿಯನ್ನು ಹೆಚ್ಚಿಸೋಣ. ಎಂಟು ಸೆಕೆಂಡುಗಳನ್ನು ತೆಗೆದುಕೊಳ್ಳಿ. ಈಗಲೂ ಗೊತ್ತಾಗುತ್ತಿಲ್ಲವಾ? ನೋಡಿಬಿಡಿ ಈ ಕೆಳಗಿನ ಚಿತ್ರ!

Trending Optical Illusion Find the toy car in bathroom

ಉತ್ತರ ಇಲ್ಲಿದೆ!

ಮಾರ್ಕ್ ಮಾಡಿದ ಜಾಗ ಗಮನಿಸಿದ ಮೇಲೆ ನಿಮಗೆ ಹುಡುಕುತ್ತಿರುವ ಚಿತ್ರವು ಸ್ಪಷ್ಟವಾಗಿ ಕಾಣುತ್ತದೆಯಲ್ಲ? ಅದೇ ಆಪ್ಟಿಕಲ್​ ಇಲ್ಲ್ಯೂಷನ್​ಗಾಗಿ ಚಿತ್ರಿಸಿದ ಡ್ರಾಯಿಂಗ್​, ರೇಖಾಚಿತ್ರಗಳ ಗುಟ್ಟು. ನಿಮಗೆ ಕೊಟ್ಟ ಸಮಯದಲ್ಲಿ ಉತ್ತರ ಸಿಕ್ಕಿದ್ದರೆ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ಪ್ರಯತ್ನಿಸಿದರೂ ಹಾಗೆಯೇ ಮಾಡಿ. ಧಾವಂತದ ಜೀವನಶೈಲಿಯಲ್ಲಿ ಒಟ್ಟಿನಲ್ಲಿ ನಿಮ್ಮ ಮೆದುಳಿಗೆ ವಿಶ್ರಾಂತಿ ಕೊಟ್ಟಿದ್ದಕ್ಕಾಗಿ ನಿಮ್ಮನ್ನು ನೀವೇ ಪ್ರೋತ್ಸಾಹಿಸಿಕೊಳ್ಳಿ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:25 pm, Mon, 16 January 23

ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ತಿಲಕವನ್ನಿಟ್ಟುಕೊಂಡು ಸಿದ್ದರಾಮಯ್ಯ ಸಿಂಧೂರ ರಾಮಯ್ಯ ಆಗಿದ್ದಾರೆ: ಪ್ರತಾಪ್
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಕೊಪ್ಪಳ: ಗೃಹ ಲಕ್ಷ್ಮಿ ಹಣ ಕೂಡಿಟ್ಟು ಬೋರವೆಲ್ ಕೊರೆಸಿದ ಅಜ್ಜಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!