ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್

Pakistan : ಹಿಮವೂ ಇದೆ, ಎಳೆಬೆಸಿಲೂ ಇದೆ ಈ ಕಣಿವೆಯಲ್ಲಿ. ತನ್ನ ಅಣ್ಣನೊಂದಿಗೆ ಕಟ್ಟಿಗೆ ಆಯಲು ಬಂದಾಗ ಈ ಬಂಗಾರದ ಗೊಂಬೆ ಛಾಯಾಗ್ರಾಹಕರ ಕಣ್ಣಿಗೆ ಬಿದ್ದಿದೆ. ನೋಡಿಬಿಡಿ ನೀವೂ ಈ ಮುದ್ದಾದ ವಿಡಿಯೋ.

ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್
ಪಾಕಿಸ್ತಾನದ ಸ್ಕರ್ಡು ಕಣಿವೆಯಲ್ಲಿ ಕಟ್ಟಿಗೆ ಆಯುತ್ತಿರುವ ಪುಟ್ಟಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jan 19, 2023 | 4:16 PM

Viral Video : ಮಕ್ಕಳ ಯಾವ ಭಾವವೂ ಚೆಂದವೇ. ಎಂಥವರ ಮನಸ್ಸನ್ನೂ ಕ್ಷಣಾರ್ಧದಲ್ಲಿ ಮನಸ್ಸನ್ನು ಅರಳಿಸಿಬಿಡುತ್ತದೆ. ಹಾಗಾಗಿಯೇ ಛಾಯಾಗ್ರಾಹಕರು ಮಕ್ಕಳ ಫೋಟೋ, ವಿಡಿಯೋ ತೆಗೆಯಲು ಸದಾ ಕಾಯುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ (Skardu Valley)  ತನ್ನ ಅಣ್ಣನೊಂದಿಗೆ ಕಟ್ಟಿಗೆ ಆಯಲು ಬಂದ ಈ ಪುಟ್ಟಿಯ ವಿಡಿಯೋ ಮಾಡಿದ್ದಾರೆ ಪಾಕಿಸ್ತಾನಿ ಛಾಯಾಗ್ರಾಹಕ ಇಮ್ತಿಯಾಝ್ ಹುಸೇನ್​.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Imtiaz Hussain (@emtiaazhussain_)

ಹಿಮದಿಂದ ಆವೃತವಾಗಿರುವ ಕಣಿವೆಯಲ್ಲಿ ಎಳೆಬಿಸಿಲಿನಲ್ಲಿ ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಕಟ್ಟಿಗೆ ಆರಿಸುತ್ತಿರುವ ಈ ಹೆಣ್ಣುಮಗು ಪುಟ್ಟದೇವತೆಯಂತೆ ಕಂಗೊಳಿಸುತ್ತಿದೆ. ಈಕೆಯ ಹೆಸರು ಜೈನಾಬ್​​. ಚಳಿಗಾಲದಲ್ಲಿ ಮೈಕಾಯಿಸಿಕೊಂಡು ಬೆಚ್ಚಗಿರಲು ಕಟ್ಟಿಗೆಯನ್ನು ಸಂಗ್ರಹಿಸುತ್ತಿರಬೇಕು.

ಇದನ್ನು ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಈಗಾಗಲೇ ಸುಮಾರು 25,000 ಜನರು ಈ ವಿಡಿಯೋ ನೋಡಿದ್ದಾರೆ. 3,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹಿಮಗಾಲದಲ್ಲಿ ನಾನು ಕಂಡ ಅತೀ ಮುದ್ಧಾದ ವಿಡಿಯೋ ಇದು ಎಂದಿದ್ದಾರೆ ಅನೇಕರು. ಇದೊಂದು ವಿಡಿಯೋ ಸಾಕು ಇಡೀ ದಿನ ನನ್ನನ್ನು ಖುಷಿಯಾಗಿರಲು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಡೊಲ್ಚೆ ಆ್ಯಂಡ್ ಗಬಾನಾದ ಈ ಮಂಗನ ಟೋಪಿಗೆ ಬರೀ ರೂ. 40,000

ಅಬ್ಬಾ ವನದೇವತೆಯೇ ಇರಬೇಕು ಈ ಮಗು ಎಂದಿದ್ಧಾರೆ ಮಗದೊಬ್ಬರು. ಹಾಗೇ ನಡೆದುಕೊಂಡು ಪರದೆಯಿಂದ ಹಾರಿ ನಮ್ಮ ಮನೆಗೆ ಬಂದುಬಿಡು ಪುಟ್ಟಾ ಎಂದು ಇನ್ನೊಬ್ಬರು ಹೇಳಿದ್ದಾರೆ. ಇಂಥ ಚೆಂದದ ವಿಡಿಯೋಗೆ ಧನ್ಯವಾದ ಫೋಟೋಗ್ರಾಫರ್ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್