ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

SUV : 4.4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಲಾಂಗ್​ ಡ್ರೈವ್ ಹೋದಾಗೆಲ್ಲ ಇಂಥ ಸಾಹಸ ಮಾಡುತ್ತೇನೆ ಎಂದಿದ್ದಾರೆ ಒಬ್ಬರು. ನೀಲಿ ಕಾರು ಆದಷ್ಟು ಬೇಗ ಟಯರ್​ ಬದಲಾಯಿಸಬೇಕಾಗುತ್ತೆ ಎಂದಿದ್ದಾರೆ ಇನ್ನೊಬ್ಬರು.

ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್
ಎದುರುಬದುರಾದ ಎಸ್​ಯುವಿ​ ಕಾರ್​ಗಳು ಸೇತುವೆ ಮೇಲೆ ಚಲಿಸಿದ್ದು ಹೀಗೆ...
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 19, 2023 | 1:38 PM

Viral Video : ಕಣ್​ ಕಾಣಲ್ವೇನೋ ಅಂತ ಅವ. ನಿನಗೆ ಕಾಣಲ್ವಾ ಅಂತ ಇವ. ಅಂಥಾ ಏನು ಅವಸರ ಇದೆ ಅಂತ ಇವ, ನಿನಗೇನಂಥಾ ಅವಸರ ಇದೆ ಅಂತ ಇವ. ಇಂಥ ಬಾಯಿಬಾಯಿ, ಕೈಕೈಮಿಲಾಯಿಸುವ ಯಾವ ಸಂದರ್ಭವೂ ಇಲ್ಲಿ ಉಂಟಾಗುವುದಿಲ್ಲ. ಜನರಂತೂ ಮೊದಲೇ ಇಲ್ಲಿ ಸೇರುವುದಿಲ್ಲ. ಯಾಕೆ ಅಂತ ನೀವೇ ವಿಡಿಯೋ ನೋಡಿ ತಿಳಿದುಕೊಳ್ಳಿ. ಇದು ಡ್ರೈವಿಂಗ್ ಸೀಟ್​ನಲ್ಲಿರುವವರ ಕೌಶಲಕ್ಕೆ ಸಂಬಂಧಿಸಿದ್ದು. ಇಕ್ಕಟ್ಟಾಗಿರುವ ಈ ಸೇತುವೆಯ ಮೇಲೆ ಎರಡೂ ಕಾರ್​ಗಳು ಹೀಗೆ ಎದುರುಬದುರಾಗುತ್ತವೆ. ನಿಮಿಷಗಳ ಲೆಕ್ಕದಲ್ಲಿ ಚೂರು ಪರಸ್ಪರ ಧಕ್ಕೆ ಮಾಡಿಕೊಳ್ಳದೆ ಚಲಿಸುತ್ತವೆ. ನೋಡಿದ ಯಾರಿಗೂ ಅಬ್ಬಾ! ಎನ್ನಿಸದೇ ಇರದು. ನೆಟ್ಟಿಗರು ಹೆವಿ ಡ್ರೈವರ್​ ಎಂದು ಬೆರಗಿನಿಂದ ಹೇಳುತ್ತಿದ್ಧಾರೆ.

ಭಯಂಕರ ವಿಡಿಯೋ ಅಲ್ವಾ?! ಈತನಕ ಇದನ್ನು 4.4 ಮಿಲಿಯನ್​ ಜನರು ನೋಡಿದ್ದಾರೆ. ಅನೇಕರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ಧಾರೆ. ನಾನು ಲಾಂಗ್​ ಡ್ರೈವ್ ಹೋಗುವಾಗೆಲ್ಲ ಎರಡು ಮೂರು ಸಲವಾದರೂ ಇಂಥ ಸಾಹಸವನ್ನು ಮಾಡುತ್ತೇನೆ ಎಂದಿದ್ದಾರೆ ಒಬ್ಬರು. ನೀಲಿ ಕಾರು ಆದಷ್ಟು ಬೇಗ ತನ್ನ ಟಯರ್​ಗಳನ್ನು ಬದಲಾಯಿಸಬೇಕಾಗುತ್ತೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ವಯಸ್ಸು 80, ಮೈಗೆ ಸೀರೆ, ಕೈಗೆ ರಾಷ್ಟ್ರಧ್ವಜ, ಕಾಲಿಗೆ ಸ್ನೀಕರ್ಸ್​​, 4.2 ಕಿ.ಮೀ ಮ್ಯಾರಥಾನ್

ಇದೊಂದು ಪೂರ್ವನಿಯೋಜಿತ ವಿಡಿಯೋ. ಕಾರು ಕಂಪೆನಿಯ ಜಾಹೀರಾತಿಗಾಗಿಯೇ ಇದನ್ನು ಮಾಡಲಾಗಿದೆ ಎಂದಿದ್ಧಾರೆ ಇನ್ನೊಬ್ಬರು. ಅನವಶ್ಯಕ ಸಾಹಸ ಬೇಕಿತ್ತಾ ಎಂದಿದ್ದಾರೆ ಮತ್ತೊಬ್ಬರು. ಜಾಹೀರಾತೋ ಸಾಹಸವೋ ಒಟ್ಟಿನಲ್ಲಿ ಡ್ರೈವರ್ ಕೌಶಲ ನಿಜ ತಾನೇ ಎಂದಿದ್ಧಾರೆ ಮಗದೊಬ್ಬರು. ಅದು ಕೌಶಲ ಅಲ್ಲ ಪ್ರತಿಭೆ ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : ‘ಆಪ್ತತೆ’ ಎಂಬ ಅಮೂಲ್ಯ ರತ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ

ಒಟ್ಟಿನಲ್ಲಿ ಇದೆಲ್ಲವೂ ಸಾಧ್ಯವಾಗಬೇಕೆಂದರೆ, ಪ್ರತಿಭೆ, ಪರಿಶ್ರಮ, ಕೌಶಲ, ಸಾಹಸ ಎಲ್ಲವೂ ಮೇಳೈಸಿದೆ. ಈ ವಿಡಿಯೋ ನೋಡಿ ನೀವೇನಾದರೂ ಇಂಥ ಸಾಹಸಗಳನ್ನು ಪ್ರಯತ್ನಿಸೀರಿ. ಹುಷಾರು!

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 1:36 pm, Thu, 19 January 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್